ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್ ಸಂಬಂಧ ಭಾರತ-ಚೀನಾ ನಡುವೆ ದ್ವಿಪಕ್ಷೀಯ ಮಾತುಕತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಪೂರ್ವ ಲಡಾಖ್‌ನಲ್ಲಿ ಭದ್ರತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ಸೇನಾ ಮುಖ್ಯಸ್ಥರು ಬುಧವಾರ ಮಾತುಕತೆ ನಡೆಸಿದರು.

ಕಳೆದ ಆಗಸ್ಟ್ 31ರಂದು ಭಾರತ ಮತ್ತು ಚೀನಾದ ಹಿರಿಯ ಸೇನಾ ಅಧಿಕಾರಿಗಳು ಪೂರ್ವ ಲಡಾಖ್‌ನಲ್ಲಿ ಮಾತುಕತೆ ನಡೆಸಿದರು. ಈ ಎಲ್ಲ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಇದು ಮೇಜರ್ ಜನರಲ್ ಮಟ್ಟದಲ್ಲಿ ನಡೆಯುವ ವಾಡಿಕೆಯ ಸಂಭಾಷಣೆಯಾಗಿದೆ. ಅಂತಹ ಮಾತುಕತೆಗಳು ಮಾಸಿಕ ಆಧಾರದ ಮೇಲೆ ನಡೆಯುತ್ತವೆ ಎಂದು ಹೇಳಿವೆ.

ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!

ಪೂರ್ವ ಲಡಾಖ್ ಪ್ರದೇಶದಲ್ಲಿನ ಹಲವಾರು ಘರ್ಷಣೆಯ ಹಂತಗಳಲ್ಲಿ ಉಭಯ ಪಕ್ಷಗಳ ನಡುವಿನ ದೀರ್ಘಕಾಲದ ಬಿಕ್ಕಟ್ಟಿನ ನಡುವೆ ಮಾತುಕತೆ ನಡೆದಿದೆ. ಆದರೆ ಮಾತುಕತೆ ಬಗ್ಗೆ ಯಾವುದೇ ಅಧಿಕೃತ ಮಾತುಗಳಿಲ್ಲ. ಭಾರತ ಮತ್ತು ಚೀನಾ ಸೇನೆಗಳು ಎರಡು ವರ್ಷಗಳಿಂದ ಘರ್ಷಣೆಗೆ ಈ ಪ್ರದೇಶವೇ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿದೆ.

Indian and Chinese military officials hold talks in eastern Ladakh

16ನೇ ಸುತ್ತಿನ ದ್ವಿಪಕ್ಷೀಯ ಮಾತುಕತೆ:

ದ್ವಿಪಕ್ಷೀಯ ಬಾಂಧವ್ಯಗಳ ಒಟ್ಟಾರೆ ಅಭಿವೃದ್ಧಿಗೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಶಾಂತಿಯನ್ನು ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದೇ ಪ್ರಮುಖವಾಗಿದೆ ಎಂದು ಭಾರತವು ನಿರಂತರವಾಗಿ ಹೇಳುತ್ತಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಉಭಯ ಸೇನಾಪಡೆಗಳು 16 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಿವೆ.

ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಸರಣಿಯ ಪರಿಣಾಮವಾಗಿ ಎರಡು ಕಡೆಯವರು ಕಳೆದ ವರ್ಷ ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಮತ್ತು ಗೋಗ್ರಾ ಪ್ರದೇಶದಲ್ಲಿ ಎಲ್ಲ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದವು.

ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್‌ಗಳ ನಡುವಿನ ಕೊನೆಯ ಸುತ್ತಿನ ಮಾತುಕತೆ ಜನವರಿ 12 ರಂದು ನಡೆಯಿತು. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿಯನ್ನು ಮರುಸ್ಥಾಪಿಸಲು, ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಎರಡೂ ಕಡೆಯವರು ಕೆಲಸ ಮಾಡುತ್ತಾರೆ ಎಂದು ಅವರು ಒಪ್ಪಿಕೊಂಡರು. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವ ವರದಿಗಳ ಬಗ್ಗೆ ಈಶಾನ್ಯ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ಕಾರ ಪುನರುಚ್ಚರಿಸಿದೆ.

"ಭಾರತದ ಅರುಣಾಚಲ ಪ್ರದೇಶದಲ್ಲಿ ಚೀನಾ ಕೆಲವು ಸ್ಥಳಗಳ ಮರುನಾಮಕರಣದ ವರದಿಗಳನ್ನು ಸರ್ಕಾರ ಗಮನಿಸಿದೆ. ಇದು ನಿರರ್ಥಕ ಕಸರತ್ತು, ಇದು ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶವನ್ನು ಬದಲಾಯಿಸುವುದಿಲ್ಲ," ಎಂದು ಸರ್ಕಾರ ಹೇಳಿತ್ತು.

2020ರಲ್ಲಿ ಗಲ್ವಾನ್ ಸಂಘರ್ಷ:

ಕಳೆದ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ಅಂದು ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು.
ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 44ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಜಾಗತಿಕ ಮಾಧ್ಯಮಗಳೇ ವರದಿ ಮಾಡಿತ್ತು. ಆದರೆ ಚೀನಾ ನೀಡಿದ ಲೆಕ್ಕಕ್ಕಿಂತ ನಾಲ್ಕರಿಂದ ಒಂಬತ್ತು ಪಟ್ಟು ಚೀನಾ ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. 1962ರ ಯುದ್ಧದ ನಂತರ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ಅಧಿಕೃತವಾಗಿ ಘೋಷಿಸಿತ್ತು.

English summary
Indian and Chinese military officials hold talks in eastern Ladakh. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X