ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಹಲ್ಲೆ

ಪೀಟ್ಸ್ ಬರ್ಗ್ ನ ಸೌತ್ ಹಿಲ್ಸ್ ವಿಲೇಜೇ ನಲ್ಲಿರುವ ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಜೆಫ್ರೆ ಅರೆನ್ ಬರ್ಗಿಸ್ ಎಂಬಾತನಿಂದ ಭಾರತೀಯ ಮೂಲದ ಅಂಕುರ್ ಮೆಹ್ತಾ ಎಂಬುವರ ಮೇಲೆ ಹಲ್ಲೆ.

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 18: ಕನ್ಸಾಸ್ ನಲ್ಲಿ ಇತ್ತೀಚೆಗಷ್ಟೇ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ನನ್ನು ದುಷ್ಕರ್ಮಿಯೊಬ್ಬ ಮುಸ್ಲಿಮನೆಂದು ತಪ್ಪಾಗಿ ಅರ್ಥೈಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ವಾಷಿಂಗ್ಟನ್ ನಲ್ಲಿ ಮಾರ್ಚ್ 18ರಂದು ಭಾರತೀಯ ಮೂಲದವ ವ್ಯಕ್ತಿ ಮೇಲೆ ಮುಸ್ಲಿಂ ಎಂದು ಭಾವಿಸಿ ದಾಳಿಯಾಗಿರುವ ಬಗ್ಗೆ ವರದಿಯಾಗಿದೆ.

ಈ ಬಾರಿ ದಾಳಿಗೀಡಾಗಿರುವವರು ಅಂಕುರ್ ಮೆಹ್ತಾ. ಇಪ್ಪತ್ತೆರಡು ವರ್ಷ ವಯಸ್ಸಿನ ಮೆಹ್ತಾ, ಪೀಟ್ಸ್ ಬರ್ಗ್ ನ ಸೌತ್ ಹಿಲ್ಸ್ ವಿಲೇಜೇ ನಲ್ಲಿರುವ ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಜೆಫ್ರೆ ಅರೆನ್ ಬರ್ಗಿಸ್ ಎಂಬಾತ ಮೆಹ್ತಾ ಮೇಲೆ ಹಲ್ಲೆ ಮಾಡಿದ್ದಾನೆ.[2018ನೇ ವರ್ಷದ ಎಚ್- 1ಬಿ ವೀಸಾಕ್ಕಾಗಿ ಏ. 3ರಿಂದ ಅರ್ಜಿ ಆಹ್ವಾನ]

Indian-American assaulted on suspicion of being Muslim in Washington

ಮೆಹ್ತಾ ಅವರು ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು ಏಷ್ಯಾ ಮೂಲದ ಜನಾಂಗೀಯ ಮುಖ ಚಹರೆ ಹೊಂದಿರುವುದರಿಂದ ಬರ್ಗಿಸ್, ಮೆಹ್ತಾ ಅವರನ್ನು ಮುಸ್ಲಿಂ ಎಂದು ತಪ್ಪಾಗಿ ಅರ್ಥೈಸಿದ್ದಾನೆಂದು ಹೇಳಲಾಗಿದೆ.[ಫೇಸ್ ಬುಕ್ ನಲ್ಲಿ ಕನ್ಸಾಸ್ ಶೂಟೌಟ್ ದುರ್ದೈವಿ ಶ್ರೀನಿವಾಸ್ ಪತ್ನಿಯ ಬಹಿರಂಗ ಪತ್ರ]

ಸ್ಥಳೀಯ ಸುದ್ದಿ ವಾಹಿನಿಯಾದ ಡಬ್ಲ್ಯೂಟಿಎಈ- ಟಿವಿ ಪ್ರಕಾರ, ರೆಡ್ ರಾಬಿನ್ ರೆಸ್ಟೋರೆಂಟ್ ನಲ್ಲಿ ಬರ್ಗಿಸ್, ಮೆಹ್ತಾ ಕುಳಿತಿದ್ದ ಪಕ್ಕದ ಟೇಬಲ್ ನಲ್ಲೇ ಕುಳಿತಿದ್ದ. ಮೆಹ್ತಾ ಅವರನ್ನು ನೋಡಿದ ಕೂಡಲೇ ಅವರನ್ನು ಮೂದಲಿಸಲು ಶುರು ಮಾಡಿದ್ದಾನೆ.

ಆದರೆ, ತಮ್ಮ ಟ್ಯಾಬ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದ ಮೆಹ್ತಾ, ಆ ಕಡೆ ಗಮನ ಕೊಟ್ಟಿಲ್ಲ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ '' ನಿನ್ನಂಥವರು ನನ್ನ ಪಕ್ಕ ಕುಳಿತುಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ತೊಲಗು'' ಎನ್ನುತ್ತಾ ಆತ ಮೆಹ್ತಾ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಪ್ರತ್ಯಕ್ಷದರ್ಶಿಗಳು ಹಲ್ಲೆ ನಡೆಸುವಾಗ ಬರ್ಗಿಸ್, ಮೆಹ್ತಾರನ್ನು ಮುಸ್ಲಿಂ, ಮುಸ್ಲಿಂ ಎಂದು ಏನೇನೋ ಬಡಬಡಿಸುತ್ತಿದ್ದ ಎಂದು ತಿಳಿಸಿದ್ದಾರೆ.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]

10 ವರ್ಷ ಜೈಲು: ಈ ಹಲ್ಲೆಯಿಂದಾಗಿ, ಮೆಹ್ತಾಗೆ ಮೊಣಕೈ, ಬೆನ್ನು, ಕಾಲುಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ. ಅತ್ತ, ಬರ್ಗಿಸ್ ನನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನ ವಿರುದ್ಧ ಜನಾಂಗೀಯ ನಿಂದನೆ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ನ್ಯಾಯಾಲಯವು ಆತನಿಗೆ ಎರಡೂವರೆ ಲಕ್ಷ ಡಾಲರ್ ದಂಡ (ಭಾರತೀಯ ಕರೆನ್ಸಿಯಲ್ಲಿ ಸುಮಾರು 1 ಕೋಟಿ, 63 ಲಕ್ಷ ರು. ) ಹಾಗೂ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

English summary
A United States man has been indicted on a hate crime charge for assaulting an Indian-origin man and hurling racial slurs, mistaking him for a Muslim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X