ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸ ಸರೋವರಕ್ಕೆ ತೆರಳಿದ ಕನ್ನಡಿಗರಿಗೆ ಇಲ್ಲಿದೆ ಸಹಾಯವಾಣಿ

|
Google Oneindia Kannada News

ಕಠ್ಮಂಡು, ಜುಲೈ 03: ನೇಪಾಳದ ಸಿಮಿಕೋಟ್ ಎಂಬಲ್ಲಿ ಸಿಲುಕಿಕೊಂಡಿರುವ ಮಾನಸ ಸರೋವರ ಯಾತ್ರಿಕರಿಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೆಲವು ಸಹಾಯವಾಣಿಗಳನ್ನು ನೀಡಿದೆ.

ಸಂಕಷ್ಟದಲ್ಲಿರುವ ಯಾತ್ರಿಕರು ಅಥವಾ ಅವರ ಕುಟುಂಬಸ್ಥರು ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಬಹುದು, ಅಥವಾ ರಕ್ಷಣೆಗೆ ಮನವಿ ಮಾಡಬಹುದಾಗಿದೆ.

ಕರ್ನಾಟಕದ ಮಾನಸ ಸರೋವರ ಯಾತ್ರಿಕರು ಸುರಕ್ಷಿತಕರ್ನಾಟಕದ ಮಾನಸ ಸರೋವರ ಯಾತ್ರಿಕರು ಸುರಕ್ಷಿತ

ಸಹಾಯವಾಣಿ ಸಂಖ್ಯೆಗಳು ಇಂತಿವೆ: :+977-9851107006,+977-9851155007,+977-9851107021, +977-9818832398. ಪ್ರಾದೇಶಿಕ ಭಾಷೆಗಳಿಗಾಗಿ: ಕನ್ನಡ- +977-9823672371, ತೆಲುಗು- +977-9808082292,ತಮಿಳು- +977-9808500642, ಮಲೆಯಾಳಿ- +977-9808500644.

Indian Embassy in Nepals helpline numbers for pilgrims and their family members

ಮಳಲೆ, ಮಂಜು ಸೇರಿದಂತೆ ಪ್ರತಿಕೂಲ ಹವಾಮಾನದಿಂದಾಗಿ ಕರ್ನಾಟಕದ ಸುಮಾರು 200 ಮಂದಿ ಯಾತ್ರಿಕರು ಸೇರಿದಂತೆ ಹಲವರು ಸಿಮಿಕೋಟ್ ನಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದ ಯಾತ್ರಿಗಳು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಹೇಳಿದ್ದಾರೆ. ಮೈಸೂರು, ರಾಮನಗರ, ಚನ್ನಪಟ್ಟಣ ನಿವಾಸಿಗಳೇ ಇಲ್ಲಿ ಹೆಚ್ಚಾಗಿದ್ದು, ಅವರಿಗೆ ಆಹಾರವನ್ನೂ ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿತ್ತು. ಆದರೆ ಇದೀಗ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾತ್ರಿಕರು ತಂಗಿರುವ ಶಿಬಿರಗಳಿಗೆ ಸಿಬ್ಬಂದಿಯನ್ನು ಕಳಿಸಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದು, ನೇಪಾಳ ಸೇನೆ ರಕ್ಷಣಾ ಕಾರ್ಯವನ್ನೂ ನಡೆಸಲಿದೆ.

ಹೆಲಿಕಾಪ್ಟರ್ ಮೂಲಕವೇ ಯಾತ್ರಿಕರನ್ನು ಅಲ್ಲಿಂದ ಕರೆತರಬೇಕಿದೆ, ಆದರೆ ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅನುಕೂಲಕರವಾಗಿಲ್ಲದಿರುವುದರಿಂದ ಮುಂದಿನ ದಾರಿಯನ್ನು ಹುಡುಕಲಾಗುತ್ತಿದೆ.

English summary
Indian Embassy in Nepal's hot line for pilgrims&their family members:+977-9851107006,+977-9851155007,+977-9851107021, +977-9818832398. Hotline to contact language speaking staff: Kannada- +977-9823672371, Telugu- +977-9808082292, Tamil- +977-9808500642, Malayalam- +977-9808500644
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X