ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ವೀಸಾ ನಿಯಮ ಕಠಿಣ: ಭಾರತದ ವಿದ್ಯಾರ್ಥಿಗಳಲ್ಲಿ ತಳಮಳ

|
Google Oneindia Kannada News

ಲಂಡನ್, ಜೂನ್ 18: ಬ್ರಿಟನ್ ಸರ್ಕಾರವು ಹೊಸ ವೀಸಾ ನೀತಿ ಪ್ರಕಟಿಸಿದ್ದು, ಅದರಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸಿರುವುದು ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿದೆ.

ಬ್ರಿಟನ್ ಸಂಸತ್‌ನಲ್ಲಿ ಭಾನುವಾರ ವಲಸೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 25 ದೇಶಗಳ ವಿದ್ಯಾರ್ಥಿಗಳಿಗೆ ಟೈರ್ 4 ವೀಸಾದ ನಿಯಮಗಳನ್ನು ಸಡಿಲಿಕೆ ಮಾಡಿದೆ.

ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರ

ಅಮೆರಿಕ, ಕೆನಡಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಕೆಲವು ದೇಶಗಳು ಈ ಹಿಂದಿನಿಂದಲೂ ಈ ಪಟ್ಟಿಯಲ್ಲಿ ಇದ್ದವು. ಅದಕ್ಕೆ ಚೀನಾ, ಬಹ್ರೇನ್ ಮತ್ತು ಸರ್ಬಿಯಾಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.

india removed from uks reformed student visa rules

ಈ ದೇಶಗಳ ವಿದ್ಯಾರ್ಥಿಗಳು ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಕ್ಷಣ, ಆರ್ಥಿಕತೆ ಮತ್ತು ಇಂಗ್ಲಿಷ್ ಭಾಷೆಯ ಕೌಶಲವು ಹೆಚ್ಚು ಇರಲೇಬೇಕು ಎಂದಿಲ್ಲ.

ಜುಲೈ 6ರಿಂದ ಈ ಬದಲಾವಣೆಗಳು ಜಾರಿಗೆ ಬರಲಿದ್ದು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಬ್ರಿಟನ್‌ಗೆ ಓದಲು ಹೆಚ್ಚು ಬರಲು ಅವಕಾಶವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಭಿವೃದ್ಧಿಯ ಜನಾಂದೋಲನ ಬೇಕಾಗಿದೆ: ಲಂಡನ್ ನಲ್ಲಿ ಮೋದಿ

ಆದರೆ, ಈ ವಿಸ್ತೃತ ಪಟ್ಟಿಯಿಂದ ಭಾರತವನ್ನು ಕೈಬಿಡಲಾಗಿದೆ. ಇದೇ ರೀತಿಯ ಶೈಕ್ಷಣಿಕ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಭಾರತದ ವಿದ್ಯಾರ್ಥಿಗಳು ಕಠಿಣ ತಪಾಸಣೆಗಳಿಗೆ ಒಳಪಡಬೇಕಾಗುತ್ತದೆ ಮತ್ತು ಹೆಚ್ಚು ದಾಖಲಾತಿಗಳನ್ನು ನೀಡಬೇಲಾಗುತ್ತದೆ.

ಈ ನೀತಿಯನ್ನು ಖಂಡಿಸಿರುವ ಭಾರತ ಮೂಲದ ಸಂಸದ ಕರಣ್ ಬಿಲಿಮೊರಿಯಾ, ಇದು ಭಾರತಕ್ಕೆ ಮಾಡಿರುವ ಅವಮಾನ. ಬ್ರಿಟನ್‌ನ ಆರ್ಥಿಕ ಅನಕ್ಷರತೆಗೆ ಮತ್ತೊಂದು ಉದಾಹರಣೆ ಎಂದು ಟೀಕಿಸಿದ್ದಾರೆ.

ಈ ನೀತಿಯನ್ನು ಭಾರತದ ಮುಖಕ್ಕೆ ಬಾರಿಸಿದ ಮತ್ತೊಂದು ಹೊಡೆತ ಎಂದು ನಾನು ಪರಿಗಣಿಸುತ್ತೇನೆ. ಟೈರ್ 4 ವಿನಾಯಿತಿಗಳಿಂದ ಭಾರತವನ್ನು ಹೊರಕ್ಕೆ ಇರಿಸಿರುವುದು ಭಾರತಕ್ಕೆ ಸಂಪೂರ್ಣ ತಪ್ಪು ಸಂದೇಶವನ್ನು ರವಾನಿಸಿದಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

English summary
India has been left out from new list of the Tier 4 visa category. Indian students have to face rigorous checks and documentary requirements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X