ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಂಪನಿಗಳ ಹೂಡಿಕೆಗೆ ಕಡಿವಾಣ ವಿಧಿಸಿದ ಭಾರತ

|
Google Oneindia Kannada News

ನವದೆಹಲಿ, ಏಪ್ರಿಲ್.20: ಕೊರೊನಾ ವೈರಸ್ ಹಾವಳಿ ನಡುವೆಯೇ ಭಾರತೀಯ ಸರ್ಕಾರವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ರಚಿಸಿದ ಹೊಸ ನಿಯಮದಿಂದ ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಯ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಚೀನಾ ರಾಯಭಾರಿ ದೂರಿದ್ದಾರೆ.

ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಯ ಜಾಗತೀಕರಣ, ವಾಣಿಜ್ಯ ಮತ್ತು ಹೂಡಿಕೆಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಜಿ-20 ರಾಷ್ಟ್ರಗಳಲ್ಲಿ ತಾರತಮ್ಯರಹಿತ, ಪಾರದರ್ಶಕ, ಸ್ಥಿರ ವ್ಯಾಪಾರ, ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ನಾಯಕರು ಒಮ್ಮತ ತೋರುತ್ತಿಲ್ಲ.

ತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನ

ಭಾರತವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸಿದ್ದಾಂತಗಳ ಅನ್ವಯ ತಾರತಮ್ಯ ರಹಿತ ಹೂಡಿಕೆಗೆ ಮುಕ್ತ ಮಾರುಕಟ್ಟೆ ತೆರೆಯಲು ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಚೀನಾ ರಾಯಭಾರಿ ಕೌನ್ಸಿಲೊರ್ ಜಿ ರೊಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Indias Foreign Direct Investment Rules Violate WTO Principle: China Embassy

ಅಂತಾರಾಷ್ಟ್ರೀಯ ಹೂಡಿಕೆಗೆ ತಿದ್ದುಪಡಿ:

ಕಳೆದ ಏಪ್ರಿಲ್.18ರಂದು ವಾಣಿಜ್ಯ ಮತ್ತು ಆಂತರಿಕ ವ್ಯವಹಾರ ಇಲಾಖೆಯು ವಿದೇಶಿ ಹೂಡಿಕೆ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಯಿತು. ಚೀನಾದ ಸೇರಿದಂತೆ ದೇಶದ ಗಡಿಗೆ ಹೊಂದಿಕೊಂಡಿರುವ ರಾಷ್ಟ್ರಗಳು ಇಲ್ಲಿ ಹೂಡಿಕೆ ಮಾಡುವ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಕಳೆದ 2019ರ ಡಿಸೆಂಬರ್ ವೇಳೆಗೆ ಅಂಕಿ ಅಂಶಗಳನ್ನು ಅವಲೋಕಿಸಿದಾಗ ಚೀನಾ ರಾಷ್ಟ್ರವೊಂದೇ ಭಾರತದಲ್ಲಿ 8 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ.

ಭಾರತದಲ್ಲಿ ಕೈಗಾರಿಕೆಗಳಲ್ಲಿ ಚೀನಾ ಹಣವನ್ನು ಹೂಡಿಕೆ ಮಾಡುತ್ತಿದ್ದು, ಮೊಬೈಲ್ ಮನೆ ಬಳಕೆಯ ಎಲೆಕ್ಟ್ರಾನಿಕ್ ಸರಕುಗಳು, ಇನ್ ಫ್ರಾಸ್ಟಕ್ಚರ್ ಮತ್ತು ಆಟೋಮೊಬೈಲ್ ಕಂಪನಿಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಿತ್ತು ಎನ್ನುವುದು ಚೀನಾ ವಾದವಾಗಿದೆ.

English summary
India's Foreign Direct Investment Rules Violate WTO Principle: China Embassy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X