ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿಯ ಹೊಸ ತೆರಿಗೆ ನೀತಿಯಿಂದ ಒಂಟಿಯಾಗಲಿದ್ದಾರೆ ಭಾರತೀಯ ಗಂಡಸರು!

By ವಿಕಾಸ್ ನಂಜಪ್ಪ
|
Google Oneindia Kannada News

ರಿಯಾದ್, ಜೂನ್ 21: ಗಲ್ಫ್ ದೇಶ ಸೌದಿ ಅರೇಬಿಯಾ ಹೊಸ ಕೌಟುಂಬಿಕ ತೆರಿಗೆ ನೀತಿಯನ್ನು ಹೊರತಂದಿದೆ. ಇದರ ಪ್ರಕಾರ ಅವಲಂಬಿತರ ಮೇಲೆ ತಿಂಗಳಿಗೆ 100 ರಿಯಾಲ್ ತೆರಿಗೆಯನ್ನು ಸೌದಿ ಸರಕಾರ ವಿಧಿಸಿದೆ. ಅಂದರೆ ಸುಮಾರು ತಿಂಗಳಿಗೆ 1700 ರೂಪಾಯಿಗಳು.

ಇದು ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಹೊರೆಯಾಗಿದ್ದು, ಸದ್ಯದಲ್ಲೇ ತಮ್ಮ ಹೆಂಡತಿ ಮಕ್ಕಳು ಹಾಗೂ ಪೋಷಕರನ್ನು ಭಾರತಕ್ಕೆ ರವಾನಿಸುವ ಸಾಧ್ಯತೆ ಇದೆ. ಇದರಿಂದ ಸೌದಿ ಅರೇಬಿಯಾದಲ್ಲಿರುವ ಗಂಡಸರು ಒಂಟಿಯಾಗಲಿದ್ದಾರೆ.

 Indian men in Saudi set to become bachelors as new family tax regime kicks in

ಸದ್ಯ ಸೌದಿ ಅರೇಬಿಯಾದಲ್ಲಿ ಭಾರತೀಯ ಮೂಲದ 41 ಲಕ್ಷ ಜನರಿದ್ದಾರೆ. ಇವರಿಗೆಲ್ಲಾ ಸೌದಿ ಅರೇಬಿಯಾದ ಈ ಹೊಸ ನೀತಿಯ ಬಿಸಿ ತಟ್ಟಲಿದೆ.

ಸದ್ಯ ತಿಂಗಳಿಗೆ 5,000 ರಿಯಾಲ್ ಗಳಿಗಿಂತ ಹೆಚ್ಚಿನ ಸಂಬಳ ಇರುವವರಿಗೆ ಮಾತ್ರ ಸೌದಿ ಅರೇಬಿಯಾ ಕೌಟುಂಬಿಕ ವೀಸಾ ನೀಡುತ್ತದೆ. ಉಳಿದವರಿಗೆ ವೀಸಾ ಕೂಡ ನೀಡುತ್ತಿಲ್ಲ. ಒಂದೊಮ್ಮೆ ಹೆಂಡತಿ ಮತ್ತು ಒಂದು ಮಗುವನ್ನು ಭಾರತೀಯರೊಬ್ಬರು ಹೊಂದಿದ್ದೇ ಆದಲ್ಲಿ ತಿಂಗಳಿಗೆ ಸುಮಾರು 3400 ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಮಾತ್ರವಲ್ಲ ಪ್ರತಿ ವರ್ಷ ಈ ಕೌಟುಂಬಿಕ ತೆರಿಗೆಯಲ್ಲಿ 100 ರಿಯಾಲ್ ಏರಿಕೆ ಮಾಡುವ ಸಾಧ್ಯತೆಯೂ ಇದೆ. ಅಂದರೆ 2020ರ ಅಂತ್ಯಕ್ಕೆ ಒಟ್ಟು 400 ರಿಯಾಲ್ ತೆರಿಗೆ ಹೊರೆ ಗಂಡನ ತಲೆಗೇರುವ ಸಾಧ್ಯತೆ ಇದೆ.

"ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಹೆಚ್ಚಿನ ಭಾರತೀಯರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಬಾರತಕ್ಕೆ ಕಳುಹಿಸಲು ಆರಂಭಿಸಿದ್ದಾರೆ. ಸೌದಿ ತೆರಿಗೆ ನೀತಿ ಅವರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ," ಎನ್ನುತ್ತಾರೆ ಸೌದಿಯಿಂದ ರಜೆಗೆ ಮನೆಗೆ ಮರಳಿರುವ ತೆಹ್ಲಾ ಮೊಹಮ್ಮದ್.

ಅವರಿ ಈಗಾಗಲೇ ತಮ್ಮ ಕುಟುಂಬವನ್ನು ಭಾರತಕ್ಕೆ ಕರೆಸಿಕೊಂಡಿದ್ದು ಒಬ್ಬರೇ ವಾಪಸ್ ಹೋಗುವ ಯೋಜನೆಯಲ್ಲಿದ್ದಾರೆ.

ಇನ್ನು ವಾಸಕ್ಕೆ ಅನುಮತಿ ಪಡೆಯುವ ವೇಳೆಯೇ ಈ ತೆರಿಗೆಯನ್ನು ಮುಂಗಡವಾಗಿ ನೀಡಬೇಕು. ಒಂದೊಮ್ಮೆ ಹೆಂಡತಿ 1 ವರ್ಷ ಉಳಿಯುವುದಾದರೆ 1200 ರಿಯಾಲ್ ಗಳನ್ನು ಮುಂಗಡವಾಗಿ ಪಾವತಿಸಬೇಕು.

English summary
Several Indians living in Saudi Arabia are bracing for financial trouble. The Saudi Government will start imposing a dependent fee of 100 riyals or Rs 1,700 every month. While this will prove to be a huge financial burden on the Indians employed in Saudi Arabia, they are now planning on sending their dependents back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X