ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರವೆಸಗಿದ್ದ ಭಾರತೀಯ ವೈದ್ಯನಿಗೆ ಶಿಕ್ಷೆ

By Prasad
|
Google Oneindia Kannada News

Indian doctor found guilty of rape in Australia
ಮೆಲ್ಬೋರ್ನ್, ಸೆ. 17 : ಇಬ್ಬರು ಮಹಿಳೆಯರ ಅಮಾಯಕತೆಯ ದುರ್ಲಾಭ ಪಡೆದು ಲೈಂಗಿಕವಾಗಿ ದುರ್ಬಳಿಸಿಕೊಂಡಿದ್ದ ಭಾರತೀಯ ಮೂಲದ ವೈದ್ಯನಿಗೆ ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್ ಮಂಗಳವಾರ ಶಿಕ್ಷೆಗೆ ಗುರಿಪಡಿಸಿದೆ. ಮನು ಮೈಂಬಿಲ್ಲಿ ಗೋಪಾಲ್ ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ವೈದ್ಯ.

ಮೆಲ್ಬೋರ್ನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರದ ಕೊಚ್ಚಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು 39 ವರ್ಷದ ಆತನನ್ನು ಮಾರ್ಚ್ 1ರಂದು ಬಂಧಿಸಿದ್ದರು. ಆತ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದ.

ಸನ್‌ಬರಿ ಮೆಡಿಕಲ್ ಕ್ಲಿನಿಕ್ ನಡೆಸುತ್ತಿರುವ ಗೋಪಾಲ್, ಹೊಟ್ಟೆ ನೋವೆಂದು ತನ್ನ ಬಳಿ ಬಂದಿದ್ದ 18 ವರ್ಷದ ಅವಿವಾಹಿತ ಯುವತಿ ಮತ್ತು ನಾಲ್ಕು ಮಕ್ಕಳಿರುವ ವಿವಾಹಿತ ಮಹಿಳೆಯನ್ನು ಎರಡು ಸಂದರ್ಭದಲ್ಲಿ ದುರ್ಬಳಿಸಿಕೊಂಡಿದ್ದ.

ಹೊಟ್ಟೆ ನೋವೆಂದು ತನ್ನ ಬಳಿ ಬಂದಿದ್ದ 18 ವರ್ಷದ ವಿದ್ಯಾರ್ಥಿನಿಯನ್ನು ಪರೀಕ್ಷೆ ಮಾಡುವ ಉದ್ದೇಶದಿಂದ ಸಲಹಾ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದ. ಯೋನಿಯ ಒಳಭಾಗದ ಪರೀಕ್ಷೆ ಮಾಡಬೇಕೆಂದು ಆಕೆಗೆ ಹೇಳಿ, ಆ ಪರೀಕ್ಷೆ ಏಕೆಂದು ಆಕೆ ಕೇಳಿದರೂ, ಆಕೆಯ ಮೇಲೆ ಬಲಪ್ರಯೋಗ ಮಾಡಿದ್ದ.

ಯುವತಿಯ ಯೋನಿಯನ್ನು ಪ್ರವೇಶಿಸಿದರೂ ನಂತರ ನೋವಿನ ಬಗ್ಗೆ ಯಾವುದೇ ಟಿಪ್ಪಣಿ ಬರೆದುಕೊಂಡಿರಲಿಲ್ಲ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಯುತ್ತಲೇ ಆ ಯುವತಿ ಮಾನಸಿಕವಾಗಿ ಕುಸಿದಿದ್ದಳು ಮತ್ತು ತನ್ನ ಗೆಳೆಯನೆದಿರು ದುಃಖ ತಡೆಯಲಾರದೆ ಬಿಕ್ಕಿ ಅತ್ತಿದ್ದಳು.

ಮತ್ತೊಂದು ಸಂದರ್ಭದಲ್ಲಿ ನಾಲ್ಕು ಮಕ್ಕಳಿರುವ ಮಹಿಳೆಯೊಬ್ಬರು, ಹೊಟ್ಟೆಯ ಬಲಭಾಗದಲ್ಲಿ ನೋವಿದೆಯೆಂದು ಬಂದಿದ್ದಾಗ, ಇದು ಗರ್ಭಕೋಶಕ್ಕೆ ಸಂಬಂಧಿಸಿದ್ದೆಂದು ಹೇಳಿ ಆಂತರಿಕ ಪರೀಕ್ಷೆ ಮಾಡಬೇಕೆಂದು ಆಕೆಯನ್ನು ಪುಸಲಾಯಿಸಿದ್ದ. ಇಂಥ ಪರೀಕ್ಷೆಯ ಅಗತ್ಯವಿದೆಯಾ ಎಂದು ಕೇಳಿದಾಗ, ಮಾಡಲೇಬೇಕೆಂದು ಒತ್ತಯಿಸಿದ್ದ. ನಂತರ ಗೋಪಾಲ ಆ ಮಹಿಳೆಯನ್ನು ಪ್ರವೇಶಿಸಿದ್ದರೂ ಪರೀಕ್ಷೆ ಕುರಿತಂತೆ ಯಾವುದೇ ಟಿಪ್ಪಣಿ ಮಾಡಿಕೊಂಡಿರಲಿಲ್ಲ.

English summary
An Indian doctor who had penetrated two women without their permission has been found guilty and sentenced by Australian Supreme Court on Tuesday. Manu Maimbilly Gopal had abused 18-year-old and another mother of four.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X