ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ

|
Google Oneindia Kannada News

ವಿಶ್ವಸಂಸ್ಥೆ, ಜೂನ್ 17: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆಯಲು ಭಾರತಕ್ಕೆ ಲಭಿಸುವ ಕಾಲ ಕೂಡಿ ಬಂದಿದೆ. ಎರಡು ವರ್ಷಗಳ ಸದಸ್ಯ ಸ್ಥಾನವನ್ನು ಮತ್ತೊಮ್ಮೆ ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ. ಭಾರತ, ಮೆಕ್ಸಿಕೋ ಹಾಗೂ ಕೀನ್ಯಾ ದೇಶಗಳಿಗೆ ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಲಭಿಸಲಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಅಮೆರಿಕ ಶಾಶ್ವತ ಸದಸ್ಯ ರಾಷ್ಟ್ರಗಳಾಗಿದ್ದು, 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರಲಿವೆ. ತಾತ್ಕಾಲಿಕ ಸದಸ್ಯ ರಾಷ್ಟ್ರಗಳ ಆಯ್ಕೆಗಾಗಿ ಬುಧವಾರ ಮತದಾನ ನಡೆಯಲಿದೆ. ಆಯ್ಕೆಯಾದ ರಾಷ್ಟ್ರಕ್ಕೆ ಜನವರಿ 2021ರಿಂದ ಎರಡು ವರ್ಷಗಳ ಅವಧಿ ಸದಸ್ಯತ್ವ ಸಿಗಲಿದೆ. ಆಯ್ಕೆಯಾಗಲು 2/3 ಶಾಶ್ವತ ಸದಸ್ಯರ ಮತ ಅಥವಾ 129 ಮತಗಳು ಬೇಕಾಗುತ್ತದೆ.

1950-1951, 1967-1968, 1972-1973, 1977-1978, 1984-1985, 1991-1992 and 2011-2012 ನಂತರ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ 8ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವವನ್ನು ಭಾರತ ಪಡೆಯುವ ಸನಿಹದಲ್ಲಿದೆ.

India Set To Win Unopposed Unsc’s Non-permanent Member Seat

ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಯಲ್ಲಿ ಭಾರತ ಕಾಯಂ ಸ್ಥಾನ ಪಡೆಯಲು ಬೇಕಾದ ಅಗತ್ಯ ಬೆಂಬಲವನ್ನು ಅಮೆರಿಕ ನೀಡಲಿದೆ ಎಂದು ಟ್ರಂಪ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ. 2021-22ರ ಅವಧಿಗೆ 5 ತಾತ್ಕಾಲಿಕ ಸ್ಥಾನಕ್ಕಾಗಿ ಜೂನ್ 2020ರಲ್ಲಿ ಚುನಾವಣೆ ನಡೆಯಲಿದೆ, ಒಟ್ಟು 193 ಸದಸ್ಯ ಬಲದಲ್ಲಿ 55 ಸದಸ್ಯರಾಷ್ಟ್ರಗಳ ಬೆಂಬಲವನ್ನು 2019ರ ಅಂತ್ಯಕ್ಕೆ ಭಾರತ ಪಡೆದುಕೊಂಡಿತ್ತು. ಈ ಹಿಂದೆ ಪಾಕಿಸ್ತಾನ ಕೂಡಾ ಭಾರತ ಪರ ವೋಟ್ ಮಾಡಿದ್ದು ವಿಶೇಷ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ತಾನ ದೂರು ಸಲ್ಲಿಸಿದ್ದಾಗ ಚೀನಾ ಮಾತ್ರ ಬೆಂಬಲಕ್ಕೆ ನಿಂತಿತ್ತು. ಈಗ ಗಾಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಚೀನಾ ದೂರು ನೀಡಲು ನಿರ್ಧರಿಸಿದರೆ, ಯುಎನ್ ಎಸ್ ಸಿ ಯಾವ ರೀತಿ ನಿರ್ಣಯ ಕೈಗೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಲಿದೆ.

English summary
India along with Mexico and Kenya will get elected as UN Security Council non-permanent members today according to reliable sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X