ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಟಕ: ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯರು ವಾಪಸ್

|
Google Oneindia Kannada News

ಘಾಝಿಯಾಬಾದ್ ಮಾರ್ಚ್ 10: ಇರಾನ್‌ನಲ್ಲಿ ಕೊರೊನಾ ವೈರಸ್‌ನಿಂದ ಸಿಲುಕಿಹಾಕಿಕೊಂಡಿದ್ದ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಇಂದು (ಮಂಗಳವಾರ) ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಇಂಡಿಯನ್ ಏರ್ ಫೋರ್ಸ್ C 17 ವಿಮಾನ ಅವರೊಂದಿಗೆ ಮರಳಿದೆ.

ಕೊರೊನಾ ವೈರಸ್ ದೇಶ ವಿದೇಶದಲ್ಲಿ ಹರಡಿದೆ. ವಿದೇಶಗಳಲ್ಲಿ ಎಷ್ಟೊ ಮಂದಿ ಭಾರತೀಯರು ಕೊರೊನಾ ವೈರಸ್‌ನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇರಾನ್ ನಲ್ಲಿಯೂ ಭಾರತದ ಪ್ರಯಾಣಿಕರು ಕೊರೊನಾದಿಂದ ಸಿಲುಕಿಹಾಕಿಕೊಂಡಿದ್ದರು. ಈಗ ಅವರು ಸುರಕ್ಷಿತವಾಗಿ ತಾಯಿನಾಡಿಗೆ ಬಂದಿದ್ದಾರೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ಮಾರ್ಚ್ 8 ರಂದು ಇಂಡಿಯನ್ ಏರ್ ಫೋರ್ಸ್ C 17 ಗ್ಲೋಬ್ ಮಾಸ್ಟರ್ ಇರಾನ್‌ಗೆ ಹೊರಟಿತ್ತು. ಹಿಂದೊನ್ ವಾಯು ನೆಲೆಯಿಂದ ಭಾರತೀಯರ ರಕ್ಷಣೆಗಾಗಿ ಹೋಗಿದ್ದು, ಆ ವಿಮಾನ 58 ಭಾರತೀಯರೊಂದಿಗೆ ಇಂದು ಮರಳಿಸಿದೆ. ಇರಾನ್‌ನಿಂದ ಕರೆ ತಂದ ಮೊದಲ ಬ್ಯಾಚ್ ಇದಾಗಿದೆ.

Indian Air Force C-17 Globemaster Carrying Idians From Iran

ಕೆನಡಾದಲ್ಲಿ ಕೊರೊನಾ ವೈರಸ್‌ಗೆ ಮೊದಲ ಬಲಿಕೆನಡಾದಲ್ಲಿ ಕೊರೊನಾ ವೈರಸ್‌ಗೆ ಮೊದಲ ಬಲಿ

ಇರಾನ್‌ನಿಂದ ಬಂದ ಪ್ರಯಾಣಿಕರಿಗೆ ಹಿಂದೊನ್ ವಾಯು ನೆಲೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ತಪಾಸಣೆಗೆ ಮಾಡಿ, ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗುವುದು.

English summary
Indian Air Force C-17 Globemaster carrying the first batch of 58 Indian pilgrims from Tehran, Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X