ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21 : ಸೌಹಾರ್ದ ಮಾತುಕತೆ ನಡೆಸಲು ಪಾಕಿಸ್ತಾನ ಇಟ್ಟಿದ್ದ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ. ಪಾಕಿಸ್ತಾನದ ಹೊಸ ಸರ್ಕಾರ ಮಾತುಕತೆಯ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ, ಗಡಿಯಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕಲು ಸರ್ಕಾರ ವಿಫಲವಾಗಿತ್ತು.

ಶುಕ್ರವಾರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಭಾರತದ ಜೊತೆ ಪಾಕಿಸ್ತಾನ ಮಾತುಕತೆ ನಡೆಸಲು ಬೇಡಿಕೆ ಇಟ್ಟಿತ್ತು.

ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆ

India rejects Pakistan talk offer

ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯ ವೇಳೆ ಉಭಯ ದೇಶಗಳ ನಡುವೆ ಮಾತುಕತೆ ನಡೆಸಬಹುದು ಎಂದು ಪಾಕಿಸ್ತಾನ ಆಹ್ವಾನ ನೀಡಿತ್ತು. ಆದರೆ, ಭಾರತ ಈ ಆಹ್ವಾನವನ್ನು ತಳ್ಳಿಹಾಕಿದೆ.

ಶಾಂತಿಯುತ ಮಾತುಕತೆ ಪುನಾರಂಭ: ಮೋದಿಗೆ ಇಮ್ರಾನ್ ಖಾನ್ ಪತ್ರಶಾಂತಿಯುತ ಮಾತುಕತೆ ಪುನಾರಂಭ: ಮೋದಿಗೆ ಇಮ್ರಾನ್ ಖಾನ್ ಪತ್ರ

ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೂತನ ಪ್ರಧಾನಿಗೆ ಅಭಿನಂದನೆ ಸಲ್ಲಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದರು.

ಪಾಕ್‌ಗೆ ಸಿಧು ಭೇಟಿ : ಧನ್ಯವಾದ ಸಲ್ಲಿಸಿದ ಪ್ರಧಾನಿ ಇಮ್ರಾನ್ ಖಾನ್ಪಾಕ್‌ಗೆ ಸಿಧು ಭೇಟಿ : ಧನ್ಯವಾದ ಸಲ್ಲಿಸಿದ ಪ್ರಧಾನಿ ಇಮ್ರಾನ್ ಖಾನ್

ಈ ಪತ್ರಕ್ಕೆ ಧನ್ಯವಾದಗಳನ್ನು ತಿಳಿಸಿದ್ದ ಪಾಕಿಸ್ತಾನ ಪ್ರತ್ಯುತ್ತರ ಬರೆಯುವಾಗ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಭಾರತದ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕ್‌ ಸಚಿವ ಶಾ ಮೆಹಮೂದ್ ಖುರೇಶಿ ನಡುವೆ ಮಾತುತಕೆ ನಡೆಯಲಿ ಎಂದು ಪಾಕಿಸ್ತಾನ ಹೇಳಿತ್ತು.

ಭಾರತದಲ್ಲಿ ಶಾಂತಿ ಕದಡಲು ಪಾಕ್‌ನಿಂದ ಕುತಂತ್ರ: ಗುಪ್ತಚರ ವರದಿಭಾರತದಲ್ಲಿ ಶಾಂತಿ ಕದಡಲು ಪಾಕ್‌ನಿಂದ ಕುತಂತ್ರ: ಗುಪ್ತಚರ ವರದಿ

ಭಾರತ ಒಪ್ಪಿದರೆ ಎರಡೂ ದೇಶಗಳಿಗೆ ಹೊಂದಿಕೆಯಾಗುವ ದಿನಾಂಕ ನಿಗದಿ ಮಾಡುತ್ತೇವೆ. ಈ ಭೇಟಿಗೆ ಯಾವುದೇ ಕಾರ್ಯಸೂಚಿ ನಿಗದಿ ಮಾಡಿಲ್ಲ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಭಾರತ ಈಗ ಮಾತುಕತೆಯ ಪ್ರಸ್ತಾಪ ತಳ್ಳಿ ಹಾಕಿದೆ.

2015ರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಆಗ ಉಭಯ ದೇಶಗಳ ನಡುವೆ ಮಾತುಕತೆ ನಡೆದಿತ್ತು. 2016ರಲ್ಲಿ ನಡೆದ ಪಠಾಣ್‌ ಕೋಟ್ ವಾಯುನೆಲೆ ಮೇಲಿನ ದಾಳಿ ಬಳಿಕ ಉಭಯ ದೇಶಗಳ ನಡುವೆ ಮಾತುಕತೆ ನಡೆದಿಲ್ಲ.

ಪಾಕಿಸ್ತಾನ ಭಾರತದ ಜೊತೆ ಮಾತುಕತೆಯ ಪ್ರಸ್ತಾಪ ಇಟ್ಟಿತ್ತು. ಆದರೆ, ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕಲು ದೇಶ ವಿಫಲವಾಗಿದೆ. ಶುಕ್ರವಾರ ನಾಲ್ವರು ಪೊಲೀಸರನ್ನು ಉಗ್ರರು ಅಪಹರಣ ಮಾಡಿದ್ದು, ಮೂವರನ್ನು ಹತ್ಯೆ ಮಾಡಿದ್ದಾರೆ.

English summary
India has rejected an offer from Pakistan for talk. After Imran Khan took charge as Prime Minister Pakistan offer India for the talk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X