• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿ ವಶಕ್ಕೆ ಪಡೆಯಲು ತೆರಳಿದ್ದ ಭಾರತೀಯ ಅಧಿಕಾರಿಗಳು ವಾಪಾಸ್: ವರದಿ

|
Google Oneindia Kannada News

ನವದೆಹಲಿ, ಜೂನ್ 4: ವಂಚಕ ಉದ್ಯಮಿ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆಯಲು ಡೊಮಿನಿಕಾಗೆ ತೆರಳಿದ್ದ ಭಾರತೀಯ ಅಧಿಕಾರಿಗಳ ತಂಡ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗದೆ ಭಾರತಕ್ಕೆ ಮರಳಿದೆ ಎಂದು ವರದಿಯಾಗಿದೆ. ಇಬ್ಬರು ಸಿಬಿಐ ಅಧಿಕಾರಿಗಳ ಸಹಿತ ಒಟ್ಟು ಎಂಟು ಅಧಿಕಾರಿಗಳ ತಂಡ ಮೇ 28ಕ್ಕೆ ಡೊಮೆನಿಕಾಗೆ ತೆರಳಿತ್ತು.

ಭಾರತೀಯ ಅಧಿಕಾರಿಗಳನ್ನು ಹೊತ್ತ ವಿಮಾನ ಗುರುವಾರ ರಾತ್ರಿ 8:10ರ ವೇಳೆಗೆ ದ್ವೀಪರಾಷ್ಟ್ರದಿಂದ ವಾಪಾಸಾಗಿದೆ. ಸದ್ಯ ಡೊಮಿನಿಕಾ ಪೊಲೀಸ ವಶದಲ್ಲಿರುವ ಮೆಹುಲ್ ಚೋಕ್ಸಿ ಡೊಮಿನಿಕಾ-ಚೀನಾ ಫ್ರೆಂಡ್‌ಶಿಪ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉದ್ಯಮಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ಉದ್ಯಮಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರವಾಗಿ ಡೊಮಿನಿಕಾದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದು ಎರಡು ನ್ಯಾಯಾಲಯಗಳಲ್ಲಿ ಈ ಬಗ್ಗೆ ವಿಚಾರಣೆಗಳು ನಡೆಯುತ್ತಿದೆ. ಈ ಎರಡು ಪ್ರಕರಣಗಳು ಇತ್ಯರ್ಥವಾಗುವವರೆಗೆ ಮೆಹುಲ್ ಚೋಕ್ಸಿ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆಗಳು ಇಲ್ಲ. ಹೀಗಾಗಿ ಮುಂದಿನ ಒಂದು ತಿಂಗಳ ಕಾಲ ಭಾರತದ ವಶಕ್ಕೆ ಮೆಹುಲ್ ಚೋಕ್ಸಿ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಒಂದು ಪ್ರಕರಣದಲ್ಲಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆಯೇ? ಹಾಗೂ ಅವರನ್ನು ಯಾವ ದೇಶಕ್ಕೆ ವಾಪಾಸ್ ಕಳುಹಿಸಬೇಕು? ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಆ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಚೋಕ್ಸಿ ಬಾರ್ಬುಡಾದ ನಾಗರೀಕತ್ವ ಹೊಂದಿದ್ದು ಭಾರತದ ಪ್ರಜೆಯಲ್ಲ ಹಾಗಾಗಿ ಬಾರ್ಬುಡಾಗೆ ಕಳುಹಿಸಬೇಕೆಂದು ಚೋಕ್ಸಿ ಪರ ವಕೀಲರು ಬಲವಾಗಿ ವಾದಿಸುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ದೇಶಕ್ಕೆ ಪ್ರವೇಶಿಸಿದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಉದ್ಯಮಿ ಮೆಹುಲ್ ಚೋಕ್ಸಿ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ನಡೆಸಿದ್ದು ಬಳಿಕ ಮುಂದೂಡಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.

ಮತ್ತೊಂದೆಡೆ ಪ್ರಕರಣವನ್ನು ವಿಳಂಬಗೊಳಿಸಲು ಮೆಹುಲ್ ಚೋಕ್ಸಿ ಪರ ವಕೀಲರು ಹೈಕೋರ್ಟ್ ಮುಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಅಕ್ರಮ ಪ್ರವೇಶದ ಪ್ರಕರಣದಲ್ಲಿ ಡೊಮಿನಿಕಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಿಸಿದೆ.

English summary
According to sources, the Indian team is leaving Dominica without Mehul Choksi. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X