ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೇನೆ ಮತ್ತು ಉಗ್ರರ ಸೀಕ್ರೆಟ್ ಕೋಡ್ಸ್ ಭೇದಿಸಿದ ಭಾರತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದಲ್ಲಿ ಶಾಂತಿ ಕದಡಲು ಹಲವು ಪ್ರಯತ್ನಗಳನ್ನು ನಡೆಸಿದೆ.

ಆ ಪ್ರಯತ್ನಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನ ಸೈನಿಕರು ಮತ್ತು ಪಾಕಿಸ್ತಾನ ಆಶ್ರಯ ನೀಡಿದ ಭಯೋತ್ಪಾದಕರು ಬಳಸುತ್ತಿದ್ದ ಕೆಲವು ಸೀಕ್ರೆಟ್ ಕೋಡ್ ಗಳನ್ನು ಭೇದಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಕಾಶ್ಮೀರಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ತಂತ್ರಕಾಶ್ಮೀರಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ತಂತ್ರ

ಭಾರತೀಯ ಸೇನೆಯ ಬಲೆಗೆ ಬೀಳದೆ ತಪ್ಪಿಸಿಕೊಂಡು, ಕಾಶ್ಮೀರದ ಶಾಂತಿ ಕದಡುವುದು ಹೇಗೆ ಎಂಬ ಬಗ್ಗೆ ಸಿಕ್ರೇಟ್ ಕೋಡ್ ಗಳ ಮೂಲಕ ಪಾಕ್ ಸೈನಿಕರು ಮತ್ತು ಭಯೋತ್ಪಾದಕರು ಸಂವಹನ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.

Indian Intelligence Department Intercepts Code Words Used By Pakistan

ಈ ಸಂವಹನಕ್ಕಾಗಿ ಪಾಕಿಸ್ತಾನದ ರಾಷ್ಟ್ರಗೀತೆಯ ಪದಗಳನ್ನು ಅವರು ಬಳಸುತ್ತಿದ್ದುದು ತಿಳಿದುಬಂದಿದೆ.

"--ಜೆಇಎಂ(66/88), ಎಲ್ ಇಟಿ(A3) ಅಲ್ ಬದರ್ (D9) ಎಂಬಿತ್ಯಾದಿ ಕೋಡ್ ಗಳನ್ನು ಉಗ್ರರು ಮತ್ತು ಸೈನಿಕರು ಬಳಲುತ್ತಿದ್ದರು ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿವೆ.

ಪಾಕಿಸ್ತಾನ ನೆಲದ ಮೇಲೆ ಕಣ್ಣಿಟ್ಟಿವೆ ಇಸ್ರೋ ಸ್ಯಾಟಲೈಟ್‌ಗಳು!ಪಾಕಿಸ್ತಾನ ನೆಲದ ಮೇಲೆ ಕಣ್ಣಿಟ್ಟಿವೆ ಇಸ್ರೋ ಸ್ಯಾಟಲೈಟ್‌ಗಳು!

ಪಾಕ್ ಆಕ್ರಮಿತ ಕಾಶ್ಮೀರದ ಎಫ್ಎಂ ತರಂಗಗಳನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿರುವ ತಮ್ಮ ಸಹವರ್ತಿಗಳಿಗೆ ಪಾಕ್ ಸೇನೆ ಮತ್ತು ಉಗ್ರರು ಕೋಡ್ ಪದಗಳನ್ನು ಕಳಿಸುತ್ತಿದ್ದಾರೆ ಎಂಬುದು ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿದೆ.

ಎರಡು ತಿಂಗಳಷ್ಟೇ ಪಾಕಿಸ್ತಾನ ಹೊಸ ಎಂಎಂ ಸ್ಟೇಷನ್ ಅನ್ನು ಆರಂಭಿಸಿದ್ದು, ಇದರ ಮೂಲಕ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಉಗ್ರರಿಗೆ ಅಗತ್ಯ ಮಾಹಿತಿಯನ್ನು ರವಾನಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಲಣಭ್ಯವಾಗಿದೆ.

English summary
Indian Intelligence Department Intercepts code Words used by Pakistan Army and Terrorists,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X