ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಹಸಿವು ಸೂಚ್ಯಂಕ ಪಟ್ಟಿ: ಪಾಕಿಸ್ತಾನಕ್ಕಿಂತ ಕೆಳಗಿಳಿದ ಭಾರತ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತವು ಕೆಳಗಿರುವುದು ಕೇಂದ್ರಕ್ಕೆ ಮುಜುಗರ ಉಂಟಾಗಿದೆ.

ಭಾರತ 117 ದೇಶಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ. ಇದು ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ದೇಶಗಳ ಪೈಕಿ ಕನಿಷ್ಠ ಸೂಚ್ಯಂಕವಾಗಿದೆ.

ದಕ್ಷಿಣ ಏಷ್ಯಾ ದೇಶಗಳು 66ರಿಂದ 94ನೇ ಸ್ಥಾನದಲ್ಲಿದ್ದರೆ ಬ್ರಿಕ್ಸ್ ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಕನಿಷ್ಠ ಸ್ಥಾನ ಪಡೆದಿರುವ ಪಾಕಿಸ್ತಾನ ಕೂಡ ಭಾರತಕ್ಕಿಂತ ಮುಂದಿದ್ದು 94ನೇ ಸ್ಥಾನದಲ್ಲಿದೆ.

India Ranks 102 On Global Hunger Index

2014ರಿಂದ 2018ರ ಅವಧಿಯ ಅಪೌಷ್ಠಿಕ ಮಕ್ಕಳ ಪ್ರಮಾಣ, ಎತ್ತರಕ್ಕೆ ಹೋಲಿಸಿದರೆ ಸಮಪರ್ಕ ತೂಕ ಹೊಂದಿಲ್ಲದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಸೂಚ್ಯಂಕ ಬಿಡುಗಡೆ ಮಾಡಿದೆ.

ಭಾರತದಲ್ಲಿ ಆರರಿಂದ 23 ತಿಂಗಳರೆಗಿನ ಶೇ.9.6ರಷ್ಟು ಮಕ್ಕಳಿಗೆ ಕನಿಷ್ಠ ಸ್ವೀಕಾರಾರ್ಹ ಆಹಾರಕ್ಕಿಂತ ಕಡಿಮೆ ಆಹಾರ ನೀಡಲಾಗುತ್ತಿದೆ ಎಂದು ಸೂಚ್ಯಂಕ ವರದಿ ಹೇಳಿದೆ. ನೆರೆ ದೇಶವಾದ ಬಾಂಗ್ಲಾದೇಶ ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನು ವರದಿ ಶ್ಲಾಘಿಸಿದೆ. ಆಕರ್ಷಕ ಆರ್ಥಿಕ ಪ್ರಗತಿ ಹಾಗೂ ಪೌಷ್ಟಿಕತೆ ಒತ್ತು ನೀಡಲಾಗಿದ್ದು, ಶಿಕ್ಷಣ ನೈರ್ಮಲ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಗಮನ ಹರಿಸಿರುವುದು ಶ್ಲಾಘನೀಯ ಎಂದು ಹೇಳಿದೆ.

ಹಸಿವು ಮುಕ್ತ ವಿಶ್ವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇನ್ನೂ ಬಲು ದೂರ ಕ್ರಮಿಸಬೇಕಿದೆ ಎಂದು ವರದಿ ಹೇಳಿದೆ.ಶೂನ್ಯದಿಂದ 100ವರೆಗಿನ ಅಂಕಪದ್ಧತಿಯಲ್ಲಿ ಶೂನ್ಯ ಅಂಕ ಗಳಿಸಿದ ದೇಶ ಕನಿಷ್ಠ ಹಸಿವು ಹೊಂದಿದೆ ಎಂಬ ಅರ್ಥ. 100 ಅಂಕ ಗಳಿಸಿದ ದೇಶ ಗರಿಷ್ಠ ಹಸಿವು ಹೊಂದಿದೆ ಎಂಬ ಅರ್ಥ ಭಾರತ 30.3 ಅಂಕ ಗಳಿಸಿದ್ದು, ಗಂಭೀರ ಹಸಿವಿನ ವರ್ಗದಲ್ಲಿ ಸೇರಿದೆ.

English summary
India has been ranked at the 102 position among 117 countries on the Global Hunger Index, says a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X