ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಕುವರಿಯ ಅಡುಗೆಗೆ ಒಬಾಮಾ ದಂಪತಿ ಫಿದಾ

By Vanitha
|
Google Oneindia Kannada News

ವಾಷಿಂಗ್ಟನ್, ಜುಲೈ, 16 : ಮಕ್ಕಳು ಸಣ್ಣ ವಯಸ್ಸಿಗೆ ಸಂಗೀತದಲ್ಲೋ, ನೃತ್ಯದಲ್ಲೋ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿವಿಧ ದೇಶದ ಗಣ್ಯರಿಂದ ಭೇಷ್ ಎನಿಸಿಕೊಂಡು ಪುಳಕಿತರಾಗ್ತಾರೆ. ಆದರೆ ಇಲ್ಲೊಂದು ಬಾಲಕಿ ಅಡುಗೆ ಮಾಡಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿದ್ದ ಶ್ವೇತಭವನಕ್ಕೆ ಆಹ್ವಾನಿತಳಾಗಿದ್ದಳು.

ನಾ ಹೇಳ್ತಿರೋದು 4ನೇ ವರ್ಷದ ಕಿಡ್ಸ್ ಸ್ಟೇಟ್ ಡಿನ್ನರ್ ಆಹಾರ ಸ್ಪರ್ಧೆಯಲ್ಲಿ ಭಾಗವಹಿಸಿ, ಜಯಗಳಿಸಿದ 9 ವರ್ಷದ ಭಾರತೀಯ ಮೂಲದ ಅಮೆರಿಕಾದ ಬಾಲಕಿ ಶ್ರೇಯಾ ಪಟೇಲ್ ಳ ಯಶೋಗಾಥೆ.[ಬರಾಕ್ ಭಾರತ ಭೇಟಿ : 10 ಸಂಗತಿ ನೀವು ತಿಳಯಲೇಬೇಕ್]

Indian 'Garam Masala' reaches White House; 9-year-old impresses Barack Obama

ಒಬಾಮ ಅವರು ಇಲಿನೋಯ್ಸ್ ನಲ್ಲಿ ಸ್ವಾಸ್ಥ್ಯ ಆಹಾರ ಸ್ಫರ್ಧೆ ಏರ್ಪಡಿಸಿದ್ದರು. ಇದರಲ್ಲಿ ಭಾಗವಹಿಸಿದ ಬಾಲಕಿ ಶ್ರೇಯಾ ಪಟೇಲ್ ತಾನು ತಯಾರಿಸಿದ ಬರ್ಗರ್ ನಲ್ಲಿ ಭಾರತದ ಗರಂ ಮಸಾಲಾ ಬಳಸಿ ಒಬಾಮ ಅವರ ಮನಸ್ಸನ್ನು ಸೆಳೆದಿದ್ದಾರೆ. ಆಹ್ವಾನಿತ ಬಾಣಸಿಗರಲ್ಲಿ ಕಿರಿಯಳಾದ ಈಕೆ ಭಾರತದ ಗರಂ ಮಸಾಲೆಯನ್ನು ಕ್ವೀನೋ ಬರ್ಗರ್ ಮತ್ತು ಅದರೊಂದಿಗಿನ ರಾಯಿತದಲ್ಲಿ ಉಪಯೋಗಿಸಿ ಪ್ರಶಸ್ತಿ ಗಳಿಸಿಕೊಂಡು, ಒಬಾಮ ಮತ್ತು ಪತ್ನಿ ಮಿಷಲ್ ಅವರೊಂದಿಗೆ ಶ್ವೇತ ಭವನದಲ್ಲಿ ಡಿನ್ನರ್ ಸ್ವೀಕರಿಸಿದ್ದಾಳೆ.

Indian 'Garam Masala' reaches White House; 9-year-old impresses Barack Obama

ಒಬಾಮ ಮತ್ತು ಪತ್ನಿ ಮಿಷಲ್ ಒಬಾಮ ಅವರಿಂದ ಸ್ವತಃ ಉಪಚರಿಸಿಕೊಂಡ ಈಕೆ ಬಾಲ್ಯದಿಂದ ನನ್ನ ಅಮ್ಮ ಮತ್ತು ಅಜ್ಜಿ ಮನೆಯಲ್ಲಿ ಭಾರತದ ತರಹೇವಾರಿ ಅಡುಗೆ ಮಾಡುತ್ತಿದ್ದರು. ಇದನ್ನು ನೋಡಿಕೊಂಡು ಬೆಳೆದ ನನಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟವಿತ್ತು. ಅಜ್ಜಿ ಮತ್ತೆ ನಾನು ಇಬ್ಬರೂ ಸ್ಯಾಂಡ್ವಿಚ್ ಪ್ರಿಯರಾಗಿದ್ದುದರಿಂದ ಜೊತೆಯಲ್ಲಿಯೇ ತಯಾರಿಸುತ್ತಿದ್ದೆವು ಎಂದು ಹೇಳಿದ್ದಾಳೆ.

English summary
The girl, Shreya Patel, impressed the Obamas with her desi (Indian) tricks. A unique 'Garam Masala' Quinoa Burger with 'raita' was all to impress US President Barack Obama and the First Lady Michelle Obama.9 year-old Indian-American girl won the prize and she had participated their inviting dinner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X