ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೋದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

|
Google Oneindia Kannada News

ಮೆಕ್ಸಿಕೋ ಸಿಟಿ, ಏಪ್ರಿಲ್ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ರಕ್ಷಣೆ ಪಡೆದುಕೊಳ್ಳಲು ಮೆಕ್ಸಿಕೋ ಫೆಡರಲ್ ಕಮಿಷನ್ ಭಾರತದಲ್ಲಿ ಪ್ರಾದೇಶಿಕವಾಗಿ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ಬಳಸುವುದಕ್ಕೆ ಅನುಮೋದನೆ ನೀಡಿದೆ.

ಮೆಕ್ಸಿಕೋದಲ್ಲಿ ಕೊವಿಡ್-19 ಲಸಿಕೆ ವಿತರಣೆಯ ವ್ಯಾಪ್ತಿಯನ್ನು ಪ್ರಾಧಿಕಾರವು ವಿಸ್ತರಿಸಿದೆ. ಭಾರತ್ ಬಯೋಟೆಕ್ ಸಂಸ್ಥೆಯಲ್ಲಿ ಉತ್ಪಾದಿಸುತ್ತಿರುವ ಪ್ರಾದೇಶಿಕ ಕೊರೊನಾದ ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸುವುದಕ್ಕೆ ಅನುಮತಿಸಲಾಗಿದೆ ಎಂದು ಮೆಕ್ಸಿಕೋದ ವಿದೇಶಾಂಗ ಸಚಿವ ಮಾರ್ಕೆಲೋ ಎಬ್ರಾಡ್ ತಿಳಿಸಿದ್ದಾರೆ.

ಕೊರೊನಾ ಲಸಿಕೆ ವಿತರಣೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ ಕೊರೊನಾ ಲಸಿಕೆ ವಿತರಣೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಮೆಕ್ಸಿಕೋದಲ್ಲಿ ಫೆಬ್ರವರಿ 2ನೇ ವಾರದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ 96 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ವೃದ್ಧರು ಮತ್ತು ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

Indias Covaxin Vaccine Approved At Mexico To Emergency Use

ಮೆಕ್ಸಿಕೋಗೆ ರಫ್ತು ಆಗುತ್ತಿರುವ ಕೊರೊನಾ ಲಸಿಕೆ:

ವಿಶ್ವದ ಹಲವು ರಾಷ್ಟ್ರಗಳಿಂದ ಕೊರೊನಾವೈರಸ್ ಲಸಿಕೆಯನ್ನು ಮೆಕ್ಸಿಕೋ ಆಮದು ಮಾಡಿಕೊಳ್ಳುತ್ತಿದೆ. ಫೈಜರ್-ಬಯೋಎನ್ ಟೆಕ್, ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕಾ, ಸಿನೋವ್ಯಾಕ್, ಕ್ಯಾನ್ಸಿನೋ ಹಾಗೂ ಸ್ಪುಟಿಕ್- ವಿ ಲಸಿಕೆಯನ್ನು ತರಿಸಿಕೊಳ್ಳಲಾಗುತ್ತಿದೆ.

ಮೆಕ್ಸಿಕೋದಲ್ಲಿ ಕೊರೊನಾವೈರಸ್ ಸೋಂಕು:

ಜಾನ್ ಹಾಪ್ ಕಿನ್ಸ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಮೆಕ್ಸಿಕೋದಲ್ಲಿ 22,56,509 ಮಂದಿಗೆ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕೊವಿಡ್-19 ಸೋಂಕಿಗೆ ದೇಶದಲ್ಲಿ 2,04,985 ಜನರು ಪ್ರಾಣ ಬಿಟ್ಟಿದ್ದಾರೆ.

English summary
India's Covaxin Vaccine Approved At Mexico To Emergency Use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X