ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಭಾರತೀಯನ ಹತ್ಯೆ, ವಾರದಲ್ಲಿ ಎರಡನೇ ಘಟನೆ

ಅಮೆರಿಕಾದ ಜಾರ್ಜಿಯಾದಲ್ಲಿ 52 ವರ್ಷದ ಭಾರತೀಯ ಅಮೆರಿಕನ್ ವ್ಯಕ್ತಿಯೊಬ್ಬನನ್ನು ಮೂರು ಮುಸುಕುಧಾರಿ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡಿದ್ದಾರೆ

|
Google Oneindia Kannada News

ವಾಷಿಂಗ್‌ಟನ್‌, ಜನವರಿ 25: ಅಮೆರಿಕಾದ ಜಾರ್ಜಿಯಾದಲ್ಲಿ 52 ವರ್ಷದ ಭಾರತೀಯ ಅಮೆರಿಕನ್ ವ್ಯಕ್ತಿಯೊಬ್ಬನನ್ನು ಮೂರು ಮುಸುಕುಧಾರಿ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದೊಳಗೆ ಯುಎಸ್‌ನಲ್ಲಿ ಭಾರತೀಯರನ್ನು ಕೊಂದ ಎರಡನೇ ಘಟನೆಯಾಗಿದೆ. ಈ ಘಟನೆಯು ಜನವರಿ 20ರಂದು ಜಾರ್ಜಿಯಾದ ಹಾರ್ಟ್ಲಿ ಬ್ರಿಡ್ಜ್ ರಸ್ತೆ ಬಳಿಯ ಥೊರೊಬ್ರೆಡ್ ಲೇನ್‌ನಲ್ಲಿ ನಡೆದಿದೆ. ಪಿನಾಲ್ ಪಟೇಲ್ ಮತ್ತು ಅವರ ಕುಟುಂಬವು ಕೆಲಸದಿಂದ ಮನೆಗೆ ಬಂದರು. ಮೂವರು ಮುಸುಕುಧಾರಿ ವ್ಯಕ್ತಿಗಳು ಬಂದೂಕುಗಳೊಂದಿಗೆ ಎದುರಿಸಿದರು ಎಂದು ಬಿಬ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಮಹಾಪತನದತ್ತ ಪಾಕಿಸ್ತಾನ: ನೌಕರರ ವೇತನ, ಅಧಿಕಾರಿಗಳ ಉದ್ಯೋಗ ಕಡಿತಕ್ಕೆ ನಿರ್ಧಾರ- ಕೈಕೊಟ್ಟ ಚೀನಾ, ಇನ್ನೇನು ಕಾದಿದೆ ಮುಂದೆ?ಮಹಾಪತನದತ್ತ ಪಾಕಿಸ್ತಾನ: ನೌಕರರ ವೇತನ, ಅಧಿಕಾರಿಗಳ ಉದ್ಯೋಗ ಕಡಿತಕ್ಕೆ ನಿರ್ಧಾರ- ಕೈಕೊಟ್ಟ ಚೀನಾ, ಇನ್ನೇನು ಕಾದಿದೆ ಮುಂದೆ?

ಪಿನಾಲ್ ಪಟೇಲ್ ಅವರನ್ನು ಮೂವರನ್ನು ಮುಸುಕುಧಾರಿಗಳು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದರು. ಬಳಿಕ ಅವರ ಕುಟುಂಬದ ಮೇಲೆ ಗುಂಡು ಹಾರಿಸಲಾಯಿತು. ಪೊಲೀಸರು ಸ್ಥಳಕ್ಕೆ ಬಂದಾಗ ಪಿನಾಲ್ ಪಟೇಲ್‌, ಅವರ ಪತ್ನಿ ರೂಪಲ್ಬೆನ್ ಪಟೇಲ್ ಮತ್ತು ಮಗಳು ಭಕ್ತಿ ಪಟೇಲ್ ಅವರ ಮನೆಯ ಡ್ರೈವಾಲ್‌ನಲ್ಲಿ ಗುಂಡೇಟಿನಿಂದ ಬಳಲುತ್ತಿರುವುದನ್ನು ಅವರು ಪತ್ತೆಹಚ್ಚಿದರು ಎಂದು ಜಾರ್ಜಿಯಾ ಪೊಲೀಸರು ಹೇಳಿಕೆ ತಿಳಿಸಿದೆ.

Indian killed in US, Georgia, second incident in a week

ಬಳಿಕ ಮೂವರನ್ನೂ ಏಟ್ರಿಯಮ್ ಹೆಲ್ತ್‌ಗೆ ಸಾಗಿಸಲಾಯಿತು. ಅಲ್ಲಿ ಪಿನಾಲ್ ನಿಧನರಾಗಿದ್ದಾರೆ ಎಂದು ಡೆಪ್ಯೂಟಿ ಕರೋನರ್ ಲುವಾನ್ ಸ್ಟೋನ್ ಅವರು ಘೋಷಿಸಿದರು. ರೂಪಲ್ಬೆನ್ ಮತ್ತು ಅವರ ಮಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಆ ಮೂವರೂ ಮುಸುಕುಧಾರಿ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ನಾಲ್ಕನೇ ವ್ಯಕ್ತಿ ಕಪ್ಪು ಬಣ್ಣದ ವಾಹನದಲ್ಲಿ ಕಾಯುತ್ತಿದ್ದ ಅಲ್ಲಿಗೆ ಅವರು ಓಡಿದರು.

ನಂತರ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಕುಟುಂಬದಿಂದ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಿಲ್ಲ ಎಂದು ತಿಳಿಸಲಾಗಿದೆ. ತನಿಖಾಧಿಕಾರಿಗಳು ನಾಲ್ಕು ಬಾಗಿಲಿನ ವಾಹನವನ್ನು ಪತ್ತೆಹಚ್ಚಲು ಮತ್ತು ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡಲು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.

ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಭಾನುವಾರ ಚಿಕಾಗೋದಲ್ಲಿ ನಡೆದ ದರೋಡೆ ವೇಳೆ ಗುಂಡು ಹಾರಿಸಿ 23 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದನು. ಸೌತ್ ಸೈಡ್‌ನಲ್ಲಿರುವ ಪ್ರಿನ್ಸ್‌ಟನ್ ಪಾರ್ಕ್‌ನಲ್ಲಿ ದೇವಶಿಶ್ ನಂದೆಪು ಗುಂಡೇಟಿಗೆ ಬಲಿಯಾಗಿದ್ದು, ಅವರ ಸ್ನೇಹಿತ ಕೆ ಸಾಯಿ ಚರಣ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

English summary
A 52-year-old Indian-American man was shot dead by three masked men in Georgia, USA. His wife and daughter were injured in the incident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X