ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು?

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 26: ಭಾರತೀಯ ವಾಯು ಸೇನೆಯ ಬಲಿಷ್ಠ ಯುದ್ಧ ವಿಮಾನ ಮಿರಾಜ್ 2000 ನಡೆಸಿದ ಏರ್‌ಸ್ಟ್ರೈಕ್ ನಡುಗಿರುವ ಪಾಕಿಸ್ತಾನ ನಾವು ತಕ್ಷಣ ಎಚ್ಚೆತ್ತುಕೊಂಡಿದ್ದೆವು ಹಾಗಾಗಿ ವಿಮಾನ ವಾಪಾಸಾಗಿದೆ ಎಂದು ಹೇಳುತ್ತಿದೆ.

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ 3.30ರ ಸುಮಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದೆ. ಇದರಿಂದ ಕಳೆದ ರಾತ್ರಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್ ಸ್ಟ್ರೈಕ್ ಮಾಡಿರುವುದು ಸತ್ಯ ಎಂಬಂತಾಗಿದೆ.

ಪುಲ್ವಾಮಾ ಪ್ರತೀಕಾರ LIVE: ಉಗ್ರನೆಲೆ ಮೇಲೆ 1000 ಕೆಜಿ ಬಾಂಬ್ ಎಸೆದ ಭಾರತಪುಲ್ವಾಮಾ ಪ್ರತೀಕಾರ LIVE: ಉಗ್ರನೆಲೆ ಮೇಲೆ 1000 ಕೆಜಿ ಬಾಂಬ್ ಎಸೆದ ಭಾರತ

ಇನ್ನು ಈ ಬಗ್ಗೆ ಸ್ವತಃ ಪಾಕಿಸ್ತಾನ ಒಪ್ಪಿಕೊಂಡಿದ್ದು ಕಳೆದ ರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿತ್ತು.

ಈ ವೇಳೆ ನಾವು ಎಚ್ಚೆತ್ತು ತಕ್ಷಣೆ ಕಾರ್ಯಾಚರಣೆ ಕೈಗೊಂಡೆವು ಇದರಿಂದ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಖಾಲಿ ಕೈಯಲ್ಲಿ ವಾಪಸಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.

ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಕಳೆದ ರಾತ್ರಿ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆಜಿ ಬಾಂಬ್ ದಾಳಿ ಮಾಡಿದೆ.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

ದಾಳಿ ವೇಳೆ ಜೈಷ್ ಉಗ್ರರ ಮೂರು ಅಲ್ಫಾ ಕಂಟ್ರೋಲ್ ರೂಂಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲ ಬಾರಿಗೆ ಏರ್ ಫೋರ್ಸ್ ಬಳಕೆ ಮಾಡಿದ್ದು ಒಂದು ಸಾರಿ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಮಿರಾಜ್ ತನ್ನ ಗುರಿಯನ್ನು ತಪ್ಪಲ್ಲ.

ಮಿರಾಜ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಯುದ್ಧ ವಿಮಾನವಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಎನ್.ವಿ.ತ್ಯಾಗಿ ಹೇಳಿದ್ದಾರೆ.

ಜೈಷ್ ಉಗ್ರರ ಮೂರು ಅಲ್ಟ್ರಾ ಕಂಟ್ರೋಲ್ ರೂಮ್ ಧ್ವಂಸ

ಜೈಷ್ ಉಗ್ರರ ಮೂರು ಅಲ್ಟ್ರಾ ಕಂಟ್ರೋಲ್ ರೂಮ್ ಧ್ವಂಸ

ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಭಾರತೀಯ ವಾಯು ಸೇನೆ ಕಾಶ್ಮೀರ ಗಡಿ ಭಾಗದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಜೈಷ್ ಉಗ್ರರ ಮೂರು ಅಲ್ಫಾ ಕಂಟ್ರೋಲ್ ರೂಂಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಏರ್ ಸರ್ಜಿಕಲ್ ಸ್ಟ್ರೈಕ್ ಬಳಸಿಕೊಳ್ಳಲಾಗಿದೆ.

47ವರ್ಷಗಳ ನಂತರ ಪಾಕಿಸ್ತಾನದೊಳಗೆ ನುಗ್ಗಿದ ಇಂಡಿಯನ್ ಏರ್ಫೋರ್ಸ್47ವರ್ಷಗಳ ನಂತರ ಪಾಕಿಸ್ತಾನದೊಳಗೆ ನುಗ್ಗಿದ ಇಂಡಿಯನ್ ಏರ್ಫೋರ್ಸ್

ಮಿರಾಜ್ ಯುದ್ಧ ವಿಮಾನವನ್ನೇ ಬಳಸಿದ್ದು ಯಾಕೆ?

ಮಿರಾಜ್ ಯುದ್ಧ ವಿಮಾನವನ್ನೇ ಬಳಸಿದ್ದು ಯಾಕೆ?

ಮೊದಲ ಬಾರಿಗೆ ಏರ್ ಫೋರ್ಸ್ ಬಳಕೆ ಮಾಡಿದ್ದು ಒಂದು ಸಾರಿ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಮಿರಾಜ್ ತನ್ನ ಗುರಿಯನ್ನು ತಪ್ಪಲ್ಲ. ಮಿರಾಜ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಯುದ್ಧ ವಿಮಾನವಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಎನ್.ವಿ.ತ್ಯಾಗಿ ಹೇಳಿದ್ದಾರೆ.

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ

ಭಾರತೀಯ ವಾಯುಪಡೆಗೆ ಸಲ್ಯೂಟ್ ಎಂದ ರಾಹುಲ್ ಗಾಂಧಿ

ಭಾರತೀಯ ವಾಯುಪಡೆಗೆ ಸಲ್ಯೂಟ್ ಎಂದ ರಾಹುಲ್ ಗಾಂಧಿ

ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿ ನಡೆದು 12 ದಿನಗಳ ನಂತರ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ವಾಯುದಾಳಿ ನಡೆಸಿದೆ ಎಂಬ ಬಗ್ಗೆ ವರದಿಗಳು ಬರುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ವಾಯುಪಡೆಗೆ ಅಭಿನಂದನೆ ಹೇಳಿದ್ದಾರೆ.

ಇಂದು ನಸುಕಿನ ಜಾವ ಭಾರತೀಯ ವಾಯುಸೇನೆ ಪಾಕಿಸ್ತಾನ ಗಡಿಭಾಗದಲ್ಲಿ ವಾಯುದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆಯಾದರೂ ಭಾರತೀಯ ಸೇನೆಯಿಂದಾಗಲಿ, ಸರ್ಕಾರದಿಂದಾಗಲಿ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸರ್ಜಿಕಲ್ ಸ್ಟ್ರೈಕ್-2: ಭಾರತೀಯ ಸೇನೆಗೆ ಸಲಾಂ ಎಂದ ರಾಹುಲ್ ಗಾಂಧಿಸರ್ಜಿಕಲ್ ಸ್ಟ್ರೈಕ್-2: ಭಾರತೀಯ ಸೇನೆಗೆ ಸಲಾಂ ಎಂದ ರಾಹುಲ್ ಗಾಂಧಿ

21 ನಿಮಿಷ, ಭಾರತದ 3ನೇ ಬಲಿಷ್ಠ ಯುದ್ಧ ವಿಮಾನ ಮಿರಾಜ್ ಕಾರ್ಯಾಚರಣೆ ಹೇಗಿತ್ತು?

21 ನಿಮಿಷ, ಭಾರತದ 3ನೇ ಬಲಿಷ್ಠ ಯುದ್ಧ ವಿಮಾನ ಮಿರಾಜ್ ಕಾರ್ಯಾಚರಣೆ ಹೇಗಿತ್ತು?

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿ ನಡೆಸುತ್ತದೆ ಎಂಬ ಹೆದರಿಕೆಯಲ್ಲಿದ್ದ ಪಾಕಿಸ್ತಾನ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದರು ಅಂತಾರಾಷ್ಟ್ರೀಯ ಗಡಿಯನ್ನೇ ದಾಟಿದ ಭಾರತದ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕವನ್ನೇ ಸೃಷ್ಠಿಸಿ ಯಶಸ್ವಿಯಾಗಿ ಸ್ವದೇಶಕ್ಕೆ ಮರಳಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬರಬೇಕಿದೆ.

ಹೌದು. ಮಿರಾಜ್ 2000 ಯುದ್ಧ ವಿಮಾನ ಲೇಸರ್ ನಿಯಂತ್ರಿತ ಬಾಂಬ್ ಬಳಸಿ ದಾಳಿ ನಡೆಸಿದೆ. ಪಾಕಿಸ್ತಾನದ ರೇಡಾರ್ ಅನ್ನೇ ಕಣ್ತಪ್ಪಿಸಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿದೆ. ಪಂಜಾಬ್ ನ ಆದಂಪುರ್ ವಾಯುನೆಲೆಯಿಂದ ರ್ಯಾಪಿಡ್ ಸೀಕ್ ಮತ್ತು ಡೆಸ್ಟ್ರಾಯ್ ಮಿಷನ್ ಶುರು ಮಾಡಲಾಗಿತ್ತು. ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದೆ.

English summary
Pakistan on Tuesday claimed that the Indian Air Force jets crossed the Line of Control following which the former scrambled immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X