ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ ಡಿಸ್ಕವರಿ: ಮಂಗಳಯಾನ ಶ್ರೇಷ್ಠ ಸಾಧನೆ

By Mahesh
|
Google Oneindia Kannada News

ನ್ಯೂಯಾರ್ಕ್, ನ.21: ಟೈಮ್ ನಿಯತಕಾಲಿಕೆ 2014ನೇ ಸಾಲಿನ ಅತ್ಯುತ್ತಮ ಆವಿಷ್ಕಾರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಮಂಗಳಯಾನ ಯೋಜನೆಯನ್ನು ಶ್ರೇಷ್ಠ ಸಾಧನೆ ಎಂದು ಬಣ್ಣಿಸಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಹಿರಿಮೆ ಭಾರತದ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ.

ಮಂಗಳಯಾನ ಯೋಜನೆ ಮೊದಲ ಬಾರಿಗೆ ಅನೇಕ ದೇಶಗಳು ವಿಫಲವಾಗಿದದ್ವು, ಅಮೆರಿಕ, ರಷ್ಯಾ ಅಥವಾ ಯೂರೋಪಿನ ಒಕ್ಕೂಟಕ್ಕಾಗಲಿ ಮಂಗಳಯಾನ ಮೊದಲ ಯತ್ನದಲ್ಲಿ ಫಲ ನೀಡಿರಲಿಲ್ಲ. ಸೆಪ್ಟಂಬರ್ 24 ರಂದು ಭಾರತ ಇದನ್ನು ಸಾಧಿಸಿ ಕೆಂಪು ಗ್ರಹದ ಸುತ್ತಾಟ ಆರಂಭಿಸಿದೆ. ಬೇರೆ ಯಾವ ಏಷ್ಯಾ ದೇಶವೂ ಮಾಡದ ಬಾಹ್ಯಾಕಾಶ ತಂತ್ರಜ್ಞಾನ ಸಾಧನೆ ಇದಾಗಿದೆ ಎಂದು ಹೇಳಿರುವ ಟೈಮ್ಸ್ ಪತ್ರಿಕೆ ಅದನ್ನು 'The Super smart Spacecraft. ಎಂದು ಹೊಗಳಿದೆ.

India's Mangalyaan among best inventions of 2014: Time

ವಿಶ್ವವನ್ನು ಉತ್ತಮ ಪಡಿಸುವಲ್ಲಿ, ಹೆಚ್ಚು ಚುರುಕಾಗಿಸುವಲ್ಲಿ ಹಾಗು ಕೆಲವು ಬಾರಿ ಹೆಚ್ಚು ಸಂತಸಮಯವಾಗಿಸಲು ಕಾರಣವಾದ 25 ಹೊಸ ಆವಿಷ್ಕಾರಗಳ 2014ನೇ ಸಾಲಿನ ಪಟ್ಟಿಯಲ್ಲಿ ಮಂಗಳಯಾನವೂ ಸ್ಥಾನ ಪಡೆದಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿದ್ಧಪಡಿಸಿರುವ ಮಾರ್ಸ್ ಬಾಹ್ಯಾಕಾಶ ನೌಕೆ(MOM) ಖರ್ಚು ವೆಚ್ಚ 74 ದಶಲಕ್ಷ ಯುಎಸ್ ಡಾಲರ್. ಇದು ಹಾಲಿವುಡ್ ಸಿನೆಮಾ ಗ್ರಾವಿಟಿ ಬಜೆಟ್ ಗಿಂತಲೂ ಕಡಿಮೆ ಎಂಬುದು ಯೋಜನೆಯ ಹಿರಿಮೆ. [ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!]

ಈ ಪಟ್ಟಿಯಲ್ಲಿ ಭಾರತೀಯರ ಇನ್ನೆರಡು ಆವಿಷ್ಕಾರಗಳೂ ಸ್ಥಾನ ಪಡೆದಿವೆ. ಜೈಲು ಖೈದಿಗಳಿಗೆ ವ್ಯಾಯಾಮ ಪ್ರದೇಶವನ್ನು ಸಿದ್ಧಪಡಿಸಿರುವ ಮತ್ತು ಮಕ್ಕಳಿಗಾಗ ಸಿದ್ಧಪಡಿಸಿರುವ ಟ್ಯಾಬ್ಲೆಟ್ ಆಟಿಕೆ ಆ ಎರಡು ಆವಿಷ್ಕಾರಗಳು.

ದಿನದ 23 ಘಂಟೆಗಳನ್ನು ಗೋಡೆಗಳ ನಡುವೆಯೇ ಕಳೆಯುವ ಜೈಲುವಾಸಿಗಳು ಸಾಮಾನ್ಯವಾಗಿ ಮಾನಸಿಕ ರೋಗಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಹಿಂಸೆ, ಆತ್ಮಹತ್ಯೆಯ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದರಿಂದ, ಅವರು ವಿಶ್ರಮಿಸಲು ಆರೆಗಾನ್ ನ ಸ್ನೇಕ್ ರಿವರ್ ಕರಕ್ಷನಲ್ ಸಂಸ್ಥೆಯ ಸಹಯೋಗದೊಂದಿಗೆ ಪರಿಸರವಾದಿ ನಳಿನಿ ನಾಡಕರ್ಣಿ ಅವರು "Blue Room" ಯ ಯೋಜನೆಯಡಿ ಪ್ರೊಜೆಕ್ಟರ್ ಬಳಸಿ ಖೈದಿಗಳಿಗೆ ಮರಳುಗಾಡಿನ, ಜಲಪಾತಗಳ ಮತ್ತು ಹೊರಾಂಗಣ ದೃಶ್ಯಗಳ ದೃಶ್ಯಾವಳಿಯನ್ನು ತೋರಿಸಲಾಗುತ್ತದೆ.

ಗೂಗಲ್ ಸಂಸ್ಥೆಯ ಮಾಜಿ ಇಂಜಿನಿಯರ್ ಪ್ರಮೋದ್ ಶರ್ಮಾ ಸಿದ್ಧಪಡಿಸಿರುವ "ಆಸ್ಮೋ" ಟ್ಯಾಬ್ಲೆಟ್ ಆಟಿಕೆ ಕೂಡ ಸ್ಥಾನ ಪಡೆದಿದೆ. ಶರ್ಮ ಅವರ ತಮ್ಮ ಮಗಳು ಐಪ್ಯಾಡ್ ನಲ್ಲಿ ಆಟವಾಡುವಾಗ Osmo ಬಗ್ಗೆ ಐಡಿಯಾ ಬಂತು ಎಂದು ಹೇಳಿದ್ದಾರೆ. ಉಳಿದಂತೆ ಆಪಲ್ ಸ್ಮಾರ್ಟ್ ವಾಚ್, ಮೈಕ್ರೋ ಸಾಫ್ಟ್ ಸರ್ಫೇಸ್ ಪ್ರೋ 3 ಕೂಡಾ ಸ್ಥಾನ ಪಡೆದಿವೆ.

English summary
Mangalyaan has been named among the best inventions of 2014 by Time magazine, which described it as a technological feat that will allow India to flex its "interplanetary muscles."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X