ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣಕ್ಕೆ ಭಾರತದ ತಿರುಗೇಟು

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಮರುನಾಮಕರಣ ಮಾಡಿರುವ ಚೀನಾದ ನಿರ್ಧಾರವನ್ನು ಭಾರತವು ಬಲವಾಗಿ ತಿರಸ್ಕರಿಸಿದೆ. ಈ ರಾಜ್ಯವು "ಎಂದಿಗೂ" ಮತ್ತು "ಯಾವಾಗಲೂ" ಭಾರತದ ಅವಿಭಾಜ್ಯ ಅಂಗವಾಗಿದೆ. ಹೊಸ ಹೆಸರಗಳನ್ನು ಇರಿಸುವುದರಿಂದ ಈ ಸತ್ಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ದಕ್ಷಿಣ ಟಿಬೆಟ್ ಎಂದು ಹೇಳಿಕೊಳ್ಳುವ ಚೀನಾ, ಅರುಣಾಚಲ ಪ್ರದೇಶದ ಇನ್ನೂ 15 ಸ್ಥಳಗಳಿಗೆ ಚೀನಾದ ಹೆಸರುಗಳನ್ನು ಬೀಜಿಂಗ್ ಘೋಷಿಸಿದೆ. ಇದರ ಬೆನ್ನಲ್ಲೇ ಭಾರತವು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ.

"ನಾವು ಇಂತಹದನ್ನು ನೋಡಿದ್ದೇವೆ. ಚೀನಾವು ಅರುಣಾಚಲ ಪ್ರದೇಶದಲ್ಲಿ ಸ್ಥಳಗಳ ಮರುನಾಮಕರಣಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಚೀನಾ ಏಪ್ರಿಲ್ 2017ರಲ್ಲಿ ಕೂಡ ಇದೇ ರೀತಿ ಹೆಸರುಗಳನ್ನು ಮರುನಾಮಕರಣ ಮಾಡಲು ಪ್ರಯತ್ನಿಸಿತ್ತು," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

India strongly rejected Chinas renaming some places in Arunachal Pradesh

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ:

ಚೀನಾವು ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ತನ್ನದೇ ಭಾಷೆಯಲ್ಲಿ ಮರುನಾಮಕರಣ ಮಾಡಿದೆ ಎಂಬ ವರದಿಗಳ ಕುರಿತು ಮಾಧ್ಯಮದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದರು. "ಅರುಣಾಚಲ ಪ್ರದೇಶವು ಎಂದಿಗೂ ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವುದರಿಂದ ಈ ಸತ್ಯವನ್ನು ಬದಲಾಯಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಚೀನಾದಿಂದ 15 ಸ್ಥಳಗಳ ಮರುನಾಮಕರಣ:

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಬುಧವಾರ ಪ್ರಕಟಿಸಿದ್ದು, ಚೀನಾದ ಅಕ್ಷರಗಳು, ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯಲ್ಲಿ ಅರುಣಾಚಲ ಪ್ರದೇಶದ ಚೀನೀ ಹೆಸರು ಜಂಗ್ನಾನ್‌ನಲ್ಲಿ 15 ಸ್ಥಳಗಳ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ. ಇದು ಸ್ಟೇಟ್ ಕೌನ್ಸಿಲ್, ಚೀನಾ ಕ್ಯಾಬಿನೆಟ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿದೆ ಎಂದು ಚೀನಾ ಸರ್ಕಾರದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

ಯಾವ ಯಾವ ಸ್ಥಳಗಳಿಗೆ ಮರುನಾಮಕರಣ?:

ನಿಖರವಾದ ರೇಖಾಂಶ ಮತ್ತು ಅಕ್ಷಾಂಶವನ್ನು ನೀಡಲಾದ 15 ಸ್ಥಳಗಳ ಅಧಿಕೃತ ಹೆಸರುಗಳಲ್ಲಿ ಎಂಟು ವಸತಿ ಸ್ಥಳಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಒಂದು ಮೌಂಟೇನ್ ಪಾಸ್ ಇದೆ ಎಂದು ವರದಿ ಹೇಳುತ್ತದೆ. ಇದು ಅರುಣಾಚಲ ಪ್ರದೇಶದ ಸ್ಥಳಗಳಿಗೆ ಎರಡನೇ ಬಾರಿ ಚೀನಾ ನೀಡುತ್ತಿರುವ ಪ್ರಮಾಣಿತ ಹೆಸರುಗಳಾಗಿವೆ. 2017ರಲ್ಲಿ ಮೊದಲ ಬಾರಿಗೆ ಆರು ಸ್ಥಳಗಳ ಪ್ರಮಾಣೀಕೃತ ಹೆಸರುಗಳ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿತ್ತು.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ. ಬೀಜಿಂಗ್‌ನಲ್ಲಿರುವ ಚೀನಾ ಟಿಬೆಟಾಲಜಿ ರಿಸರ್ಚ್ ಸೆಂಟರ್‌ನ ಪರಿಣಿತ ಎಂದು ಹೇಳಲಾದ ಲಿಯಾನ್ ಕ್ಸಿಯಾಂಗ್ಮಿನ್ ಅವರನ್ನು ವರದಿಯು ಉಲ್ಲೇಖಿಸಿದೆ, ಈ ಪ್ರಕಟಣೆಯು ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸ್ಥಳನಾಮಗಳ ರಾಷ್ಟ್ರೀಯ ಸಮೀಕ್ಷೆಯ ಭಾಗವಾಗಿದೆ ಎಂದು ಹೇಳಿಕೊಂಡಿದೆ.

ಚೀನಾ ಇರಿಸಿದ ಹೊಸ ಹೆಸರುಗಳು ಹೀಗಿವೆ:

ಎರಡನೇ ಹಂತದಲ್ಲಿ ಎಂಟು ವಸತಿ ಸ್ಥಳಗಳಿವೆ. ಶಾನನ್ ಪ್ರಿಫೆಕ್ಚರ್‌ನ ಕೋನಾ ಕೌಂಟಿಯಲ್ಲಿರುವ ಸೆಂಗ್‌ಜಾಂಗ್ ಮತ್ತು ಡಾಗ್ಲುಂಗ್‌ಜಾಂಗ್, ನೈಂಗ್‌ಚಿಯ ಮೆಡೋಗ್ ಕೌಂಟಿಯಲ್ಲಿ ಮಣಿ'ಗ್ಯಾಂಗ್, ಡ್ಯೂಡಿಂಗ್ ಮತ್ತು ಮಿಗ್‌ಪೈನ್, ಗೋಲಿಂಗ್, ನೈಂಗ್‌ಚಿಯ ಝಾಯು ಕೌಂಟಿಯಲ್ಲಿರುವ ದಂಬಾ ಮತ್ತು ಶಾನನ್ ಪ್ರಿಫೆಕ್ಚರ್‌ನ ಲುಂಜ್ ಕೌಂಟಿಯ ಮೆಜಾಗ್ ಎಂದು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಮರುನಾಮಕರಣಗೊಳಿಸಿದ ನಾಲ್ಕು ಪರ್ವತಗಳೆಂದರೆ ವಾಮೊ ರಿ, ಡೇಯು ರಿ, ಲುನ್‌ಝುಬ್ ರಿ ಮತ್ತು ಕುನ್‌ಮಿಂಗ್‌ಕ್ಸಿಂಜೆ ಫೆಂಗ್ ಎಂದು ಅದು ಹೇಳಿದೆ. ಎರಡು ನದಿಗಳಾದ ಕ್ಸೆನೋಗ್ಮೊ ಹೆ ಮತ್ತು ದುಲೈನ್ ಹೆ ಮತ್ತು ಪರ್ವತದ ಪಾಸ್ ಅನ್ನು ಕೋನಾ ಕೌಂಟಿಯಲ್ಲಿ ಸೆ ಲಾ ಎಂದು ಹೆಸರಿಸಲಾಗಿದೆ.

Recommended Video

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

English summary
India strongly rejected China's renaming some places in Arunachal Pradesh. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X