ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44 ರಾಷ್ಟ್ರಗಳಲ್ಲಿ ಭಾರತದ ರೂಪಾಂತರ ಕೊರೊನಾವೈರಸ್ ತಳಿ!

|
Google Oneindia Kannada News

ನವದೆಹಲಿ, ಮೇ 11: ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯು ವೇಗವಾಗಿ ಹರಡಲು ಕಾರಣವಾಗಿರುವ B.1.617 ರೂಪಾಂತರ ರೋಗಾಣು 44 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿನ B.1.617 ರೂಪಾಂತರ ತಳಿಯ 2020ರ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿತ್ತು. ಡಬ್ಲ್ಯುಹೆಚ್ಓ ವ್ಯಾಪ್ತಿಯ 44 ರಾಷ್ಟ್ರಗಳಿಂದ 4500 ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ ಇದೇ ರೂಪಾಂತರ ತಳಿ ಪತ್ತೆಯಾಗಿದೆ. ಹೆಚ್ಚುವರಿವಾಗಿ ಐದು ದೇಶಗಳಿಂದ ಸೋಂಕುಪತ್ತೆ ಹಚ್ಚುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ಸ್ವೀಕರಿಸಿದೆ.

ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ

ಭಾರತವನ್ನು ಹೊರತುಪಡಿಸಿದಂತೆ B.1.617 ರೂಪಾಂತರ ತಳಿಯಿಂದ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲೂ ರೂಪಾಂತರ ತಳಿಯ ಅಟ್ಟಹಾಸ ಹೆಚ್ಚಾಗಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.

Indian Coronavirus B.1.617 Variant Found In 44 Countries: WHO.

ಕೊವಿಡ್-19 ಪ್ರಕರಣಗಳಲ್ಲಿ ಗಣನೀಯ ಏರಿಕೆ:
ಕೊರೊನಾವೈರಸ್ ಮೂಲ ರೋಗಾಣುವಿಗಿಂತ B.1.617 ರೂಪಾಂತರ ತಳಿ ಶೀಘ್ರ ಗತಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರ ವೈರಸ್ ಕಾಣಿಸಿಕೊಂಡ ದೇಶಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ನೈಜ-ಪ್ರಪಂಚದಲ್ಲಿ ರೂಪಾಂತರ ತಳಿಯ ವಿರುದ್ಧ ಲಸಿಕೆಗಳ ಪರಿಣಾಮ ಸೀಮಿತವಾಗಿರಬಹುದು ಎಂದು ಡಬ್ಲ್ಯುಹೆಚ್ಓ ಒತ್ತಿ ಹೇಳಿದೆ.

ಭಾರತದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ B.1.617.1 ರೂಪಾಂತರ ತಳಿಯು ಶೇ.21 ಹಾಗೂ B.1.617.2 ರೂಪಾಂತರ ತಳಿಯು ಶೇ.7ರಷ್ಟು ಪ್ರಮಾಣದಲ್ಲಿ ಪತ್ತೆಯಾಗಿದೆ. ಇದರ ಜೊತೆಗೆ ಇಂಗ್ಲೆಂಡಿನಲ್ಲಿ ಮೊದಲ ಪತ್ತೆಯಾದ B.1.1.7 ರೂಪಾಂತರ ತಳಿ ಕೂಡ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

Indian Coronavirus B.1.617 Variant Found In 44 Countries: WHO.


ಭಾರತದಲ್ಲಿ ಕಳೆದ ಒಂದು ದಿನದಲ್ಲಿ 3,29,942 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2,26,62,575ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾವೈರಸ್ ಸೋಂಕಿನಿಂದ ಈವರೆಗೂ 2,49,99 ಜನರು ಜೀವ ಚೆಲ್ಲಿದ್ದಾರೆ. ಒಂದು ದಿನದಲ್ಲಿ 3,56,082 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 1,90,27,304 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ ಭಾರತದಲ್ಲಿ 37,15,221 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ.

English summary
Indian Coronavirus B.1.617 Variant Found In 44 Countries: WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X