ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಹೋರ್‌ನಲ್ಲಿ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತನೆಗೆ ಯತ್ನ: ಭಾರತ ಖಂಡನೆ

|
Google Oneindia Kannada News

ನವದೆಹಲಿ, ಜುಲೈ 28: ಲಾಹೋರ್‌ನಲ್ಲಿರುವ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪಾಕ್ ಮುಂದಾಗಿದ್ದು, ಭಾರತ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದೆ.

Recommended Video

India and Nepal border dispute explained | Oneindia Kannada

ಪಾಕಿಸ್ತಾನದಲ್ಲಿರುವ ನೂರಾರು ಗುರುದ್ವಾರಗಳು ಮಸೀದಿಯಾಗಿ ಪರಿವರ್ತನೆಯಾಗಿವೆ ಅಥವಾ ಭೂಮಾಫಿಯಾದವರಿಂದ ಅತಿಕ್ರಮಣಕ್ಕೆ ಒಳಗಾಗಿವೆ. ಸಿಖ್‌ ಯುವತಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವುದಂತೂ ಸಾಮಾನ್ಯವಾಗಿದೆ ಎಂದು ಅಲ್ಲಿನ ಸಿಖ್‌ ಪ್ರಮುಖರು ಹೇಳುತ್ತಾರೆ ಎಂದು ಅನುರಾಗ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಗುರುದ್ವಾರದಲ್ಲಿ ಅಪಹೃತರಾಗಿದ್ದ ನಿದಾನ್ ಸಿಂಗ್ ಸೇರಿ 11 ಮಂದಿ ದೆಹಲಿಗೆಗುರುದ್ವಾರದಲ್ಲಿ ಅಪಹೃತರಾಗಿದ್ದ ನಿದಾನ್ ಸಿಂಗ್ ಸೇರಿ 11 ಮಂದಿ ದೆಹಲಿಗೆ

ಹಾಗೆಯೇ ಅಫ್ಘಾನಿಸ್ತಾನದಲ್ಲೂ ಕೂಡ ಸಿಖ್ಖರಿಗೆ ಹಿಂಸೆ ನೀಡಲಾಗುತ್ತಿದೆ. ಹಾಗೆಯೇ ಅಪಹರಣ ಪ್ರಕರಣಗಳು ಕೂಡ ಹೆಚ್ಚಾಗಿವೆ ಎಂಬ ಸುದ್ದಿ ಹರಿದಾಡುತ್ತಿದೆ.

India Protests Pak Move To Convert Gurdwara Into Mosque In Lahore

ಪಾಕಿಸ್ತಾನದಲ್ಲಿ ಹಿಂದೂಗಳಾಗಿರುವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಲೆ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಕುಸಿಯುತ್ತಿದೆ. ಭಾರತ ಕೂಡ ಅಲ್ಲಿನ ಅಲ್ಪಸಂಖ್ಯಾತರಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಅವರಿಗೆ ಪೌರತ್ವ ನೀಡುವುದಾಗಿ ಘೋಷಿಸಿತ್ತು.

ಪಾಕಿಸ್ತಾನದ ಲಾಹೋರ್‌ನಲ್ಲಿರುವ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸುವ ಪ್ರಯತ್ನವನ್ನು ಭಾರತ ಖಂಡಿಸಿದ್ದು, ಪ್ರತಿಭಟನೆ ದಾಖಲಿಸಿದೆ. ಲಾಹೋರ್‌ ನೌಲಾಕಾ ಬಜಾರ್‌ನಲ್ಲಿರುವ ಶಾಹಿದಿ ಆಸ್ಥಾನ್‌ ಗುರುದ್ವಾರವು ಭಾಯಿ ತರು ಸಿಂಗ್‌ಜಿ ಅವರ ಸಮಾಧಿ ಇರುವ ಪುಣ್ಯಸ್ಥಳವಾಗಿದೆ.

ಈಗ ಕೆಲವರು ಇದನ್ನು ಮಸೀದಿಯಾಗಿ ಪರಿವರ್ತಿಸಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳನ್ನು ಸೋಮವಾರ ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಗುರುದ್ವಾರದಿಂದ ಅಪಹೃತವಾಗಿದ್ದ ನಿದಾನ್ ಸಿಂಗ್ ಸೇರಿ ಸಿಖ್ ಸಮುದಾಯದ ಒಟ್ಟು 11 ಮಂದಿ ದೆಹಲಿಗೆ ಬಂದಿದ್ದಾರೆ. ಅಫ್ಘಾನಿಸ್ತಾನದ ಸಿಖ್ ಸಮುದಾಯದ 11 ಮಂದಿಗೆ ಕಾಬೂಲ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯು ಅಲ್ಪಾವಧಿಯ ವೀಸಾವನ್ನು ನೀಡಿದೆ.

ಕಳೆದ ತಿಂಗಳು ಗುರುದ್ವಾರದ ಪಾಕ್ತಿಯಾ ಪ್ರದೇಶದಲ್ಲಿ ಅಪಹೃತರಾದ ನಿದನ್ ಸಿಂಗ್ ಸಚ್‌ದೇವಾ ಅವರನ್ನು ಕೂಡ ಕರೆತರಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ಖರಿಗೆ ಜೀವಭಯವಿದ್ದು, ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತೀಯ ವಿದೇಶಾಂಗ ಸಚಿವಾಲಯ ಮುಂದಾಗಿದೆ.

English summary
India today lodged a protest with the Pakistan High Commission over reports that attempts are being made to convert a famous gurdwara in Lahore into a mosque.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X