ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಯಾನಿ ವಿವಸ್ತ್ರಗೊಳಿಸಿ ತಪಾಸಣೆ, ಭಾರತ ಗರಂ

By Mahesh
|
Google Oneindia Kannada News

ಬೆಂಗಳೂರು, ಡಿ.17: ಅಮೆರಿಕದಲ್ಲಿರುವ ಭಾರತ ರಾಯಭಾರ ಕಚೇರಿಯ ಡೆಪ್ಯುಟಿ ಕೌನ್ಸೆಲರ್ ದೇವಯಾನಿ ಅವರನ್ನು ಶಿಷ್ಟಾಚಾರ ಉಲ್ಲಂಘಿಸಿ ನಡುಬೀದಿಯಲ್ಲಿ ಕೋಳ ಹಾಕಿ ಬಂಧಿಸಿದ್ದಷ್ಟೇ ಅಲ್ಲದೆ ಅವರನ್ನು ವಿವಸ್ತ್ರಗೊಳಿಸಿ ತಪಾಸಣೆಯನ್ನು ನಡೆಸಿದ ಪ್ರಸಂಗ ಬೆಳಕಿಗೆ ಬಂದಿದೆ. ಅಮೆರಿಕದ ಈ ಕ್ರಮಕ್ಕೆ ಭಾರತದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ರಾಯಭಾರ ಕಚೇರಿಯ ಮಹಿಳಾ ಅಧಿಕಾರಿಯ ಜತೆಗಿನ ಪೊಲೀಸರ ಅಮಾನವೀಯ ವರ್ತನೆಯನ್ನು ಯುಪಿಎ ಖಂಡಿಸಿದೆ. ಭಾರತಕ್ಕೆ ಬಂದಿರುವ ಅಮೆರಿಕ ಕಾಂಗ್ರೆಸ್ ಪ್ರತಿನಿಧಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರದ್ದುಗೊಳಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೂಡಾ ಅಮೆರಿಕದ ಸಂಸದರ ಉಭಯಪಕ್ಷೀಯ ತಂಡವನ್ನು ಭೇಟಿ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ಜಾರ್ಜ್ ಹೋಲ್ಡಿಂಗ್ ನೇತೃತ್ವದ ಅಮೆರಿಕ ತಂಡವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿಶೇಷ.

Indian diplomat strip searched; row erupts between India and US

ತಪಾಸಣೆಯ ಬಳಿಕ ದೇವಯಾನಿ ಅವರನ್ನು ಮಾದಕ ವ್ಯಸನಿಗಳ ಸೆಲ್ ನಲ್ಲಿ ಕೂಡಿಹಾಕಲಾಗಿತ್ತು. ಇದು ರಾಯಭಾರ ಕಚೇರಿ ಅಧಿಕಾರಿಗಳ ಜತೆಗಿನ ನಡವಳಿಕೆ ಸಂಬಂಧ ರಚಿಸಲಾಗಿರುವ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಮೆರಿಕದ ಅಧಿಕಾರಿಗಳಿಗೆ ದೇವಯಾನಿ ರಾಯಭಾರ ಕಚೇರಿಯ ಅಧಿಕಾರಿ ಎನ್ನುವುದು ಸ್ಪಷ್ಟವಾಗಿ ಗೊತ್ತಿತ್ತು. ಹಾಗಿದ್ದರೂ ಅವರು ಉದ್ದೇಶಪೂರ್ವಕವಾಗಿ ಅವಮರ್ಯಾದೆ ತೋರಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹೇಳಿದ್ದಾರೆ.

ದೇವಯಾನಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಇತ್ತು. ಇದಲ್ಲದೆ ಭಾರತವೇ ಈ ವಿಚಾರದಲ್ಲಿ ಅಮೆರಿಕದ ನೆರವು ಕೇಳಿತ್ತು. ಇಷ್ಟಾದರೂ, ದೇವಯಾನಿ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿತ್ತು. ಇದರ ಮುಖ್ಯ ಉದ್ದೇಶ ಭಾರತಕ್ಕೆ ಸಂದೇಶವೊಂದನ್ನು ಕಳುಹಿಸುವುದು ಹಾಗೂ ಉತ್ತರವನ್ನು ಪರೀಕ್ಷಿಸುವುದಷ್ಟೇ ಆಗಿದೆ ಎನ್ನಲಾಗಿದೆ.

ನ್ಯೂಯಾರ್ಕ್ ಪೊಲೀಸರು ಭಾರತೀಯರ ರಾಯಭಾರಿಗಳ ವಿಚಾರದಲ್ಲಿ ಈ ರೀತಿ ವರ್ತಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ರಾಯಭಾರ ಅಧಿಕಾರಿಯೊಬ್ಬರ ಪುತ್ರಿಯೊಬ್ಬಳನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿತ್ತು. ಈ ಪ್ರಕರಣದಲ್ಲೂ ಭಾರತ ಪ್ರತಿಭಟನೆ ವ್ಯಕ್ತಪಡಿಸಿತ್ತು.

ಸಂಗೀತಾ ರಿಚರ್ಡ್ ಎಂಬ ಭಾರತ ಮೂಲದ ಮಹಿಳೆಯನ್ನ ದೇವಯಾನಿ ಮನೆಗೆಲಸ ಮತ್ತು ಮಕ್ಕಳನ್ನ ನೋಡಿಕೊಳ್ಳಲು ಕೆಲಸಕ್ಕೆ ಇಟ್ಟುಕೊಂಡಿದ್ದರು. ಜೂನ್ 2012ರಿಂದ ನವೆಂಬರ್ 2013ರವರೆಗೆ ತಿಂಗಳವರೆಗೆ ದೇವಯಾನಿ ಅವರ ಮನೆಯಲ್ಲಿ ಕೆಲಸ ಮಾಡಿದ ಸಂಗೀತಾ, ವೀಸಾ ದಾಖಲೆಯಲ್ಲಿ ತಿಂಗಳಿಗೆ 4.500 ಡಾಲರ್ ಸಂಬಳ( ಗಂಟೆಗೆ 3.31 ಡಾಲರ್ ಲೆಕ್ಕದಂತೆ) ಕೊಡುತ್ತಿದ್ದೇನೆ ಎಂದು ದೇವಯಾನಿ ಉಲ್ಲೇಖಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.[ಭಾರತದ ಉಪ ರಾಯಭಾರಿಗೆ ಸಂಕಟ]

1999 IFS ಬ್ಯಾಚಿನ ಅಧಿಕಾರಿಯಾಗಿರುವ 39 ವರ್ಷ ವಯಸ್ಸಿನ ದೇವಯಾನಿ ಕೋಬ್ರಾಗಡೆ ಅವರು ಭಾರತ ಸರ್ಕಾರದಿಂದ ವಾರ್ಷಿಕವಾಗಿ 100,000 ಡಾಲರ್ ಪಡೆಯುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಐಷಾರಾಮಿ ವಸತಿ ಗೃಹ ಹೊಂದಿದ್ದಾರೆ. ಅಪರಾಧ ಸಾಬೀತಾದರೆ ದೇವಯಾನಿ ಅವರು 5-10 ವರ್ಷ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ಮುಂಬೈನಲ್ಲಿ ಸರ್ಕಾರಿ ನಿರ್ಮಿತ ವಸತಿ ಸಮುಚ್ಚಯ ಪಡೆಯಲು ಲಾಬಿ ನಡೆಸಿದ ಆರೋಪ ಕೂಡಾ ದೇವಯಾನಿ ಮೇಲಿದೆ.

English summary
Tension mounted between India and US over Indian diplomat's arrest in New York after US officials, on Monday evening, revealed that Devyani Khobragade was strip-searched and confined with drug addicts. Devyani, India's deputy consul general in New York, was arrested in a visa fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X