ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಕೃಷಿ ವಿಜ್ಞಾನಿಗೆ ದಕ್ಷಿಣ ಕೊರಿಯಾ ಪ್ರಶಸ್ತಿ

By Vanitha
|
Google Oneindia Kannada News

ಸಿಯೋಲ್, ಆಗಸ್ಟ್, 29 : ಭಾರತದ ಖ್ಯಾತ ಕೃಷಿ ವಿಜ್ಞಾನಿ ಡಾ. ಮೊಡಡುಗು ವಿಜಯ್ ಗುಪ್ತಾ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಗುಪ್ತಾ ಅವರು ಭಾರತ, ಬಾಂಗ್ಲಾದೇಶ ಹಾಗೂ ದಕ್ಷಿಣ ಪೂರ್ವ ದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಮೊದಲ ಸನ್ ಹಾಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ 6 ಕೋಟಿ ರೂ ಮೊತ್ತವನ್ನು ಒಳಗೊಂಡಿದೆ.[ಭಾರತದ ಇಬ್ಬರು ಸಾಧಕರಿಗೆ ಮ್ಯಾಗ್ಸೆಸ್ಸೆ ಪುರಸ್ಕಾರ]

Indian Agricultural scientist got a South korea award

ಗುಪ್ತಾ ಕಿರಿಬತಿ ದ್ವೀಪ ಸಮೂಹದ ಅಧ್ಯಕ್ಷ ಅನೋಟ್ ಟಾಂಗ್ ಅವರೊಂದಿಗೆ ಈ ಪ್ರಶಸ್ತಿ ಹಂಚಿಕೊಂಡ ಇವರು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಕೃಷಿ ಸಂಸ್ಥೆಗಳೊಂದಿಗೆ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸಿದ ಇವರು ಕೃಷಿ ಕ್ಷೇತ್ರಗಳಲ್ಲಿ ವಿಭಿನ್ನ ಪ್ರಯೋಗಗಳನ್ನು ಕೈಗೊಂಡಿದ್ದಾರೆ.

ಸನ್ ಹಾಕ್ ಪ್ರಶಸ್ತಿಯು ನೊಬೆಲ್ ಶಾಂತಿ ಪ್ರಶಸ್ತಿಗೆ ಸಮಾನವಾಗಿದ್ದು, ಈ ಪುರಸ್ಕಾರವನ್ನು ದಕ್ಷಿಣ ಕೊರಿಯಾದ ಧಾರ್ಮಿಕ ನಾಯಕಿ ಡಾ. ಜಾಕ್ ಜಾ ಹ್ಯಾನ್ ಮೂನ್ ಪ್ರದಾನ ಮಾಡಿದ್ದಾರೆ. ಇದನ್ನು ಜನ ಕಲ್ಯಾಣ, ಅಭಿವೃದ್ಧಿಗಾಗಿ ಅವಿರತ ಶ್ರಮಿಸುವವರಿಗಾಗಿ ಜಾ ಅವರ ಪತಿ ದಿ. ರೆವ್ ಸನ್ ಮೈಯೂಂಗ್ ಮೂನ್ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.

ಡಾ. ಮೊಡಡುಗು ವಿಜಯ ಗುಪ್ತಾ ಯಾರು?

ಗುಪ್ತಾ ಅವರು ಮೂಲತಃ ಆಂಧ್ರಪ್ರದೇಶದ ಬಪಟ್ಲಾ ರಾಜ್ಯದವರು. ಇವರು ಪ್ರಸ್ತುತ ಅಂತರಾಷ್ಟ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ಬರುವ ಮಲೇಷಿಯಾದ ಅಂತರಾಷ್ಟ್ರೀಯ ಕೃಷಿ ಸಂಶೋಧನಾ ಸಮೂಹದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಮೀನುಗಾರಿಕೆಯಲ್ಲಿ ಕೆಲವು ಸಂಶೋಧನೆ ಕೈಗೊಂಡು ಗ್ರಾಮೀಣ ಬಡವರಿಗೆ ಮೀನುಗಾರಿಕೆಯಲ್ಲಿ ಸುಲಭ ತಂತ್ರಜ್ಞಾನ ಕುರಿತಾಗಿ ಕೆಲವು ತಂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ.

English summary
Indian agricultural scientist Dr. Modadugu Vijay Gupta got the South Korea award. He is Born on August 17, 1939, Dr. Gupta hails from Bapatla in the State of Andhra Pradesh, India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X