ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IndiaforIAS ಅಕಾಡೆಮಿ 21 ಅಭ್ಯರ್ಥಿಗಳು UPSC ಪರೀಕ್ಷೆಯಲ್ಲಿ ಉತ್ತೀರ್ಣ

|
Google Oneindia Kannada News

ಬೆಂಗಳೂರು, ಸೆ. 26: ಕೇಂದ್ರ ಲೋಕ ಸೇವಾ ಆಯೋಗದ ನಡೆಸಿದ 2020-21 ನೇ ಸಾಲಿನ ಪರೀಕ್ಷೆಯಲ್ಲಿ ಇಂಡಿಯಾ ಫರ್ ಐಎಎಸ್ ಅಕಾಡೆಮಿಯ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೇಂದ್ರ ಲೋಕ ಸೇವಾ ಆಯೋಗದ ನಡೆಸಿದ ಪರೀಕ್ಷೆಯಲ್ಲಿ ಕರ್ನಾಟಕದಿಂದ 31 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸಂತಸ ತಂದಿದೆ ಎಂದು ಅಕಾಡೆಮಿಯ ಆಡಳಿತ ಮಂಡಳಿ ಅಧ್ಯಕ್ಷರು ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಎಸ್. ಕೇದಾರ್ ಅವರು ಸಂತಸ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ಕರ್ನಾಟಕದಿಂದ ಆಯ್ಕೆಯಾದ ಬಹುತೇಕರು ಕಿರಿಯ ವಯಸ್ಸಿನವರು ಅವರಿಗೆ 35ವರ್ಷ ಕಾಲ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭಿಸುತ್ತದೆ. ಕಡು ಬಡವರು ದೆಹಲಿಗೆ ಹೋಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲ ಅದ್ದರಿಂದ ಬೆಂಗಳೂರಿನಲ್ಲಿ ಐ.ಎ.ಎಸ್ ತರಬೇತಿ ಆರಂಭಿಸಲಾಯಿತು ಒಂದು ವರ್ಷದಲ್ಲಿ 21 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ'' ಎಂದು ಸಂತಸ ವ್ಯಕ್ತಪಡಿಸಿದರು.

India4IAS academy students success in 2020-21 UPSC exam

ನಮ್ಮ ಸಂಸ್ಥೆಯಲ್ಲಿ ಕಡಿಮೆ ವೆಚ್ಚದಲ್ಲಿ ಐ.ಎ.ಎಸ್.ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ . ಮುಂದಿನ ದಿನಗಳಲ್ಲಿ ಬೆಂಗಳೂರುನಗರ ಐ.ಎ.ಎಸ್.ಪರೀಕ್ಷಾ ತರಬೇತಿ ಪಡೆಯುವ ಉತ್ತಮ ಸ್ಥಳವಾಗಲಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ, ಐ.ಎ.ಎಸ್.ಪರೀಕ್ಷೆ ಬರೆಯಲು ಉತ್ತಮ ಕೋಚಿಂಗ್ ನೀಡಲಾಗುತ್ತದೆ ಎಂದು ಹೇಳಿದರು.

ಇಂಡಿಯಾ ಫಾರ್ ಐ.ಎ.ಎಸ್.ಅಕಾಡೆಮಿಯ ಸಂಸ್ಥಾಪಕರಾದ ಶ್ರೀನಿವಾಸ್ ರವರು ನಿರ್ದೇಶಕರಾದ ಬಾಬು ಸಂದೀಪ್, ಪ್ರಶಾಂತ್ ರವರು ನಯನ್ ರವರು ಮತ್ತು ಐ.ಎ.ಎಸ್.ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆಯಲ್ಲಿ ಉತ್ತಿರ್ಣರಾದ 468 Rank ಪಡೆದಿರುವ ಬಿಂದು, 741 Rank ಗಳಿಸಿರುವ ಸಂದೀಪ್, 255 Rank ಗಳಿಸಿರುವ ಸೂರಜ್ .ಡಿ. 751 Rank ಪಡೆದಿರುವ ಸಂತೋಷ್ ತಮ್ಮ ಯಶಸ್ಸಿನ ಅನುಭವ ಹಂಚಿಕೊಂಡರು.

India4IAS academy students success in 2020-21 UPSC exam

ಕೇಂದ್ರ ಲೋಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ದೊಡ್ಡ ಕಷ್ಟವೇನಲ್ಲ. ಆದರೆ, ಎಲ್ಲವನ್ನೂ ತ್ಯಜಿಸಿ ಏಕಾಗ್ರತೆಯಿಂದ ಓದಬೇಕು. ನಾನು ಯಶಸ್ಸು ಗಳಿಸಿಯೇ ತೀರುತ್ತೇನೆ ಎಂಬ ಅಚಲ ನಂಬಿಕೆ ಇಟ್ಟುಕೊಳ್ಳಬೇಕು. ಐಎಎಸ್ ಪರೀಕ್ಷೆ ಬರೆಯುವ ಮುನ್ನ ಪೂರ್ವ ತಯಾರಿ ಮುಖ್ಯ. ಅದರ ಜತೆಗೆ ಮಾರ್ಗದರ್ಶನ ಕೂಡ ಮುಖ್ಯ. ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ನೀಡಿದ ಮಾರ್ಗದರ್ಶನ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಹಕಾರಿ ಆಯಿತು ಎಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

India4IAS academy students success in 2020-21 UPSC exam

ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇಂಡಿಯಾ ಫರ್ ಐಎಎಸ್ ಅಕಾಡೆಮಿಯಲ್ಲಿ 360 ಕ್ಕಿಂತಲೂ ಹೆಚ್ಚು ಸೇವಾ ನಿರತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲ್ಲಿ ಮಾರ್ಗದರ್ಶನ ನೀಡುವ ಬಹುತೇಕರು ಸಂದರ್ಶನಕ್ಕೆ ಹೋಗಿ ಬಂದಿರುವಂತಹ ಪ್ರತಿಭಾನ್ವಿತರು. ಪ್ರತಿಯೊಬ್ಬರು ಯಶಸ್ಸು ಗಳಿಸುವಂತಹ ವಾತಾವರಣ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ದೇಶ ಸೇವೆಗೆ ಸೇರಬೇಕೆಂಬ ಕಲ್ಪನೆಯಿಂದ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಹುಟ್ಟು ಹಾಕಿದ್ದೇವೆ. ಪ್ರಸ್ತುತ ನಾನೂರಕ್ಕೂಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಪ್ರಮಾಣದ ವಿದ್ಯಾರ್ಥಿಗಳು ಉತ್ತೀರ್ಣ ಆಗಿರುವುದು ಸಂತಸ ತಂದಿದೆ. ಅತಿ ಕಡಿಮೆ ಶುಲ್ಕದಲ್ಲಿ ಲೋಕಸೇವೆ ಹಾಗೂ ರಾಜ್ಯ ಸೇವೆಗೆ ವಿದ್ಯಾರ್ಥಿಗಳನ್ನು ತಯಾರಿ ನಡೆಸಿ ಅವರು ಯಶಸ್ಸು ಆಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

India4IAS academy students success in 2020-21 UPSC exam

Recommended Video

ಶತೃ ದೇಶಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಸ್ನೇಹಾ ದುಬೆ ಈಗ ಟ್ರೆಂಡಿಂಗ್ | Oneindia Kannada

ಕನ್ನಡದ ಮಕ್ಕಳು ಹೆಚ್ಚು ಕೇಂದ್ರ ಸೇವೆಗೆ ಆಯ್ಕೆಯಾಗಬೇಕು ಎಂಬುದು ನಮ್ಮದು ಏಕೈಕ ಗುರಿ. ಹಳ್ಳಿ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಬಡತನ ಹಿನ್ನೆಲೆ ಹೊಂದಿದವರಿಗೆ ವಿದ್ಯಾರ್ಥಿ ವೇತನಿಂದ ಓದಲು ಅವಕಾಶವಿದೆ. ಪ್ರತಿಭಾನ್ವಿತ ಮಕ್ಕಳು ಸರ್ಕಾರಿ ಸೇವೆಗೆ ಸೇರಬೇಕು ಎಂಬುದೇ ನನ್ನ ಅಭಿಲಾಷೆ. ನನ್ನ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಸಿವಿಲ್ ಸೇವೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯಗಳ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಸಂತೋಷ ನನಗಿದೆ ಎಂದು ಶ್ರಿನಿವಾಸ್ 'ಒನ್ಇಂಡಿಯಾ ಕನ್ನಡ' ಜತೆ ಸಂತಸ ವ್ಯಕ್ತಪಡಿಸಿದರು.

English summary
UPSC exam result 2020-21: India for IAS academy CEO Srinivas opinion about IAS exam and coaching know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X