ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ

By Mahesh
|
Google Oneindia Kannada News

ವಾಷಿಂಗ್ಟನ್, ನ.4: ಭೂಮಿಯಲ್ಲಿ ಜೀವಿಗಳು ಮೊದಲಿಗೆ ಉಗಮವಾಗಿದ್ದು ಹೇಗೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಉತ್ತರ ಕಂಡುಕೊಂಡಿದಾರೆ. 4 ಬಿಲಿಯನ್ ವರ್ಷಗಳ ಹಿಂದೆ ಜೀವ ಉಗಮವಾಗಿದ್ದು ಹೇಗೆ ಎಂಬುದನ್ನು ಮೂರು ತಾಣಗಳ ಅವಶೇಷಗಳನ್ನು ಅಭ್ಯಸಿಸಿ ಈ ಉತ್ತರ ಕಂಡು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೋಲ್ಕತ್ತಾದಲ್ಲಿ ಜನಿಸಿರುವ ಡಾ. ಚಟರ್ಜಿ ಅವರು ಲಕ್ಷಾಂತರ ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಸರಿ ಉತ್ತರ ಕಂಡುಕೊಂಡಿರುವುದಾಗಿ ಪ್ರತಿಪಾದಿಸಿದ್ದಾರೆ. ನಮ್ಮ ಗ್ರಹದ ಆರಂಭಿಕ ಭೂಪದರ, ರಾಸಾಯನಿಕಗಳ ಉಗಮಗಳನ್ನು ಅಧ್ಯಯನ ನಡೆಸಿ ನೀಡಿರುವ ಸಿದ್ಧಾಂತ ಡೈನೋಸರಸ್ ಅವಿಷ್ಕಾರಕ್ಕಿಂತ ದೊಡ್ಡದು ಎಂದು ಚಟರ್ಜಿ ಹೇಳಿದ್ದಾರೆ.

ಮೊದಲಿಗೆ ಭೂಮಿ ಉಗಮ ಆಗಿದ್ದು ಹೇಗೆ ಎಂಬುದಕ್ಕೆ ಉತ್ತರ ನೀಡಿರುವ ಡಾ. ಚಟರ್ಜಿ, 'ಬೃಹತ್ ಆಕಾಶಕಾಯಗಳು ಭೂಮಿಯ ಮೇಲ್ಪದರ ಮೇಲೆ ಬಿಲಿಯನ್ ವರ್ಷಗಳ ಹಿಂದೆ ಅಪ್ಪಳಿಸಿತ್ತು. ಇದರ ಪರಿಣಾಮ ಬೃಹತ್ ಕುಳಿಗಳು ರಚನೆಯಾಯಿತು. ಇದರಲ್ಲಿ ನೀರು ಹಾಗೂ ಜೀವ ಉಗಮಕ್ಕೆ ಬೇಕಾದ ಅಗತ್ಯ ರಾಸಾಯನಿಕಗಳು ಇದ್ದವು. ಇವೇ ಮುಂದೆ ಜೀವ ಉಗಮಕ್ಕೆ ಕಾರಣವಾಯಿತು ಎಂದು ಚಟರ್ಜಿ ವಿವರಿಸಿದ್ದಾರೆ.

India-origin scientist explains how life began on earth

ಭೂಮಿಯ ಮೇಲೆ ಅಪ್ಪಳಿಸಿದ ಆಕಾಶಕಾಯ, ಧೂಮಕೇತುಗಳು ಜೀವ ಉಗಮ ಹಾಗೂ ಜೀವನಾಶ ಎಲ್ಲಕ್ಕೂ ಕಾರಣವಾಗಿದೆ. ಈ ಅಂಶ ಜಗತ್ತಿನ ಅತಿ ಪ್ರಾಚೀನ ಅವಶೇಷಗಳನ್ನು ಒಳಗೊಂಡಿರುವ ಮೂರು ತಾಣಗಳಲ್ಲಿ ಸಂಶೋಧನೆ ನಡೆಸಿದಾಗ ತಿಳಿದು ಬಂದಿದೆ. ಏಕಕೋಶ ಜೀವಿಗಳು ಜಲಉಷ್ಣ ಕ್ರೇಟರ್ ಗಳಲ್ಲಿ ಉಗಮಗೊಂಡಿದೆ ಎಂದು ಚಟರ್ಜಿ ಹೇಳಿದ್ದಾರೆ.

4.5 ಬಿಲಿಯನ್ ವರ್ಷಗಳ ಹಿಂದೆ ಭೂಮಿ ಉಗಮವಾದಾಗ ಜೀವಮಾರಕ ಮಾರುತಗಳನ್ನು ಹೊಂದಿದ್ದ ವಾತಾವರಣ ಹೊಂದಿತ್ತು. ಅನೇಕ ಕಡೆ ಅಗ್ನಿ ಪರ್ವತಗಳು, ಆಸಿಡ್ ಮಳೆಗಳು ಮಾಮೂಲಿಯಾಗಿತ್ತು ಒಂದು ಬಿಲಿಯನ್ ವರ್ಷಗಳ ನಂತರ ಜಲ ಸಸ್ಯಗಳು ಮೈಕ್ರೋ ಏಕ ಕೋಶ ಜೀವಿಗಳ ಉಗಮ ಕಾಣಲಾಯಿತು ಎಂದು ಡೆನ್ ವರ್ ನಲ್ಲಿ ನಡೆದ ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೆರಿಕದ ವಾರ್ಷಿಕ ಸಭೆಯಲ್ಲಿ ಡಾ. ಚಟರ್ಜಿ ತಮ್ಮ ಸಂಶೋಧನೆಯನ್ನು ವಿವರಿಸಿದ್ದಾರೆ.(ಪಿಟಿಐ)

English summary
An Indian-origin scientist claims to have solved the mystery of how life on earth exactly began about 4 billion years ago after studying three sites containing the world's oldest fossils.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X