ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಮಾಲಿಯಾ ಕಡಲ್ಗಳ್ಳರಿಂದ ಭಾರತದ ಹಡಗು ಹೈಜಾಕ್

ಈ ಹಡಗಿನ ಹೆಸರನ್ನು 'ಅಲ್ ಕೌಶರ್' ಎಂದು ಗುರುತಿಸಲಾಗಿದ್ದು, ದುಬೈನಿಂದ ಹೊರಟಿದ್ದ ಈ ಹಡಗು, ಯೆಮನ್ ಅಲ್ ಮುಕಾಲಾ ಬಂದರಿನ ಕಡೆಗೆ ಸಾಗುತ್ತಿತ್ತು.

|
Google Oneindia Kannada News

ಬೊಸಾಸೊ (ಸೊಮಾಲಿಯಾ), ಏಪ್ರಿಲ್ 3: ಕಡಲ್ಗಳ್ಳತನಕ್ಕೆ ಕುಖ್ಯಾತಿ ಪಡೆದಿರುವ ಸೊಮಾಲಿಯಾ ದೇಶದ ಕಡಲುಗಳ್ಳರಿಂದ ಭಾರತದ ವಾಣಿಜ್ಯ ಹಡಗೊಂದು ಅಪಹರಣಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 1ರಂದು ಈ ಹಡಗನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

ಈ ಹಡಗಿನ ಹೆಸರನ್ನು 'ಅಲ್ ಕೌಶರ್' ಎಂದು ಗುರುತಿಸಲಾಗಿದ್ದು, ದುಬೈನಿಂದ ಹೊರಟಿದ್ದ ಈ ಹಡಗು, ಯೆಮನ್ ಅಲ್ ಮುಕಾಲಾ ಬಂದರಿನ ಕಡೆಗೆ ಸಾಗುತ್ತಿತ್ತು.

Indian cargo ship with 11 crew members hijacked by Somali pirates

ಅಪಹರಣದ ಸಂದರ್ಭದಲ್ಲಿ ಹಡಗಿನಲ್ಲಿ ಮುಂಬೈನ ಮಾಂಡವಿ ಮೂಲದ 11 ಸಿಬ್ಬಂದಿಗಳಿದ್ದರು. ಅಪಹರಣಕಾರರು ಹಡಗನ್ನು ವಶಪಡಿಸಿಕೊಳ್ಳುವಷ್ಟರಲ್ಲಿ ಹಡಗಿನ ಕ್ಯಾಪ್ಟನ್ ಈ ಸುದ್ದಿಯನ್ನು ದುಬೈನ ಬಂದರು ಹಾಗೂ ಹಡಗಿನ ಮಾಲೀಕರಿಗೆ ಸುದ್ದಿ ಮುಟ್ಟಿಸುವಲ್ಲಿ ಸಫಲನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಹದಿನೈದು ದಿನಗಳ ಹಿಂದೆ (ಮಾರ್ಚ್ 15) ಯೂರೋಪ್ ಒಕ್ಕೂಟಕ್ಕೆ ಸೇರಿದ ಇಂಧನ ಹೊತ್ತೊಯ್ಯುತ್ತಿದ್ದ ಹಡಗೊಂದನ್ನು ಇದೇ ರೀತಿ ಅಪಹರಿಸಿದ್ದ ಸೊಮಾಲಿಯಾದ ಕಡಲ್ಗಳ್ಳರು, ಅದರ ಹಡಗು ಹಾಗೂ ಸಿಬ್ಬಂದಿಯನ್ನು ಬಂಧಿಯಾಗಿಸಿರಿ ಅಪಾರ ಮೊತ್ತದ ಒತ್ತೆ ಹಣವನ್ನು ಕೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

English summary
The Somali pirates have hijacked an Indian cargo ship with 11 crew members on board. The ship named ‘Al Kaushar’ was on its way to Al Mukala port in Yemen from Dubai. The incident took place on April 1st, but now the matter came into the light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X