ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಮರುಭೂಮಿಯಲ್ಲಿ ಭಾರತದ ಬಾಲಕಿಯ ಜೀವ ಸುಟ್ಟ ಬಿಸಿಲು

|
Google Oneindia Kannada News

ಅರಿಜೋನಾ, ಜೂನ್ 15: ಅಮೆರಿಕಕ್ಕೆ ವಲಸೆ ಹೋಗುತ್ತಿದ್ದ ಭಾರತ ಮೂಲದ ಕುಟುಂಬವೊಂದರ ಆರು ವರ್ಷದ ಬಾಲಕಿ ನೀರು ಸಿಗದೆ ಬಿಸಿಲ ಝಳದಿಂದ ಮೃತಪಟ್ಟ ಘಟನೆ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ನಡೆದಿದೆ.

ಕೆಲವೇ ದಿನಗಳಲ್ಲಿ ತನ್ನ ಏಳನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಗುರುಪ್ರೀತ್ ಕೌರ್ ಎಂಬಾಕೆ ಮೃತಪಟ್ಟ ಬಾಲಕಿ. ಆಕೆಯ ಜತೆಗಿದ್ದ ತಾಯಿ ನೀರು ತರುವ ಸಲುವಾಗಿ ತೆರಳಿದ್ದಾಗ ಬಾಲಕಿ ಮೃತಪಟ್ಟಿದ್ದಾಳೆ. ಆಕೆಯ ಮೃತದೇಹ ಬುಧವಾರ ಅಮೆರಿಕದ ಲ್ಯೂಕ್‌ವಿಲ್ಲೆಯಲ್ಲಿ ಗಡಿ ಗಸ್ತು ಪಡೆಯ ಸಿಬ್ಬಂದಿಗೆ ಪತ್ತೆಯಾಗಿದೆ.

 ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು

ಈ ಪ್ರದೇಶದಲ್ಲಿ ಉಷ್ಣತೆ 108 ಡಿಗ್ರಿ ಫ್ಯಾರೆನ್ ಹೀಟ್ (42 ಡಿಗ್ರಿ ಸೆಲ್ಸಿಯಸ್) ಬಿಸಿಲಿತ್ತು. ಈ ಧಗೆ ಸಹಿಸಿಕೊಳ್ಳಲು ಸಾದ್ಯವಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ಅಮೆರಿಕ ಗಡಿ ಗಸ್ತು ಅಧಿಕಾರಿಗಳು ಮತ್ತು ಪೈಮಾ ಕೌಂಟಿಯ ಕಚೇರಿಯ ವೈದ್ಯಕೀಯ ಪರೀಕ್ಷಕರು ತಿಳಿಸಿದ್ದಾರೆ.

ಗುರುಪ್ರೀತ್ ಕೌರ್ ಹೈಪರ್‌ಥೇಮಿಯಾದಿಂದ (ದೇಹ ಸಹಿಸಿಕೊಳ್ಳಬಹುದಾದ ಗರಿಷ್ಠ ಉಷ್ಣಾಂಶದ ಮಿತಿಯನ್ನು ಮೀರಿದ ಪರಿಸ್ಥಿತಿ) ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.

ಮರುಭೂಮಿಯಲ್ಲಿ ಇಳಿಸಿದ್ದ ಕಳ್ಳಸಾಗಣೆದಾರರು

ಮರುಭೂಮಿಯಲ್ಲಿ ಇಳಿಸಿದ್ದ ಕಳ್ಳಸಾಗಣೆದಾರರು

ಐವರು ಭಾರತೀಯರ ಗುಂಪೊಂದನ್ನು ಮಾನವ ಕಳ್ಳಸಾಗಣೆದಾರರು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಮೆರಿಕದ ಗಡಿ ಪಟ್ಟಣ ಲ್ಯೂಕ್‌ವಿಲ್ಲೆಯ 27 ಕಿ.ಮೀ. ದೂರದಲ್ಲಿ ಬಿಟ್ಟು ತೆರಳಿದ್ದರು. ಈ ಐವರೂ ಮಹಿಳೆಯರಾಗಿದ್ದು, ಮೃತಪಟ್ಟ ಬಾಲಕಿಯ ತಾಯಿ ಹಾಗೂ ಒಬ್ಬ ಮಹಿಳೆ ನೀರು ಹುಡುಕಲು ತೆರಳಿದ್ದರು.

ಬಿಸಿಲಿನ ತೀವ್ರತೆಯಿಂದ ಸಾವು

ಬಿಸಿಲಿನ ತೀವ್ರತೆಯಿಂದ ಸಾವು

ಮಾನವ ಕಳ್ಳಸಾಗಣೆದಾರರು ಬಾಲಕಿ ಮತ್ತು ಆಕೆಯ ತಾಯಿ ಸೇರಿದಂತೆ ಭಾರತದ ಕುಟುಂಬಗಳನ್ನು ಲ್ಯೂಕ್‌ವಿಲ್ಲೆಯ ಮರುಭೂಮಿಯಲ್ಲಿ ಇಳಿಸಿ, ಇನ್ನೊಂದು ನಿಗದಿತ ಸ್ಥಳಕ್ಕೆ ನಡೆದುಕೊಂಡು ಬರುವಂತೆ ಸೂಚಿಸಿದ್ದರು. ಈ ವಲಸಿಗರ ತಂಡವು ಅಮೆರಿಕದತ್ತ ನಡೆದುಕೊಂಡು ಸಾಗಿತ್ತು. ಈ ವೇಳೆ ಗುರುಪ್ರೀತ್ ಕೌರ್ ತಾಯಿ ನೀರು ತರುವ ಸಲುವಾಗಿ ಮಗಳನ್ನು ಮತ್ತೊಬ್ಬ ಮಹಿಳೆ ಜತೆ ಬಿಟ್ಟು ಇತರೆ ವಲಸಿಗರ ಜತೆ ತೆರಳಿದ್ದರು. ನೀರಿಗಾಗಿ ತಾಯಿ ಹುಡುಕಾಟ ನಡೆಸುತ್ತಿರುವಾಗ ಬಿಸಿಲಿನ ತೀವ್ರತೆ ತಡೆಯಲಾಗದೆ ಬಾಲಕಿ ಅಸುನೀಗಿದ್ದಾಳೆ.

ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು ಬಿಹಾರದಲ್ಲಿ ಮೆದುಳು ಜ್ವರದಿಂದ ಒಂದೇ ತಿಂಗಳಲ್ಲಿ 57 ಮಕ್ಕಳ ಸಾವು

ಮೃತದೇಹ ಬಿಟ್ಟು ನಾಪತ್ತೆಯಾದ ಮಹಿಳೆ

ಮೃತದೇಹ ಬಿಟ್ಟು ನಾಪತ್ತೆಯಾದ ಮಹಿಳೆ

ನೀರಿಗಾಗಿ ಹುಡುಕಾಟ ನಡೆಸಿದ್ದ ತಾಯಿ, ಕೊನೆಗೆ ಮಗಳು ಎಲ್ಲಿ ಇದ್ದಾಳೆ ಎಂಬುದು ಗೊತ್ತಾಗದೆ ಸುಮಾರು 22 ಗಂಟೆ ಹುಡುಕಾಟ ನಡೆಸಿದ್ದರು. ಅವರ ಹೆಜ್ಜೆಗುರುತುಗಳನ್ನು ಕಂಡು ಅನುಮಾನಗೊಂಡು ಹಿಂಬಾಲಿಸಿ ಬಂದ ಗಡಿ ಗಸ್ತುಪಡೆ ಸಿಬ್ಬಂದಿಗೆ ತಾಯಿ ಸಿಕ್ಕಿಬಿದ್ದರು. ಅವರು ನೀಡಿದ ಮಾಹಿತಿ ಆಧಾರದಲ್ಲಿ ಹುಡುಕಾಟ ನಡೆಸಿದಾಗ ನಾಲ್ಕು ಗಂಟೆಗಳ ಬಳಿಕ ಬಾಲಕಿ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ತನ್ನ ಎಂಟು ವರ್ಷದ ಮಗುವಿನೊಂದಿಗೆ ಅಮೆರಿಕದತ್ತ ಸಾಗುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಆಫ್ರಿಕಾ-ಏಷ್ಯಾ ವಲಸಿಗರು

ಆಫ್ರಿಕಾ-ಏಷ್ಯಾ ವಲಸಿಗರು

ಮೆಕ್ಸಿಕೋ ಗಡಿ ಮೂಲಕ ಅಮೆರಿಕದೊಳಗೆ ಪ್ರವೇಶಿಸುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಆಫ್ರಿಕಾ ಮತ್ತು ಏಷ್ಯಾದಿಂದ ಸಾವಿರಾರು ವಲಸಿಗರು ಮಾನವ ಕಳ್ಳಸಾಗಣೆದಾರರ ನೆರವಿನಿಂದ ಮೆಕ್ಸಿಕೋ ಮೂಲಕ ಮರುಭೂಮಿಯನ್ನು ಹಾದು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಅಲ್ಲಿ ನೀರು ಸಿಗದೆ ಬಸವಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಗಡಿ ಗಸ್ತು ಪಡೆ ತಿಳಿಸಿದೆ.

English summary
An Indian girl of six years old died of heat stroke in US border town of Lukeville in Arizona desert when her mother went to look for water with other migrants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X