ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

777 ಮಿಲಿಯನ್ ಡಾಲರ್ ರಕ್ಷಣಾ ಒಪ್ಪಂದಕ್ಕೆ ಇಸ್ರೇಲ್-ಭಾರತ ಸಹಿ

|
Google Oneindia Kannada News

ಟೆಲ್ ಅವೀವ್(ಇಸ್ರೇಲ್), ಅಕ್ಟೋಬರ್ 24: 777 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಇಸ್ರೇಲ್ ನ ಸರಕಾರಿ ರಕ್ಷಣಾ ಕಂಪನಿಯೊಂದು ಸಹಿ ಹಾಕಿದೆ. ಬರಾಕ್ 8 ಹೆಸರಿನ ದೂರಗಾಮಿ ನೆಲದಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ಮತ್ತು ಭಾರತೀಯ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮಾರಾಟಕ್ಕೆ ಸಹಿ ಮಾಡಲಾಗಿದೆ ಎಂದು ಜೆರುಸಲೇಂನಲ್ಲಿ ಮಾಧ್ಯಮ ವರದಿಗಳು ತಿಳಿಸಿವೆ.

ಭಾರತದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಈ ಯೋಜನೆಯ ಮುಖ್ಯ ಉತ್ಪಾದಕ ಆಗಿರಲಿದೆ ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ತಿಳಿಸಿದೆ. ಐಎಐನಿಂದ ದೂರಗಾಮಿ ನೆಲದಿಂದ ಗಾಳಿಗೆ ಚಿಮ್ಮುವ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಲಾಗುವುದು. ಜತೆಗೆ ಭಾರತೀಯ ನೌಕೆಯ ಏಳು ನೌಕೆಗೆ ಬರಾಕ್ 8 ವಾಯು ಕ್ಷಿಪಣಿ ವ್ಯವಸ್ಥೆಯ ನೌಕಾ ಮಾದರಿಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಐಎಐ ಇಸ್ರೇಲ್ ನ ಅತಿದೊಡ್ಡ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪನ್ನಗಳ ಕಂಪನಿ. ಇದು ಕ್ಷಿಪಣಿ ನಿರೋಧಕಗಳೂ ಸೇರಿ ರಕ್ಷಣಾ ವ್ಯವಸ್ಥೆಗಳ ಅಭಿವೃದ್ಧಿ, ಉತ್ಪಾದನೆ ಹಾಗೂ ಪೂರೈಕೆ ಮಾಡುತ್ತದೆ. ಇದರ ಜತೆಗೆ ಏರಿಯಲ್ ಸಿಸ್ಟಮ್, ಗುಪ್ತಚರ ಮತ್ತು ಸಿಬರ್ ರಕ್ಷಣಾ ವ್ಯವಸ್ಥೆಗಳನ್ನು ಸಹ ಅಭಿವೃದ್ಧಿ ಮತ್ತು ಉತ್ಪಾದನೆ ಮಾಡುತ್ತದೆ.

India signs deal with Israel for Missile Defence Systems

ಭಾರತವು ಇಸ್ರೇಲ್ ನ ರಕ್ಷಣಾ ಕಂಪನಿಗಳ ಜತೆಗೆ ಹಲವು ವ್ಯವಹಾರಗಳನ್ನು ಮಾಡಿದೆ. ಐಎಐ ಸಿಇಒ ಮತ್ತು ಅಧ್ಯಕ್ಷ ನಿಮ್ರೋದ್ ಶೆಫೆರ್ ಮಾತನಾಡಿ, ಕಂಪನಿಯು ಭಾರತದ ಜತೆಗೆ ಹಲವು ವರ್ಷಗಳಿಂದ ವ್ಯವಹರಿಸುತ್ತಿದೆ. ಜಂಟಿ ಉತ್ಪಾದನೆ ಹಾಗೂ ಅಭಿವೃದ್ಧಿಯಲ್ಲಿ ಸಹ ತೊಡಗಿವೆ. ಐಎಐ ಕಂಪನಿಗೆ ಭಾರತವು ಪ್ರಮುಖ ಮಾರುಕಟ್ಟೆ ಎಂದಿದ್ದಾರೆ.

English summary
A leading state-run Israeli defence company has said it has signed a USD 777 million contract with India for the supply of Barak 8 long-range surface-to-air defence missiles and missile defence systems for the Indian Navy, media reports in Jerusalem said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X