ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಕಪಿಮುಷ್ಟಿಯಿಂದ ಪಾರು, ನರ್ಸ್ ಗಳು ಭಾರತಕ್ಕೆ

By Mahesh
|
Google Oneindia Kannada News

ನವದೆಹಲಿ, ಜು.4: ಯುದ್ಧ ಪೀಡಿತ ಇರಾಕಿನ ಸುನ್ನಿ ಉಗ್ರರ ಗುಂಪು ಐಎಸ್ಐಎಸ್ ಕೈಗೆ ಸಿಲುಕಿ ನಲುಕಿದ್ದ ಭಾರತೀಯ ಮೂಲದ ನರ್ಸ್ ಗಳಿಗೆ ಹೋದ ಜೀವ ಬಂದಂತಾಗಿದೆ.

ಸುಮಾರು 46 ನರ್ಸ್ ಗಳನ್ನು ಉಗ್ರರು ಮುಕ್ತಗೊಳಿಸಿದ್ದು ಮೊಸುಲ್ ಪಟ್ಟಣದಿಂದ ಎರ್ಬಿಲ್ ನಗರದ ಕಡೆಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕ ನರ್ಸ್ ಗಳು ಕೇರಳ ಮೂಲದವರಾಗಿದ್ದು, ಶನಿವಾರ ಬೆಳಗ್ಗೆ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ(MEA) ಹೇಳಿದೆ.

Indian nurses to reach Kochi at 7 am tomorrow, say govt sources

ತಿಕ್ರಿತ್ ಆಸ್ಪತ್ರೆಯಲ್ಲಿದ್ದ ಕೇರಳದ ನರ್ಸ್ ಗಳನ್ನು ರಹಸ್ಯ ಸ್ಥಳಕ್ಕೆ ಸುನ್ನಿ ಬಂಡುಕೋರರು ಕರೆದೊಯ್ದಿದ್ದರಿಂದ ಆತಂಕದ ಪರಿಸ್ಥಿತಿ ಎದುರಾಗಿತ್ತು. ಉಗ್ರರ ನಡೆ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಸಂಪರ್ಕ ಕಡಿತಗೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಕೂಡಾ ಹೇಳುವ ಮೂಲಕ ಆತಂಕ ಹೆಚ್ಚಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ರಬುದ್ದೀನ್ ಅವರು , 'ನರ್ಸ್ ಗಳು ತಿಕ್ರಿತ್ ಗಿಂತ ಮೊಸುಲ್ ಅಥವಾ ಬೇರೆಡೆ ಇರುವುದೇ ಸೂಕ್ತ' ಎಂದಿದ್ದರು.

ವಿದೇಶಾಂಗ ಇಲಾಖೆ 1 ಸಾವಿರ ಭಾರತೀಯರಿಗೆ ಸ್ವದೇಶಕ್ಕೆ ಹಿಂದಿರುಗಲು ಟಿಕೆಟ್ ವ್ಯವಸ್ಥೆ ಮಾಡಿದೆ. 1,500 ಮಂದಿ ಯುದ್ಧಗ್ರಸ್ತ ರಾಷ್ಟ್ರ ತೊರೆಯಲು ಮುಂದಾಗಿದ್ದಾರೆ. ಇಬ್ರಿಲ್ ಎಂಬ ಸ್ಥಳದಿಂದಲೂ ಕೂಡ ಹಲವಾರು ಭಾರತೀಯರು ಸ್ವದೇಶಕ್ಕೆ ಹಿಂತಿರುಗಲು ಆಸಕ್ತಿ ವಹಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

English summary
46 Indian nurses held captive in war-torn Iraq have been freed by the Sunni militant group ISIS, Kerala government sources have told .The nurses have being taken to Erbil, from where they will take a flight to India. Most of them are from Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X