ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾವತಿಯ ಆಶಾ ಭಟ್ ಜಗಮೆಚ್ಚಿದ ಸುಂದರಿ

|
Google Oneindia Kannada News

ನವದೆಹಲಿ, ಡಿ. 6: ಪ್ರತಿಷ್ಠಿತ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ -2014ರ ಮುಕುಟವನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಆಶಾ ಭಟ್ ತಮ್ಮದಾಗಿರಿಸಿಕೊಂಡಿದ್ದಾರೆ.

ಈ ಸೌಂದರ್ಯ ಸ್ಪರ್ಧೆ ಜಯಿಸುತ್ತಿರುವ ಮೊದಲ ಭಾರತೀಯ ಎಂಬ ಶ್ರೇಯ ಸಹ ಭಟ್ ಪಾಲಾಗಿದೆ. ಪೋಲ್ಯಾಂಡ್‌ನ ವಾರ್ಸದಲ್ಲಿ ನಡೆದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಭಟ್ ಕಿರೀಟ ಮುಡಿಗೇರಿಸಿಕೊಂಡರು. ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿದ ಆಶಾಭಟ್‌ಗೆ ಕಳೆದ ಬಾರಿಯ ಮಿಸ್ ಸೂಪರ್ ನ್ಯಾಷನಲ್ ಫಿಲಿಪೈನ್ಸ್ ನ ಮುತ್ಯಾ ದತೂಲ್ ಕಿರೀಟ ತೊಡಿಸಿದರು.[ನೀನಾ ಭಾರತೀಯ ಮೂಲದ ಮೊದಲ 'ಮಿಸ್ ಅಮೆರಿಕ']

ಭದ್ರಾವತಿಯ ವೈದ್ಯರೊಬ್ಬರ ಪುತ್ರಿಯಾಗಿರುವ ಆಶಾ ಭಟ್ ಸದ್ಯ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾರೆ. ಆಶಾ ಭಟ್ ಕೇವಲ ಮಾಡೆಲ್ ಅಷ್ಟೇ ಅಲ್ಲ. ಕಲಾವಿದೆ, ಹಾಡುಗಾರ್ತಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾಳೆ. ಭರತನಾಟ್ಯ ಪ್ರವೀಣೆ ಸಹ ಹೌದು.

ಆಶಾ ಭಟ್ ಪದವಿಗಳು
ಮಿಸ್ ಸೂಪರ್‌ನ್ಯಾಷನಲ್ -2014
ಮಿಸ್ ದಿವಾ ಯುನಿವರ್ಸ್- 2014 (ರನ್ನರ್ ಅಪ್)
ಮಿಸ್ ಬ್ಯೂಟಿಫುಲ್ ಸ್ಮೈಲ್ -2014
ಭಾರತದ ಸಾರ್ಕ್ ಅಂಬಾಸಿಡರ್

ಆಶಾ ಭಟ್ ಸೌಂದರ್ಯ ಸ್ಪರ್ಧೆಯ ಚಿತ್ರಗಳು....

ಪ್ರಶಸ್ತಿ ಗೆದ್ದ ಸಂಭ್ರಮ

ಪ್ರಶಸ್ತಿ ಗೆದ್ದ ಸಂಭ್ರಮ

ಮಿಸ್ ಸೂಪರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿದ ಆಶಾಭಟ್‌ಗೆ ಕಳೆದ ಬಾರಿಯ ಮಿಸ್ ಸೂಪರ್ ನ್ಯಾಷನಲ್ ಫಿಲಿಪೈನ್ಸ್ ನ ಮುತ್ಯಾ ದತೂಲ್ ಕಿರೀಟ ತೊಡಿಸಿದರು.

ಅಂತಿಮ ಹಣಾಹಣಿ

ಅಂತಿಮ ಹಣಾಹಣಿ

ಮಿಸ್ ಸೂಪರ್‌ನ್ಯಾಷನಲ್ಅಂತಿಮ ಹಣಾಹಣಿಯಲ್ಲಿ ಆಶಾ ಭಟ್ ಗೆ ಸ್ಪರ್ಧೆ ಒಡ್ಡಿದ್ದ ಸುಂದರಿಯರು.

ಸೌಂದರ್ಯ ಸಮರ

ಸೌಂದರ್ಯ ಸಮರ

ಪ್ರತಿಷಷ್ಠಿತ ಮಿಸ್ ಸೂಪರ್‌ನ್ಯಾಷನಲ್ ಹಣಾಹಣಿಯ ಸ್ಪರ್ಧೆಯೊಂದರಲ್ಲಿ ಆಶಾ ಭಟ್.

ಸೌಂದರ್ಯ ಸಮರ

ಸೌಂದರ್ಯ ಸಮರ

ಪ್ರತಿಷಷ್ಠಿತ ಮಿಸ್ ಸೂಪರ್‌ನ್ಯಾಷನಲ್ ಹಣಾಹಣಿಯ ಸ್ಪರ್ಧೆಯೊಂದರಲ್ಲಿ ಆಶಾ ಭಟ್.

ಮುಕುಟಕ್ಕೆ ಕಿರೀಟ

ಮುಕುಟಕ್ಕೆ ಕಿರೀಟ

ಪ್ರಶಸ್ತಿ ಗೆದ್ದ ಆಶಾ ಭಟ್ ನಗು

ಸೌಂದರ್ಯ ಸಮರ

ಸೌಂದರ್ಯ ಸಮರ

ಪ್ರತಿಷಷ್ಠಿತ ಮಿಸ್ ಸೂಪರ್‌ನ್ಯಾಷನಲ್ ಹಣಾಹಣಿಯ ಸ್ಪರ್ಧೆಯೊಂದರಲ್ಲಿ ಆಶಾ ಭಟ್.

English summary
India's Asha Bhatt crowned as a Miss Supranational 2014 in Warsaw, Poland on Friday. Asha Bhat creates history in India. She is India's first Miss Supranational. Its been 14 years since India won a crown in a grand slam pageant .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X