ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆ

|
Google Oneindia Kannada News

ನವದೆಹಲಿ, ಜುಲೈ 03: ಕಲ್ಪನಾ ಚಾವ್ಲಾ ಬಳಿಕ ಎರಡನೇ ಭಾರತೀಯ ಸಂಜಾತೆ ಅಂತರಿಕ್ಷಕ್ಕೆ ಹಾರಲು ಮುಂದಾಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿರುವ ಸಿರಿಶಾ ಬಾಂದ್ಲಾ ಇದೇ ಜುಲೈ 11 ರಂದು ಬಾಹ್ಯಾಕಾಶಯಾನಕ್ಕೆ ಮುಂದಾಗಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದ ಸಿರಿಶಾ ಓದಿ ಬೆಳೆದಿದ್ದು, ಅಮೆರಿಕದ ಹೋಸ್ಟನ್‌ನಲ್ಲಿ ಅಲ್ಲೇ ಎಂಜಿನಿಯರಿಂದ ಶಿಕ್ಷಣವನ್ನು ಮುಗಿಸಿದ್ದ ಸಿರಿಶಾ ಈಗ ವರ್ಜಿನ್ ಗೆಲಾಟಿಕ್ಸ್ ಕಂಪನಿಯ ಬಾಹ್ಯಾಕಾಶ ಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲುಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲು

ಖ್ಯಾತ ಉದ್ಯಮಿ ಹಾಗೂ ವರ್ಜಿನ್ ಕಂಪನಿ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಕೂಡ ಈ ಗಗನಯಾನದ ಭಾಗವಾಗಿದ್ದು, ಅವರೊಂದಿಗೆ ತೆರಳುವ ಇತರೆ ಐದು ಜನರಲ್ಲ ಸಿರಿಶಾ ಕೂಡ ಒಬ್ಬರು.

Indian American Sirisha Bandla To Fly Into Space Aboard Virgin Galactic Flight From USA

34 ವರ್ಷದ ಸಿರಿಶಾ ಕಲ್ಪನಾ ಚಾವ್ಲಾ ಬಳಿಕ ಗಗನಯಾನ ಮಾಡುತ್ತಿರುವ ಎರಡನೇ ಭಾರತೀಯ ಸಂಜಾತೆಯಾಗಿದ್ದಾರೆ ಹಾಗೂ ಒಟ್ಟಾರೆ ನಾಲ್ಕನೇ ಅನಿವಾಸಿ ಭಾರತೀಯರಾಗಿದ್ದಾರೆ.

''ಈ ಗಗನಯಾನದಲ್ಲಿ ಭಾಗಿಯಾಗಲು ನನಗೆ ಖುಷಿಯಾಗುತ್ತಿದ್ದು, ಇದೊಂದು ಗೌರವ ಎಂದು ಭಾವಿಸುತ್ತೇನೆ'' ಎಂದು ಸಿರಿಶಾ ಹೇಳಿಕೊಂಡಿದ್ದಾರೆ.

ಜುಲೈ 11 ರಂದು ನ್ಯೂ ಮೆಕ್ಸಿಕೋದಿಂದ ಈ ಗಗನಯಾನ ಆರಂಭವಾಗಲಿದೆ. ಮೊಮ್ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಜ್ಜ ಬಾಂದ್ಲಾ ರಾಘಯ್ಯ, ''ಮೊದಲಿನಿಂದಲೂ ಏನಾದರೂ ಸಾಧಿಸಬೇಕೆನ್ನುವ ಛಲ ಅವಳಲ್ಲಿತ್ತು ಈಗ ಅದು ನನಸಾಗುತ್ತಿದೆ, ಈ ಗಗನಯಾನದಲ್ಲಿ ಆಕೆ ಯಶಸ್ವಿಯಾಗುತ್ತಾಳೆ ಹಾಗೂ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎನ್ನುವ ನಂಬಿಕೆ ನನಗಿದೆ'' ಎಂದು ಹೇಳಿದ್ದಾರೆ. ಇವರೂ ಕೂಡ ಕೃಷಿ ವಿಜ್ಞಾನಿಯಾಗಿದ್ದಾರೆ.

English summary
Indian American Sirisha Bandla will be one of the six space travellers aboard VSS Unity of Virgin Galactic’s founder Richard Branson, when it is scheduled to blast off on July 11 from New Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X