ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿರುವ ಎರಡು ಪ್ರದೇಶಗಳಿಗೂ ಪಾಕಿಸ್ತಾನ್ ಗಾಳ!

|
Google Oneindia Kannada News

ನವದೆಹಲಿ, ನವೆಂಬರ್.01: ಪಾಕಿಸ್ತಾನವು ಗಿಲ್ಜಿಟ್ ಮತ್ತು ಬಲ್ತಿಸ್ತಾನ್ ಪ್ರದೇಶಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಭಾರತವು ಟೀಕಿಸಿದೆ. ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ತಾತ್ಕಾಲಿಕ ಪ್ರಾಂತೀಯ ಸ್ಥಿತಿ ಬಗ್ಗೆ ಘೋಷಿಸಿದ ಬೆನ್ನಲ್ಲೇ ಭಾರತವು ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನವು ಒತ್ತಾಯಪೂರ್ವಕವಾಗಿ ಗಿಲ್ಜಿಟ್-ಬಲ್ತಿಸ್ತಾನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಭಾರತವು ದೂಷಿಸಿದೆ.

ಪುಲ್ವಾಮಾ ದಾಳಿ ನಾವು ಮಾಡಿದ್ದೆಂದು ಹೇಳಿಯೇ ಇಲ್ಲ: ಪಾಕ್ ಸಚಿವ ಯೂಟರ್ನ್ಪುಲ್ವಾಮಾ ದಾಳಿ ನಾವು ಮಾಡಿದ್ದೆಂದು ಹೇಳಿಯೇ ಇಲ್ಲ: ಪಾಕ್ ಸಚಿವ ಯೂಟರ್ನ್

ಭಾರತೀಯ ಪ್ರದೇಶಗಳಲ್ಲಿ ಭೌತಿಕ ಬದಲಾವಣೆಗಳನ್ನು ತರುವುದರ ಮೂಲಕ ಬಲವಂತವಾಗಿ ಗಡಿ ಪ್ರದೇಶವನ್ನು ಅತಿಕ್ರಮಿಸಿಕೊಳ್ಳುವ ಪ್ರಯತ್ನವನ್ನು ಭಾರತೀಯ ಸರ್ಕಾರವು ಈ ಹಿಂದೆಯೂ ತಿರಸ್ಕರಿಸಿದೆ. 1947ರಲ್ಲಿ ಮಾಡಿಕೊಳ್ಳಲಾದ ಕಾನೂನುಬದ್ಧ ಒಪ್ಪಂದದಲ್ಲಿಯೇ ಈ ಬಗ್ಗೆ ಉಲ್ಲೇಖಿಸಲಾಗಿದೆ. ಗಿಲ್ಜಿಟ್ ಮತ್ತು ಬಲ್ತಿಸ್ತಾನ್ ಪ್ರದೇಶಗಳನ್ನೂ ಒಳಗೊಂಡಂತೆ ಜಮ್ಮು-ಕಾಶ್ಮೀರ, ಲಡಾಖ್ ಪ್ರದೇಶಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಈ ಪ್ರದೇಶಗಳ ಬದಲಾಯಿಸಲು ಸಾಧ್ಯವಾಗದ ಮತ್ತು ಸಂಪೂರ್ಣವಾಗಿ ಭಾರತೀಯ ಗಡಿಗೆ ಸಂಬಂಧಿಸಿದ ಅವಿಭಾಜ್ಯ ಅಂಗಗಳು ಎಂದು ಈ ಮೊದಲೇ ಸ್ಪಷ್ಟವಾಗಿ ಹೇಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.

India Opposing To Pakistans Decision To Grant Provisional Provincial Status To Gilgit-Baltistan

70 ವರ್ಷಗಳಿಂದ ಪಾಕಿಸ್ತಾನಕ್ಕೆ ಇದೇ ಕಾರ್ಯ:
ಕಳೆದ 70 ವರ್ಷಗಳಿಂದಲೂ ಪಾಕಿಸ್ತಾನವು ಭಾರತೀಯ ಗಡಿಯಲ್ಲಿ ಅತಿಕ್ರಮಣ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಅಕ್ರಮ ಅತಿಕ್ರಮಣವನ್ನು ಮರೆಮಾಚುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಸ್ವಾತಂತ್ರ್ಯ ನಿರಾಕರಣೆಯನ್ನು ಮರೆ ಮಾಚುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅನುರಾಗ್ ಶ್ರೀವಾಸ್ತವ್ ಕಿಡಿ ಕಾರಿದ್ದಾರೆ. "ಈ ಭಾರತೀಯ ಪ್ರಾಂತ್ಯಗಳ ಸ್ಥಿತಿಯನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸುವ ಬದಲು, ಪಾಕಿಸ್ತಾನವು ಅಕ್ರಮ ಅತಿಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ಕೂಡಲೇ ಖಾಲಿ ಮಾಡಿಕೊಂಡು ಹೋಗುವುದು ಸೂಕ್ತ ಎಂದು ಶ್ರೀವಾಸ್ತವ್ ಕರೆ ನೀಡಿದ್ದಾರೆ.
ಪಾಕಿಸ್ತಾನ್ ಸುಪ್ರೀಂಕೋರ್ಟ್ ಹೇಳಿದ್ದೇನು:
2020ರ ಆರಂಭದಲ್ಲಿ ಗಿಲ್ಜಿಟ್ ಮತ್ತು ಬಲ್ತಿಸ್ತಾನ್ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಅಗತ್ಯವಿರುವ ಆಡಳಿತಾತ್ಮಕ ತಿದ್ದುಪಡಿಗಳನ್ನು ಮಾಡುವಂತೆ ಪಾಕಿಸ್ತಾನ್ ಸರ್ಕಾರಕ್ಕೆ ಕಳೆದ 2018ರಲ್ಲೇ ಇಸ್ಲಮಾಬಾದ್ ಸುಪ್ರೀಂಕೋರ್ಟ್ ಆದೇಶಿಸಿತ್ತು. ಗಿಲ್ಜಿಟ್-ಬಲ್ತಿಸ್ತಾನ್ ನಲ್ಲಿ ಆಡಳಿತಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಯ್ದೆಗಳನ್ನು ರೂಪಿಸುವ ಅಧಿಕಾರವನ್ನು ಪಾಕಿಸ್ತಾನ ಪ್ರಧಾನಮಂತ್ರಿಯವರಿಗೆ ನೀಡಲಾಗಿತ್ತು. ತೀರ್ಪಿನ ವಿರುದ್ಧ ಭಾರತವು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಭಟನೆಗಳು ನಡೆದವು. ಆಗಸ್ಟ್.18ರಂದು ಗಿಲ್ಜಿಟ್ ಮತ್ತು ಬಲ್ತಿಸ್ತಾನ್ ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಜುಲೈನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಹೆಚ್ಚಾದ ಹಿನ್ನೆಲೆ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿದೆ.

English summary
India Opposing To Pakistan's Decision To Grant Provisional Provincial Status To Gilgit-Baltistan. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X