ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿ: ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಎಚ್ಚರಿಕೆ

|
Google Oneindia Kannada News

ವಿಯೆನ್ನಾ, ನವೆಂಬರ್ 3: ಆಸ್ಟ್ರಿಯಾದ ವಿಯೆನ್ನಾ ನಗರದಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ದೇಶದಲ್ಲಿರುವ ಭಾರತೀಯ ಸಮುದಾಯ ಬಹಳ ಎಚ್ಚರಿಕೆಯಿಂದ ಇರುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.

'ನಾವು ನಿಮ್ಮ ರಕ್ಷಣೆಗಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿಯೆನ್ನಾದಲ್ಲಿರುವ ಭಾರತೀಯ ಸಮುದಾಯಕ್ಕೆ ನಾವು ಭರವಸೆ ನೀಡುತ್ತೇವೆ. ಭಯೋತ್ಪಾದಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಾಧ್ಯತೆ ಇರುವುದರಿಂದ ನೀವೆಲ್ಲರೂ ಹೆಚ್ಚು ಜಾಗರೂಕತೆಯಿಂದ ಇರಬೇಕು' ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಆಸ್ಟ್ರಿಯಾ; ರಸ್ತೆಯಲ್ಲಿ ಉಗ್ರರಿಂದ ಗುಂಡಿನ ದಾಳಿ, 7 ಸಾವುಆಸ್ಟ್ರಿಯಾ; ರಸ್ತೆಯಲ್ಲಿ ಉಗ್ರರಿಂದ ಗುಂಡಿನ ದಾಳಿ, 7 ಸಾವು

ವಿಯೆನ್ನಾ ಭಯೋತ್ಪಾದನಾ ದಾಳಿಯ ಬೆನ್ನಲ್ಲೇ ನವದೆಹಲಿಯಲ್ಲಿರುವ ಆಸ್ಟ್ರಿಯಾದ ಕಚೇರಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ನವೆಂಬರ್ 11ರವರೆಗೂ ಮುಚ್ಚಲಾಗಿದೆ. ನೀವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ ಎಂಬುದಾಗಿ ಕಚೇರಿ ತಿಳಿಸಿದೆ.

 Indian Embassy In Austria Issues Caution Following The Vienna Terror Attack

ವಿಯೆನ್ನಾದ ರಸ್ತೆಯಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಆಸ್ಟ್ರೀಯಾ ರಾಜಧಾನಿಯ ಆರು ಕಡೆಗಳಲ್ಲಿ ಅನೇಕ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಯಹೂದಿ ಗುಡಿಯೊಂದರ ಸಮೀಪದ ಮನೆಗಳನ್ನು ಗುರಿಯಾಗಿರಿಸಿ ಈ ದಾಳಿ ನಡೆದಿದೆ. ಐಎಸ್ ಉಗ್ರರೊಂದಿಗೆ ನಂಟು ಹೊಂದಿರುವರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು 20 ವರ್ಷದ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದೆ.

English summary
Indian Embassy in Austria has issued caution for the Indian community in Vienna following the terror attack in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X