ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರ್ಲೆಂಡ್‌ನಲ್ಲಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್

|
Google Oneindia Kannada News

ಡುಬ್ಲಿನ್, ಸೆಪ್ಟೆಂಬರ್. 23: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವ ವಿಚಾರಕ್ಕೆ ಐರ್ಲೆಂಡ್ ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಐರ್ಲೆಂಡ್ ಹಾಗೂ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಐರ್ಲೆಂಡ್ ನ ರಾಜಧಾನಿ ಡುಬ್ಲಿನ್ ಗೆ ಆಗಮಿಸಿದ ನಂತರ ಐರ್ಲೆಂಡ್ ಪ್ರಧಾನಿ ಎಂಡ ಕೆನ್ನಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.[ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ?]

modi

ಭಾರತ ಮತ್ತು ಐರ್ಲೆಂಡ್ ಶೀಘ್ರವೇ ನೇರ ವಿಮಾನಯಾನ ಸೇವೆ ಆರಂಭಿಸಲಿವೆ. ಐರ್ಲೆಂಡ್ ನ ವೀಸಾ ನಿಯಮಾವಳಿಗಳು ಭಾರತದ ಐಟಿ ಉದ್ಯೋಗಿಗಳಿಗೆ ನೆರವು ನೀಡುವಂತೆ ಇರಬೇಕಿದೆ ಎಂದು ಮೋದಿ ಹೇಳಿದರು.

ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 70 ನೇ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ನಂತರ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.

ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
* ಯುರೋಪ್ ನಲ್ಲಿ ಐರ್ಲೆಂಡ್, ಏಷ್ಯಾದಲ್ಲಿ ಭಾರತ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯನ್ನು ಹೊಂದಿವೆ.
* ಭಾರತದ ಸಂವಿಧಾನಕ್ಕೆ ಐರಿಷ್ ಸಂವಿಧಾನ ಸ್ಫೂರ್ತಿ
* ಭಯೋತ್ಪಾದನೆಯಂತಹ ಅಂತಾರಾಷ್ಟ್ರೀಯ ಸಮಸ್ಯೆ ನಿವಾರಣೆಗೆ ಪರಸ್ಪರ ಸಹಕಾರ ನೀಡಬೇಕು.
* ಅತ್ಯಾಧುನಿಕ ಯಂತ್ರಗಳ ತಯಾರಿಕೆಗೆ ಪಾಲುದಾರಿಕೆ ಹೊಂದಲು ಭಾರತ ಉತ್ಸುಕವಾಗಿದೆ.
* ಭಾರತ ಸದಾ ಸೌಹಾರ್ದಯುತವಾದ ಸಂಬಂಧ ಇರಿಸಿಕೊಳ್ಳಲು ಬಯಸುತ್ತದೆ.

English summary
Prime Minister Narendra Modi arrived Dublin on Wednesday for a brief visit to Ireland enroute to the US to strengthen bilateral ties and cooperation. "From India to Ireland...strengthening ties and deepening cooperation," Modi tweeted as soon as he landed in Dublin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X