ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ತಪಾಸಣೆ: ಏಷ್ಯಾ ರಾಷ್ಟ್ರಗಳಲ್ಲಿ ಭಾರತಕ್ಕೆ ಇಂಥಾ ಸ್ಥಿತಿಯೇ?

|
Google Oneindia Kannada News

ನವದೆಹಲಿ, ಆಗಸ್ಟ್.07: ಕೊರೊನಾವೈರಸ್ ಸೋಂಕಿತರ ತಪಾಸಣೆಯೊಂದೇ ಮಹಾಮಾರಿಯ ಕಡಿವಾಣಕ್ಕೆ ಇರುವ ದಾರಿ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಮಾತನ್ನು ಪದೇ ಪದೆ ಹೇಳುತ್ತಿದ್ದರೂ ಭಾರತದಲ್ಲಿ ಮಾತ್ರ ಸೋಂಕಿತರ ತಪಾಸಣೆ ವೇಗ ಆಮೆಗತಿಯಲ್ಲೇ ಸಾಗುತ್ತಿದೆ.

Recommended Video

ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

ಭಾರತವು ಕೊರೊನಾವೈರಸ್ ಸೋಂಕಿನ ತಪಾಸಣೆಯಲ್ಲಿ ತೀರಾ ಹಿಂದೆ ಬಿದ್ದಿದೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಶುಕ್ರವಾರದ ಅಂಕಿ-ಸಂಖ್ಯೆಗಳ ಪ್ರಕಾರ ಭಾರತದಲ್ಲಿ 2030001 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 41673 ಜನರು ಸಾವಿನ್ನಪ್ಪಿದ್ದಾರೆ. 13,78,642 ಸೋಂಕಿತರು ಗುಣಮುಖರಾಗಿದ್ದು, 6,09,686 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!

ಭಾರತದಲ್ಲಿ 138,13,44997 ಜನಸಂಖ್ಯೆಯಿದ್ದು, ದೇಶದಲ್ಲಿ ಇದುವರೆಗೂ 2,27,88,393 ಜನರನ್ನು ಮಾತ್ರ ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ ಪ್ರತಿ 10 ಲಕ್ಷ ಜನರಲ್ಲಿ ಕೇವಲ 16497 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ಭಾರತದಲ್ಲಿ ಕೇವಲ 9 ದಿನಕ್ಕೆ 5 ಲಕ್ಷ ಕೊರೊನಾ ಪ್ರಕರಣ ದಾಖಲುಭಾರತದಲ್ಲಿ ಕೇವಲ 9 ದಿನಕ್ಕೆ 5 ಲಕ್ಷ ಕೊರೊನಾ ಪ್ರಕರಣ ದಾಖಲು

ಏಷ್ಯಾದ ರಾಷ್ಟ್ರಗಳಲ್ಲಿ ಅತಿಹೆಚ್ಚು ಸೋಂಕಿತರ ತಪಾಸಣೆ ನಡೆಸಿರುವ ಟಾಪ್-5 ರಾಷ್ಟ್ರಗಳು ಯಾವವು. ಈ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅತಿಹೆಚ್ಚು ತಪಾಸಣೆ ನಡೆಸಿದ ಏಷ್ಯಾದ ಪ್ರಮುಖ -5 ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರಮಾಣ ಎಷ್ಟಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಏಷ್ಯಾದ ಪ್ರಮುಖ ರಾಷ್ಟ್ರಗಳು ಯಾವವು ಎನ್ನುವುದರ ಪಟ್ಟಿ

ಏಷ್ಯಾದ ಪ್ರಮುಖ ರಾಷ್ಟ್ರಗಳು ಯಾವವು ಎನ್ನುವುದರ ಪಟ್ಟಿ

1. ಪೂರ್ವ ಏಷ್ಯಾ ರಾಷ್ಟ್ರಗಳು: ಚೀನಾ, ಹಾಂಕಾಂಗ್, ಜಪಾನ್, ಮಕೌ, ಮಂಗೋಲಿಯಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ತೈವಾನ್.

2. ಪಶ್ಚಿಮ ಏಷ್ಯಾ ರಾಷ್ಟ್ರಗಳು: ಅರ್ಮೇನಿಯ, ಅಜೇರ್ಬೈಜಾನ್, ಬಹರೈನ್, ಸೈಪ್ರಸ್, ಗಾಜಾ, ಜಾರ್ಜಿಯಾ, ಇರಾಕ್, ಇಸ್ರೇಲ್, ಜಾರ್ಡನ್, ಕುವೈತ್, ಲೆಬನಾನ್, ನಾಕ್ಸಿವಾನ್, ಓಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ, ಯುನೈಟೆಡ್ ಅರಬ್ ಎಮರೈಟ್ಸ್, ಯೆಮನ್,

3. ಉತ್ತರ ಏಷ್ಯಾ ರಾಷ್ಟ್ರ: ರಷ್ಯಾ

4. ದಕ್ಷಿಣ ಏಷ್ಯಾ ರಾಷ್ಟ್ರಗಳು: ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಭಾರತ, ಇರಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ್, ಶ್ರೀಲಂಕಾ,

5. ಮಧ್ಯ ಏಷ್ಯಾ ರಾಷ್ಟ್ರಗಳು: ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್

6. ಆಗ್ನೇಯ ಏಷ್ಯಾ ರಾಷ್ಟ್ರಗಳು: ಬ್ರುನೈ, ಕಾಂಬೋಡಿಯಾ, ಪೂರ್ವ ಟೀಮೋರ್, ಇಂಡೋನೆಷ್ಯಾ, ಲಾಓಸ್, ಮಲೇಶಿಯಾ, ಮಯನ್ಮಾರ್, ಫಿಲಿಫೈನ್ಸ್, ಸಿಂಗಾಪುರ್, ಥಾಯ್ಲೆಂಡ್, ವಿಯೆಟ್ನಾಂ

ದಕ್ಷಿಣ ಏಷ್ಯಾದ ದೇಶದಲ್ಲಿ ಕೊವಿಡ್-19 ಸ್ಥಿತಿಗತಿ ಹೇಗಿದೆ?

ದಕ್ಷಿಣ ಏಷ್ಯಾದ ದೇಶದಲ್ಲಿ ಕೊವಿಡ್-19 ಸ್ಥಿತಿಗತಿ ಹೇಗಿದೆ?

ಭಾರತ ಸೇರಿದಂತೆ 9 ರಾಷ್ಟ್ರಗಳನ್ನು ಹೊಂದಿರುವ ದಕ್ಷಿಣ ಏಷ್ಯಾದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಎಷ್ಟರ ಮಟ್ಟಿಗಿದೆ. ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಭಾರತ, ಇರಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ್, ಶ್ರೀಲಂಕಾ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿತರ ತಪಾಸಣೆ ಪ್ರಮಾಣ ಎಷ್ಟಿದೆ. ಸಾವಿನ ಸಂಖ್ಯೆಯಲ್ಲಿ ಯಾವ ರಾಷ್ಟ್ರವು ಮೇಲುಗೈ ಸಾಧಿಸಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂತಿತರ ತಪಾಸಣೆ ಪ್ರಮಾಣ ಎಷ್ಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ಮಾಲ್ಡೀವ್ಸ್

ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ಮಾಲ್ಡೀವ್ಸ್

ಮಾಲ್ಡೀವ್ಸ್ ರಾಷ್ಟ್ರದಲ್ಲಿ ಜನಸಂಖ್ಯೆಯೇ 5,41,448. ಈ ಪೈಕಿ 85,587 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಲಾಗಿದೆ. ದೇಶದಲ್ಲಿ ಇದುವರೆಗೂ 4680 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 19 ಜನರು ಮಹಾಮಾರಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. 2725 ಸೋಂಕಿತರು ಗುಣಮುಖರಾಗಿದ್ದರೆ, ದೇಶದಲ್ಲಿ 1935 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಏಷ್ಯಾದಲ್ಲಿ ಭೂತಾನ್ ದೇಶಕ್ಕೆ ಎರಡನೇ ಸ್ಥಾನ

ದಕ್ಷಿಣ ಏಷ್ಯಾದಲ್ಲಿ ಭೂತಾನ್ ದೇಶಕ್ಕೆ ಎರಡನೇ ಸ್ಥಾನ

ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಗಮನಿಸಿದಾಗ ದಕ್ಷಿಣ ಏಷ್ಯಾದ 9 ರಾಷ್ಟ್ರಗಳ ಪೈಕಿ ಭೂತಾನ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 7,72,443 ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಈಗಾಗಲೇ 55,128 ಜನರನ್ನು ಸೋಂಕಿತರ ತಪಾಸಣೆಗೆ ಒಳಪಡಿಸಲಾಗಿದೆ. ಭೂತಾನ್ ನಲ್ಲಿ ಇದುವರೆಗೂ 108 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ 46 ಮಂದಿ ಪ್ರಾಣ ಬಿಟ್ಟಿದ್ದಾರೆ. 96 ಸೋಂಕಿತರು ಗುಣಮುಖರಾಗಿದ್ದು, 12 ಸಕ್ರಿಯ ಪ್ರಕರಣಗಳಿವೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಇರಾನ್ ಗೆ 3ನೇ ಸ್ಥಾನ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಇರಾನ್ ಗೆ 3ನೇ ಸ್ಥಾನ

ಇರಾನ್ ರಾಷ್ಟ್ರವು ಅತಿಹೆಚ್ಚು ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದೇಶದ ಒಟ್ಟು ಜನಸಂಖ್ಯೆ 8,40,97,623 ರಷ್ಟಿದ್ದು, ಈ ಪೈಕಿ 26,37,575 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಅಂದರೆ ಇರಾನ್ ನಲ್ಲಿ ಪ್ರತಿ 10 ಲಕ್ಷ ಜನರಲ್ಲಿ 31,363 ಜನರಿಗೆ ಕೊವಿಡ್-19 ತಪಾಸಣೆಯನ್ನು ಮಾಡಲಾಗಿದೆ. ಇರಾನ್ ನಲ್ಲಿ ಇದುವರೆಗೂ 3,22,567 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 18,132 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 2,79,724 ಸೋಂಕಿತರು ಗುಣಮುಖರಾಗಿದ್ದರೆ, ದೇಶದಲ್ಲಿ 24,711 ಸಕ್ರಿಯ ಪ್ರಕರಣಗಳು ಇರುವುದು ದೃಢಪಟ್ಟಿದೆ.

ಕೊವಿಡ್-19 ತಪಾಸಣೆಯಲ್ಲಿ ನೇಪಾಳಕ್ಕೆ 4ನೇ ಸ್ಥಾನ

ಕೊವಿಡ್-19 ತಪಾಸಣೆಯಲ್ಲಿ ನೇಪಾಳಕ್ಕೆ 4ನೇ ಸ್ಥಾನ

ಕೊರೊನಾವೈರಸ್ ಸೋಂಕಿತರ ತಪಾಸಣೆಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ನೇಪಾಳ ನಾಲ್ಕನೇ ಸ್ಥಾನದಲ್ಲಿದೆ. ನೇಪಾಳದ ಜನಸಂಖ್ಯೆ 2,91,86,486. ಈ ಪೈಕಿ 7,31,977 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ ದೇಶದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 25,079 ಜನರನ್ನು ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ದೇಶದಲ್ಲಿ 21750 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ 65 ಮಂದಿ ಪ್ರಾಣ ಬಿಟ್ಟಿದ್ದಾರೆ. 15389 ಸೋಂಕಿತರು ಗುಣಮುಖರಾಗಿದ್ದು , ದೇಶದಲ್ಲಿ 6296 ಸಕ್ರಿಯ ಪ್ರಕರಣಗಳು ಇರುವುದು ವರದಿಯಾಗಿದೆ.

ಕೊರೊನಾವೈರಸ್ ತಪಾಸಣೆಯಲ್ಲಿ ಭಾರತಕ್ಕೆ ಐದನೇ ಸ್ಥಾನ

ಕೊರೊನಾವೈರಸ್ ತಪಾಸಣೆಯಲ್ಲಿ ಭಾರತಕ್ಕೆ ಐದನೇ ಸ್ಥಾನ

ಭಾರತದಲ್ಲಿ 138,13,44997 ಜನಸಂಖ್ಯೆಯಿದ್ದು, ದೇಶದಲ್ಲಿ ಇದುವರೆಗೂ 2,27,88,393 ಜನರನ್ನು ಮಾತ್ರ ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ ಪ್ರತಿ 10 ಲಕ್ಷ ಜನರಲ್ಲಿ ಕೇವಲ 16497 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ. ಈ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತದಲ್ಲಿ 2030001 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 41673 ಜನರು ಸಾವಿನ್ನಪ್ಪಿದ್ದಾರೆ. 13,78,642 ಸೋಂಕಿತರು ಗುಣಮುಖರಾಗಿದ್ದು, 6,09,686 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

English summary
Here Is The List Of Top 5 Highest Covid-19 Testing Conducted Countries In South Asia. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X