ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಮನ್ : ಭಾರತೀಯರೇ ಹೆದರದಿರಿ, ಏರ್ ಇಂಡಿಯಾ ಬರ್ತಾ ಇದೆ!

By Mahesh
|
Google Oneindia Kannada News

ಸನಾ, ಮಾ.30: ಷಿಯಾ ಹಾಗೂ ಸುನ್ನಿ ಸಮುದಾಯ ನಡುವಿನ ಆಂತರಿಕ ಕಲಹದಿಂದ ಉಂಟಾಗಿರುವ ಯುದ್ಧದಿಂದ ಯೆಮನ್ ನಲ್ಲಿ ಕನ್ನಡಿಗರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿರುವ ಭಾರತೀಯರು ಯಮ ಯಾತನೆ ಅನುಭವಿಸುತ್ತಿದ್ದಾರೆ. ಯುದ್ಧ ಪೀಡಿತ ಮಧ್ಯಪ್ರಾಚ್ಯದ ದೇಶ ಯೆಮನ್ ನಿಂದ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ವಿಮಾನ ಪ್ರಯಾಣ ಬೆಳೆಸಿದೆ.

ಗಲ್ಫ್ ರಾಷ್ಟ್ರದಲ್ಲಿ ಯುದ್ಧ ಭೀತಿ ಮುಂದುವರೆದಿರುವುದರಿಂದ 500ಕ್ಕೂ ಅಧಿಕ ಕನ್ನಡಿಗರು ಸೇರಿದಂತೆ 3,700 ಭಾರತೀಯರನ್ನು ವಾಪಸ್ ಕರೆ ತರಲು ಏರ್ ಇಂಡಿಯಾ ವಿಮಾನ ದೆಹಲಿಯಿಂದ ಹೊರಟಿದೆ.

180 ಸೀಟುಗಳುಳ್ಳ ಎ320 ಏರ್ ಬಸ್ ದೆಹಲಿಯನ್ನು ಸೋಮವಾರ 07.42AMಗೆ ಬಿಟ್ಟಿದ್ದು ಮಸ್ಕಟ್ ಮೂಲಕ ಯೆಮನ್ ರಾಜಧಾನಿ ಸನಾ ತಲುಪಲಿದೆ. ಸೋಮವಾರ ಸಂಜೆ ವೇಳೆಗೆ ಯೆಮನ್ ನಿಂದ ಭಾರತಕ್ಕೆ ಪ್ರಯಾಣ ಬೆಳಸಲಿದೆ.

India sends plane to airlift citizens from Yemen

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಬಗ್ಗೆ ವಿವರಣೆ ನೀಡಿ, ಯೆಮೆನ್ ನಲ್ಲಿ ಪ್ರತಿದಿನ ವಿಮಾನ ಹಾರಾಟಕ್ಕೆ 3 ಗಂಟೆಗಳ ಕಾಲಾವಕಾಶ ಕೋರಲಾಗಿದೆ.

ಯೆಮನ್ ನಲ್ಲಿ ನೆಲೆಸಿರುವ ಭಾರತೀಯ ಈ ಸಮಯದಲ್ಲಿ ಏರ್ ಇಂಡಿಯಾ ವಿಮಾನ ಏರಿ ಭಾರತಕ್ಕೆ ಮರಳಬಹುದು ಎಂದಿದ್ದಾರೆ. ಇದಲ್ಲದೆ, ಸುಮಾರು 1,500 ಪ್ರಯಾಣಿಕರನ್ನು ಸಾಗಿಸಬಲ್ಲ ಹಡಗನ್ನು ಯೆಮೆನ್ ಕಡೆಗೆ ಕಳಿಸಲಾಗುತ್ತಿದೆ. ಶನಿವಾರ ಸುಮಾರು 80ಜನ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

India sends plane to airlift citizens from Yemen

ಏನಿದು ಕಲಹ: ಷಿಯಾ ಆಡಳಿತದ ಇರಾನ್‌ ಮತ್ತು ಸುನ್ನಿ ನೇತೃತ್ವದ ಸೌದಿ ಆರೇಬಿಯಾ ಮಧ್ಯದ ಪರೋಕ್ಷ ಸಮರ ಆರಂಭವಾಗಿದೆ. ಜೊತೆಗೆ ಇರಾಕಿ ಉಗ್ರ ಪಡೆ ಇಸ್ಲಾಮೀಕ್ ಸ್ಟೇಟ್ಸ್ ಕೂಡಾ ಸರಣಿ ಆತ್ಮಾಹುತಿ ದಾಳಿ ನಡೆಸುತ್ತಿದೆ. ಯೆಮನ್ ಅಧ್ಯಕ್ಷ ಅಬೆದ್ ರಬ್ಬೋ ಮನ್ಸೂರ್ ಹದಿ ಅವರು ಸೌದಿ ಅರೇಬಿಯಾ ಸೇರಿದಂತೆ 10 ರಾಷ್ಟ್ರಗಳ ಮಿತ್ರ ಕೂಟ ರಚಿಸಿಕೊಂಡು ಷಿಯಾ ಬಂಡುಕೋರರನ್ನು ಹತ್ತಿಕ್ಕಲು ಮುಂದಾಗಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ.

ತೈಲ ಬೆಲೆ ಏರಿಕೆ: ಕೆಂಪು ಸಮುದ್ರ ಮತ್ತು ಏಡನ್‌ ಕೊಲ್ಲಿ ಸಂಪರ್ಕಿಸುವ ಬಾಬ್ ಅಲ್ ಮನಾಬ್ ಜಲಸಂಧಿಯ ನಡುವೆ ಇರುವ ಯೆಮನ್ ನಲ್ಲಿ ಯುದ್ಧ ಭೀತಿ ಎದುರಾಗಿರುವುದರಿಂದ ಈಜಿಪ್ಟ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ರಾಷ್ಟ್ರಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ.

ಷಿಯಾ -ಸುನ್ನಿ ಪಂಗಡದ ನಾಯಕರು ಕಿತ್ತಾಟ ಮುಂದುವರೆಸಿದರೆ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಜೊತೆಗೆ ಭಾರತದಂಥ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯೂ ಹದಗೆಡುತ್ತದೆ.

India sends plane to airlift citizens from Yemen

ಸುಷ್ಮಾ ಸ್ವರಾಜ್ ಅವರು ಸರಣಿ ಟ್ವೀಟ್ ಗಳ ಮೂಲಕ ಸನಾದಲ್ಲಿ ಭಾರತೀಯರು ಸಂಪರ್ಕಿಸಬೇಕಾದ ಇಮೇಲ್, ಭಾರತೀಯ ರಾಯಭಾರಿ ಕಚೇರಿ ಸಂಖ್ಯೆ, ಸಹಾಯವಾಣಿ ವಿವರಗಳನ್ನು ನೀಡಿದ್ದಾರೆ.


ಭಾರತೀಯ ರಾಯಭಾರಿ ಕಚೇರಿ ಸಂಖ್ಯೆ

English summary
Air India on Monday(Mar.30) flew its first flight to airlift hundreds of Indians stranded in the strife- torn Yemen, soon after the government decided to evacuate its citizens amid the chaotic situation in the Gulf country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X