ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಸ್ವಿಸ್ ಖಾತೆ ರಹಸ್ಯ ಬಯಲು, ಭಾರತೀಯರ ಠೇವಣಿ ಎಷ್ಟಿದೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಭಾರತ ಹಾಗೂ ಸ್ವಿಸ್ ಬ್ಯಾಂಕ್‌ನ ರಹಸ್ಯಗಳು ದಶಕಗಳ ಹಳೆಯ ಸುದ್ದಿಯಾಗಿದೆ.

ಆದರೆ ಇಂದಿನಿಂದ ಸ್ವಿಸ್ ಬ್ಯಾಂಕಿನ ಕತೆಗಳು ರಹಸ್ಯವಾಗಿರಲು ಸಾಧ್ಯವಿಲ್ಲ, ಸ್ವಿಸ್ ಖಾತೆಯಲ್ಲಿನ ಎಲ್ಲಾ ಮಾಹಿತಿಗಳು ಇನ್ನು ನೇರವಾಗಿ ಭಾರತ ಸರ್ಕಾರಕ್ಕೆ ಇಂದಿನಿಂದ ರವಾನೆಯಾಗಲಿದೆ.

2018 ಕ್ಯಾಲೆಂಡರ್ ವರ್ಷದಿಂದ ಹಿಡಿದು ಸ್ವಿಸ್ ಬ್ಯಾಂಕ್‌ನಲ್ಲಿನ ಎಲ್ಲಾ ಭಾರತೀಯರ ಖಾತೆಗಳ ಮಾಹಿತಿ ಇಂದಿನಿಂದ ಭಾರತಕ್ಕೆ ವರ್ಗಾವಣೆಯಾಗಲಿದೆ.

Swiss Banking Details

ಖಾತೆದಾರರ ವಿವರ, ಹಣ, ವರ್ಗಾವಣೆ ಖಾತೆ ರದ್ದತಿ ಸೇರಿ ಪ್ರತಿ ವಿವರಗಳು ಕೂಡ ತನ್ನಿಂತಾನೆ ವರ್ಗಾವಣೆಯಾಗಲಿದೆ.

ಕಪ್ಪು ಹಣ ನಿಯಂತ್ರಣ ಸಲುವಾಗಿ ಭಾರತ ಸರ್ಕಾರ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿತ್ತು. ಭಾರತದ ಸಿಬಿಟಿಡಿ ಹಾಗೂ ಸ್ವಿಸ್ ಬ್ಯಾಂಕ್ ನಡುವೆ ಎಲ್ಲಾ ನೀತಿ-ನಿಯಮಗಳು ಅಂತಿಮಗೊಂಡ ಬಳಿಕ ನೇರ ಮಾಹಿತಿ ರವಾನೆ ವ್ಯವಸ್ಥೆ ಅಂತಿಮಗೊಂಡಿದೆ.

ಬ್ಯಾಂಕುಗಳನ್ನು ಮುಚ್ಚುವ ವದಂತಿ ನಂಬಬೇಡಿ: ಆರ್‌ಬಿಐ ಮನವಿಬ್ಯಾಂಕುಗಳನ್ನು ಮುಚ್ಚುವ ವದಂತಿ ನಂಬಬೇಡಿ: ಆರ್‌ಬಿಐ ಮನವಿ

ಒಂದು ಕಾಲದಲ್ಲಿ ಸಾವಿರಾರು ಕೋಟಿ ಹಣವನ್ನು ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿದ್ದರು. ಆದರೆ ಈ ಒಪ್ಪಂದ ಆಗುತ್ತಿದ್ದಂತೆ ಅಲ್ಲಿಂದ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಸ್ವಿಸ್ ಬ್ಯಾಂಕ್ ಖಾತೆಯಲ್ಲಿನ ಹಣ ಕಡಿಮೆಯಾಗುತ್ತಿದೆ.

ಸಧ್ಯಕ್ಕೆ ಸ್ವಿಸ್‌ಬ್ಯಾಂಕ್‌ನಲ್ಲಿ ಭಾರತೀಯರು ಕೇಲ 2,500 ಕೋಟಿ ರೂ ಠೇವಣಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಕ್ಕೂ ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆಲ್ಲರೂ ಅಕ್ರಮ ಖಾತೆ ಎಂದೇನಲ್ಲ, ತೆರಿಗೆ ಪಾವತಿಸಿ ಕಾನೂನು ಬದ್ಧವಾಗಿಯೂ ಖಾತೆ ಹೊಂದಲು ಅವಕಾಶವಿದೆ. ಹೀಗಾಗಿ ಕಪ್ಪು ಹಣ ಹೊಂದಿರುವವರೂ ಈ ಬ್ಯಾಂಕ್‌ನಿಂದ ಹಣ ವರ್ಗಾಯಿಸಿದ್ದಾರೆ ಎನ್ನುವ ಆರೋಪಗಳೂ ಇವೆ.

ಈ ರೀತಿ ಕಪ್ಪು ಹಣವನ್ನು ಪೋಷಿಸುವ ಅಥವಾ ತೆರಿಗೆ ಸ್ವರ್ಗ ಬ್ಯಾಂಕ್‌ಗಳ ಜೊತೆಗೂ ಒಪ್ಪಂದ ಮಾಡಿಕೊಳ್ಳುವವರೆಗೂ ಕಪ್ಪು ಹಣ ನಿಯಂತ್ರಣ ಅಸಾಧ್ಯ.

English summary
Swiss Bank Details, India to get Swiss bank detailes, India Will Get Swiss Banking Details Of Indians From Today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X