ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏಪ್ರಿಲ್ 16ರಿಂದ 20ರ ಮಧ್ಯೆ ಭಾರತದಿಂದ ಪಾಕ್ ಮೇಲೆ ಮತ್ತೊಂದು ದಾಳಿ'

By ಅನಿಲ್ ಆಚಾರ್
|
Google Oneindia Kannada News

ಕರಾಚಿ (ಪಾಕಿಸ್ತಾನ), ಏಪ್ರಿಲ್ 7: ಪಾಕಿಸ್ತಾನಕ್ಕೆ ಇರುವ 'ವಿಶ್ವಾಸಾರ್ಹ ಗುಪ್ತಚರ' ಮಾಹಿತಿ ಪ್ರಕಾರ ಈ ತಿಂಗಳಲ್ಲಿ ಭಾರತ ಮತ್ತೊಮ್ಮೆ ಪಾಕ್ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಭಾವುವಾರ ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಜಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ಉಗ್ರಗಾಮಿಗಳ ಆತ್ಮಾಹುತಿ ದಾಳಿ ನಡೆದ ಮೇಲೆ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ ಹದಿನಾರರಿಂದ ಇಪ್ಪತ್ತನೇ ತಾರೀಕಿನ ಮಧ್ಯೆ ದಾಳಿ ನಡೆಯಬಹುದು ಎಂದು ದಿನಾಂಕ ಕೂಡ ಖುರೇಷಿ ಹೇಳಿದ್ದಾರೆ. "ನಮಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಬಂದಿದ್ದು, ಪಾಕಿಸ್ತಾನದ ಮೇಲೆ ಹೊಸದಾಗಿ ದಾಳಿ ನಡೆಸಲು ಭಾರತ ಯೋಜನೆ ರೂಪಿಸಿದೆ. ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ಏಪ್ರಿಲ್ ಹದಿನಾರರಿಂದ ಇಪ್ಪತ್ತರ ಮಧ್ಯೆ ದಾಳಿ ನಡೆಯಬಹುದು" ಎಂದು ಪಾಕಿಸ್ತಾನದ ತಮ್ಮ ತವರು ಮುಲ್ತಾನ್ ನಲ್ಲಿ ಅವರು ಹೇಳಿದ್ದಾರೆ.

App ಮೂಲಕ ಉಗ್ರರ ನೇಮಕಾತಿ! ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿApp ಮೂಲಕ ಉಗ್ರರ ನೇಮಕಾತಿ! ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ

ನಿರ್ದಿಷ್ಟವಾಗಿ ಇಂಥ ದಿನ ಎಂದು ಹೇಳುತ್ತಿರುವುದಕ್ಕೆ ಪಾಕಿಸ್ತಾನದ ಬಳಿ ಸಾಕ್ಷ್ಯ ಏನಿದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಜನರ ಜತೆಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

India preparing to attack Pakistan between April 16 to 20, Pak minister

ಬಾಲಕೋಟ್ ದಾಳಿ ಬಗ್ಗೆ ಪ್ರಧಾನಿ ಮೋದಿ ಹೇಳಿದ 'ಆ ರಹಸ್ಯ' ಬಾಲಕೋಟ್ ದಾಳಿ ಬಗ್ಗೆ ಪ್ರಧಾನಿ ಮೋದಿ ಹೇಳಿದ 'ಆ ರಹಸ್ಯ'

ಈ ಬಗ್ಗೆ ಭಾರತದ ವಿದೇಶಾಂಗ ಕಚೇರಿ ಯಾವುದೇ ಪ್ರತಿಕ್ರಿಯೆಯನ್ನು ತಕ್ಷಣಕ್ಕೆ ನೀಡಿಲ್ಲ. ಭಾರತದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಗೆ ಯುದ್ಧ ದಾಹ ಎಂದು ಜರಿದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಭಾರತೀಯ ವಾಯು ಸೇನೆಯಿಂದ ಪಾಕಿಸ್ತಾನದ ಯಾವುದೇ ಯುದ್ಧ ವಿಮಾನ ಹೊಡೆದುರುಳಿಸಿಲ್ಲ ಎಂದು ಪಾಕ್ ವಾದಿಸುತ್ತಲೇ ಇದೆ.

English summary
Pakistan has "reliable intelligence" that India will attack again this month, foreign minister Shah Mahmood Qureshi said on Sunday, as tension over a February standoff between the two nuclear-armed neighbours had appeared to ease. The attack could take place between April 16 and 20, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X