ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022 ರೊಳಗೆ ರಷ್ಯಾದಿಂದ ಭಾರತಕ್ಕೆ 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ

|
Google Oneindia Kannada News

ಮಾಸ್ಕೋ, ಮೇ 10: 2022ರ ಮಾರ್ಚ್‌ರೊಳಗೆ ರಷ್ಯಾದಿಂದ ಸುಮಾರು 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತಕ್ಕೆ ಬರಲಿದ್ದು, ಇದರಿಂದ 36 ಕೋಟಿ ಭಾರತೀಯರಿಗೆ ಪ್ರಯೋಜನವಾಗಲಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಹಂತವಾಗಿ ಮೇ 1 ರಂದು 1.5 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತಕ್ಕೆ ರವಾನಿಸಲಾಗಿದೆ. ಎರಡನೇ ಹಂತದಲ್ಲಿ ಇಷ್ಟೇ ಸಂಖ್ಯೆಯ ಲಸಿಕೆ ಶೀಘ್ರದಲ್ಲಿಯೇ ಭಾರತಕ್ಕೆ ರವಾನೆಯಾಗಲಿದೆ. ಮೇ ತಿಂಗಳಲ್ಲಿ 3 ಮಿಲಿಯನ್, ಜೂನ್‌ನಲ್ಲಿ 5 ಮತ್ತು ಜುಲೈನಲ್ಲಿ 10 ಮಿಲಿಯನ್ ಸೇರಿದಂತೆ 18 ಮಿಲಿಯನ್ ಸ್ಪುಟ್ನಿಕ್ ವಿ ಡೋಸ್‌ಗಳನ್ನು ಭಾರತ ಪಡೆಯಲಿದೆ.

ರಷ್ಯಾದ ಸಾರ್ವಭೌಮತ್ವ ಸಂಪತ್ತು ನಿಧಿ ಲಸಿಕೆಗೆ ಹಣ ನೀಡಿದ್ದು, 850 ಮಿಲಿಯನ್ ಡೋಸ್ ಉತ್ಪಾದನೆಗೆ ಭಾರತದ ಐದು ಕಂಪನಿಗಳೊಂದಿಗೆ ಸಹಿ ಹಾಕಿದೆ.

India To Get 361 Million Doses Of Russias COVID-19 Vaccine Sputnik Vs By The End Of March 2022

ಭಾರತದಲ್ಲಿ ಡೋಸ್ ಉತ್ಪಾದಿಸುವುದು ಮಾತ್ರವಲ್ಲದೇ, ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಬಹುದಾಗಿದೆ. ಜೂನ್ 2020ರಿಂದ ಮಾರ್ಚ್ 2021ರವರೆಗೂ ಸುಮಾರು 238 ಮಿಲಿಯನ್ ಡೋಸ್‌ನ್ನು ಭಾರತದಲ್ಲಿಯೇ ಉತ್ಪಾದಿಸಲಾಗಿದೆ. ಭಾರತವು 11 ಮಿಲಿಯನ್ ಡೋಸ್ ಅನ್ನು ಅಂತಿಮ ರೂಪದಲ್ಲಿ ಪಡೆಯುವ ಸಾಧ್ಯತೆಯಿದೆ.

ಈಗಾಗಲೇ ಭಾರತದಲ್ಲಿ ಅನುಮತಿ ಪಡೆದಿರುವ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆಯ ಬಳಿಕ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಆಗಿದ್ದು, 60ಕ್ಕೂ ಹೆಚ್ಚು ರಾಷ್ಟ್ರಗಳು ಈ ಲಸಿಕೆ ನೀಡಲು ಅನುಮತಿ ನೀಡಿವೆ.

English summary
About 361 million doses of Sputnik V Corona vaccine is expected to come to India by the March 2022, according to officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X