ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ತನಿಖಾಧಿಕಾರಿಗಳ ವಶದಲ್ಲಿದ್ದ ಭಾರತೀಯನ ಸಾವು

ಸೂಕ್ತ ದಾಖಲೆಯಿಲ್ಲದೆ ಬಂಧಿತರಾಗಿದ್ದ ಅತುಲು ಕುಮಾರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಸೇರಿಸಿದರೂ ಅವರು ಹೃದಯಾಘಾತದಿಂದ ಮೃತ ಪಟ್ಟರು ಎನ್ನುತ್ತಿವೆ ಅಮೆರಿಕದ ತನಿಖಾಧಿಕಾರಿಗಳು.

|
Google Oneindia Kannada News

ನ್ಯೂಯಾರ್ಕ್, ಮೇ 19: ಅಮೆರಿಕದ ತನಿಖಾಧಿಕಾರಿಗಳ ವಶದಲ್ಲಿದ್ದ ಭಾರತೀಯರೊಬ್ಬರು ಸಾವನ್ನಪ್ಪಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಸೂಕ್ತ ದಾಖಲಾತಿ ಇಲ್ಲದೆ ಅಮೆರಿಕದಲ್ಲಿ ನೆಲೆಸಿದ್ದ ಆರೋಪದ ಮೇಲೆ ಇತ್ತೀಚೆಗೆ, ಅಟ್ಲಾಂಟ ವಲಸೆ ಅಧಿಕಾರಿಗಳು ಅತುಲ್ ಕುಮಾರ್ ಬಾಬುಭಾಯಿ ಪಟೇಲ್ (58) ಅವರನ್ನು ಇತ್ತೀಚೆಗೆ ವಿಚಾರಣೆಗಾಗಿ ಕರೆದೊಯ್ದಿದ್ದರು.

Indian dies in a custody in Atlanta

ಎರಡು ದಿನಗಳ ಕಾಲ ಅಧಿಕಾರಿಗಳ ವಶದಲ್ಲಿದ್ದ ಅತುಲ್ ಕುಮಾರ್ ಬಾಬುಭಾಯಿ ಪಟೇಲ್ ಅವರು ಹೈ ಬಿಪಿ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಸ್ಯೆ ಪತ್ತೆಯಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅತುಲ್ ಹೃದಯ ಸ್ತಂಭನಕ್ಕೊಳಗಾಗಿ ಅಸುನೀಗಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ವಿಮಾನದ ಮೂಲಕ ಈಕ್ವೆಡಾರ್ ನಿಂದ ಅಟ್ಲಾಂಟಕ್ಕೆ ಆಗಮಿಸಿದ್ದಾಗ ಅವರ ಬಳಿ ಸೂಕ್ತ ದಾಖಲೆಗಳು ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರಿಂದ ಅತುಲ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.

{promotion-urls}

English summary
The Indian named Atul Kumar (58) who was detained in Atlanta, for not having proper documents for his arrival to the state, died in custody. Department of Immigration officials clarified that Atul was suffering from lungs problem and died in a hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X