• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಂಗ್ಲಾದೇಶಕ್ಕೆ ಕೊವಿಶೀಲ್ಡ್ ಲಸಿಕೆಯ ಉಡುಗೊರೆ ನೀಡಿದ ಭಾರತ

|

ಢಾಕಾ, ಜನವರಿ.19: ನೆರೆಯ ಬಾಂಗ್ಲಾದೇಶಕ್ಕೆ 20 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಜನವರಿ.20ರ ಬುಧವಾರ ಕಳುಹಿಸಿ ಕೊಡಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ತಿಳಿಸಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಮತ್ತು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ನಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ಲಸಿಕೆ ಬುಧವಾರ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಹಜ್ರತ್ ಶಾಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?

ಕೊವಿಶೀಲ್ಡ್ ಲಸಿಕೆ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಢಾಕಾದಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಾಂಗ್ಲಾದೇಶ ಆರೋಗ್ಯ ಇಲಾಖೆಯ ನಿರ್ದೇಶಕ ಪ್ರೊ. ಅಬುಲ್ ಬಷಾರ್ ಮೊಹಮ್ಮದ್ ಖುರ್ಷಿದ್ ಅಲಂ ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಭಾರತದ ಉಡುಗೊರೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಭಾರತೀಯ ಸರ್ಕಾರವು ಬಾಂಗ್ಲಾದೇಶಕ್ಕೆ ಸ್ವಲ್ಪ ಪ್ರಮಾಣದ ಕೊವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ನೀಡುತ್ತಿದೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಜಾಹಿದ್ ಮಾಲೆಕ್ಯೂ ತಿಳಿಸಿದ್ದಾರೆ. ತದನಂತರದಲ್ಲಿ ವ್ಯಾವಹಾರಿಕವಾಗಿ ಲಸಿಕೆಯನ್ನು ರಫ್ತು ಮಾಡಲಾಗುತ್ತದೆ. ಜನವರಿ.25ರಂದು ಕೊವಿಶೀಲ್ಡ್ ಲಸಿಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಕಳೆದ ವರ್ಷವೇ ಲಸಿಕೆಗಾಗಿ ಒಪ್ಪಂದ:

2020ರ ನವೆಂಬರ್ ತಿಂಗಳಿನಲ್ಲಿ ಬಾಂಗ್ಲಾದೇಶದ ಬಹುದೊಡ್ಡ ಫಾರ್ಮಾ ಕಂಪನಿ ಆಗಿರುವ ಬೆಕ್ಸಿಮ್ಕೋ ಫಾರ್ಮಾಸೆಟಿಕಲ್ ಕಂಪನಿಯು ಭಾರತದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಜೊತೆಗೆ 30 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ನೀಡುವಂತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ, ಬಾಂಗ್ಲಾದೇಶ ಸರ್ಕಾರ 30 ಲಕ್ಷ ಡೋಸ್ ಗೆ ಸಂಬಂಧಿಸಿದಂತೆ ಹಣವನ್ನು ಪಾವತಿಸುತ್ತದೆ. ಹೆಚ್ಚುವರಿ ಲಸಿಕೆಯ ಮೊತ್ತವನ್ನು ಬೆಕ್ಸಿಮ್ಕೋ ಫಾರ್ಮಾಸೆಟಿಕಲ್ ಸಂಸ್ಥೆಯು ನೀಡಬೇಕಾಗುತ್ತದೆ.

English summary
Indian Govt Gives 2 Million Doses Of Covishield Vaccine For Bangladesh As Gift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X