ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ "ಕೊರೊನಾ' ಪರಿಹಾರ ಕೇಳಲು ಡೊನಾಲ್ಡ್ ಟ್ರಂಪ್‌ಗೆ ಒತ್ತಾಯ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 16: ಕೊರೊನಾ ವೈರಸ್ ಚೀನಾದ ವುಹಾನ್‌ನ ಪ್ರಯೋಗಾಲಯದಿಂದಲೇ ಉತ್ಪತ್ತಿಯಾಗಿದ್ದು ಪರಿಹಾರ ಡೊನಾಲ್ಡ್ ಟ್ರಂಪ್ ಚೀನಾದಿಂದ ಪರಿಹಾರ ಪಡೆದುಕೊಳ್ಳಲೇಬೇಕು ಎಂದು ಇಂಡಿಯನ್ ಅಮೆರಿಕನ್ ಅಟಾರ್ನಿ ರವಿ ಬಾತ್ರಾ ಒತ್ತಾಯಿಸಿದ್ದಾರೆ.

Recommended Video

ಮನೆಯಲ್ಲಿದ್ದುಕೊಂಡೇ ತೇಜಸ್ವಿ ಸೂರ್ಯ ಏನ್ ಮಾಡಿದ್ದಾರೆ ನೋಡಿ

ಅಮರಿಕದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, ಆರ್ಥಿಕತೆ ಮೇಲೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಹೀಗಾಗಿ ಪರಿಹಾರ ಕೇಳಿ ಎಂದು ಹೇಳಿದ್ದಾರೆ.ಕೊರೊನಾ ವೈರಸ್ ಪ್ಲೇಗ್, ಅಮೆರಿಕದ ಪರ್ಲ್ ಹಾರ್ಬರ್‌ ನೌಕಾ ನೆಲೆ ಮೇಲೆ 1941ರಲ್ಲಿ ಜಪಾನ್ ನಡೆಸಿದ್ದ ದಾಳಿಗಿಂತಲೂ ಇದೂ ಮಾರಣಾಂತಿಕವಾಗಿದೆ ಎಂದು ಅಮೆರಿಕದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್ ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್

ಇಡೀ ವಿಶ್ವಕ್ಕೆ ರೋಗವನ್ನು ಹರಡಿದರೂ ಚೀನಾಗೆ ಪಶ್ಚಾತಾಪವಿಲ್ಲ, ಸುಮಾರು 20 ಲಕ್ಷ ಮಂದಿ ರೋಗದಿಂದ ನರಳುತ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಏಪ್ರಿಲ್ 14ರಂದು ಟ್ರಂಪ್‌ಗೆ ಪತ್ರ ಬರೆದಿದ್ದಾರೆ.

Indian-American Survivor Urges Trump To Seek Compensation From China

ಮಾಡಿದ ನಿರ್ಲಕ್ಷ್ಯಕ್ಕೆ ಚೀನಾ ಬೆಲೆ ತೆರಲೇಬೇಕು. ಚೀನಾವು ಕೊರೊನಾ ವೈರಸ್ ಮೂಲವನ್ನು ಮುಚ್ಚಿಟ್ಟಿದ್ದಾರೆ ಎಂದು ಬಾತ್ರಾ ಹೇಳಿದ್ದಾರೆ. ಅಮೆರಿಕದಲ್ಲಿ ಕೊರೊನಾವೈರಸ್‌ನಿಂದ ಇದುವರೆಗೆ 28,399 ಮಂದಿ ಮೃತಪಟ್ಟಿದ್ದಾರೆ. 6,41,919 ಮಂದಿ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದಾರೆ. 52,196ಮಂದಿ ಗುಣಮುಖರಾಗಿದ್ದಾರೆ.

ವಿಶ್ವದಾದ್ಯಂತ 1,36,938 ಮಂದಿ ಮೃತಪಟ್ಟಿದ್ದು, 20,63,161 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 5,12,032 ಮಂದಿ ಗುಣಮುಖರಾಗಿದ್ದಾರೆ.

English summary
Claiming that coronavirus was genetically-engineered in China, an Indian-American survivor has urged President Donald Trump to seek compensation running into trillions of dollars from the Communist regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X