ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಯರಿಗೆ ಸವಲತ್ತು : ಅಮೆರಿಕಕ್ಕಿಂತ ಭಾರತವೇ ಸಾವಿರಪಟ್ಟು ಮೇಲು!

By ಯಶೋಧರ ಪಟಕೂಟ
|
Google Oneindia Kannada News

ಮೆಂಫಿಸ್, ಅಕ್ಟೋಬರ್ 22 : ಗರ್ಭಿಣಿಯರು ಭಾರವಾದ ವಸ್ತುಗಳನ್ನು ಎತ್ತುವುದಿರಲಿ, ಒಂದು ಕಡ್ಡಿಯನ್ನು ಎತ್ತಲು ಅವಕಾಶ ನೀಡುವುದಿಲ್ಲ. ತುಂಬು ಬಸುರಿಯರು ಕೂಡ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಅವರ ಬಗ್ಗೆ ಕೆಲಸ ಮಾಡಿಸುವವರಿಗೆ ಒಂದು ವಿಶೇಷವಾಗಿ ಕಾಳಜಿ ಇದ್ದೇ ಇರುತ್ತದೆ.

ಇದು ಭಾರತದ ಸಂಸ್ಕೃತಿ. ತಾಯ್ತನದ ರಜಾವನ್ನು ಕೂಡ ಹದಿನಾರರಿಂದ 26 ವಾರಗಳವರೆಗೆ ವಿಸ್ತರಿಸಲಾಗಿದೆ. ಕೆಲವೊಂದು ಕಂಪನಿಗಳಲ್ಲಿ ಇನ್ನೂ ಎರಡು ತಿಂಗಳು ಹೆಚ್ಚುವರಿ ರಜಾ ಬೇಕಿದ್ದರೂ (ಮಾಲಿಕರು ಕರುಣಾಮಯಿಯಾಗಿದ್ದರೆ) ತಾಯ್ತನದ ಸುಖವನ್ನು ಅನುಭವಿಸಲು ಸಿಗುತ್ತದೆ, ಸಂಬಳದ ಸಮೇತ.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

ತಾಯ್ತನದ ಸುಖ ಅನುಭವಿಸುವುದು ಮಹಿಳೆಯರ ಜೀವಮಾನದ ಮರೆಯಲಾಗದ ಅನುಭವಗಳಲ್ಲಿ ಒಂದು. ಪೌಷ್ಟಿಕ ಆಹಾರಗಳನ್ನು ಸೇವಿಸುತ್ತ, ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವುದಲ್ಲದೆ, ಹೊಟ್ಟೆಯಲ್ಲಿ ಆಗಾಗ ಒದೆ ನೀಡುತ್ತ ಬೆಳೆಯುತ್ತಿರುವ ಪುಟ್ಟ ಕಂದನ ಆರೋಗ್ಯವೂ ಅಷ್ಟೇ ಮುಖ್ಯವಾಗಿರುತ್ತದೆ.

ಎಲ್ಲೆಡೆ ಅಲ್ಲದಿದ್ದರೂ ಅಮೆರಿಕದ ಕೆಲವೆಡೆ ಗರ್ಭಿಣಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ? ಅವರಿಗೆ ಯಾವ್ಯಾವ ಸವಲತ್ತು ಕೊಡುತ್ತಾರೆ? ಇತ್ಯಾದಿ ಪ್ರಶ್ನೆಗಳು ಏಳುವುದೇಕೆಂದರೆ, ಮಿಸಿಸಿಪ್ಪಿ ಗಡಿಯಲ್ಲಿರುವ ಮೆಂಫಿಸ್ ನ ವೆರಿಜಾನ್ ಕಂಪನಿಯಲ್ಲಿ ನಡೆದಿರುವ ಘಟನೆ, ಮನ ಕಲಕುವಂತಿದೆ, ಈ ಬಗ್ಗೆ ಸರಕಾರವೇ ಅವಲೋಕಿಸಲು ಪ್ರೇರೇಪಿಸುವಂತಿದೆ.

ಮಾನವೀಯತೆಗೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು

ಮಾನವೀಯತೆಗೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು

ಈ ಕಂಪನಿಯ ಗೋದಾಮಿನಲ್ಲಿ ಹೆಚ್ಚಾಗಿ ಮಹಿಳೆಯರೇ ಇರುವ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಐಫೋನ್ ಮತ್ತಿತರ ಗ್ಯಾಡ್ಜೆಟ್ ತುಂಬಿರುವ, ಇಪ್ಪತ್ತು ಇಪ್ಪತ್ತೈದು ಕೆಜಿ ತೂಕವಿರುವ ಭಾರೀ ಗಾತ್ರದ ಬಾಕ್ಸ್ ಗಳನ್ನು ಎಳೆಯುತ್ತಾರೆ, ಎತ್ತುತ್ತಾರೆ. ಗಾಜಿನಿಂದ ಆವೃತವಾಗಿರುವ ಆವರಣದಲ್ಲಿ ಹವಾ ನಿಯಂತ್ರಣವೂ ಇರುವುದಿಲ್ಲ. ಕೆಲಬಾರಿ ಉಷ್ಣಾಂಶ ವಿಪರೀತಕ್ಕೆ ಹೋಗಿರುತ್ತದೆ. ಹಲವು ಬಾರಿ ಮಹಿಳಾ ಕಾರ್ಮಿಕರು ಸಾಧ್ಯವಾಗದೆ ತಲೆತಿರುಗಿ ಬೀಳುತ್ತಾರೆ. ಖಾಸಗಿ ಕಾಂಟ್ರಾಕ್ಟರ್ ಇದರ ಮಾಲಿಕನಾಗಿದ್ದಾನೆ. ಮಾನವೀಯತೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ದಾರುಣ ಕಥೆಯನ್ನು ಬಿಚ್ಚಿಟ್ಟಿದೆ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ.

ಎಂಥವರ ಮನವನ್ನೂ ಜಾಲಾಡಿ ಬಿಡುವ ಘಟನೆ

ಎಂಥವರ ಮನವನ್ನೂ ಜಾಲಾಡಿ ಬಿಡುವ ಘಟನೆ

ಕಳೆದ ಆಗಸ್ಟ್ ನಲ್ಲಿ ನಡೆದ ಈ ಘಟನೆ ಎಂಥವರ ಮನವನ್ನೂ ಜಾಲಾಡಿ ಬಿಡುತ್ತದೆ. ಇಂಥದೇ ಕೆಲಸ ಮಾಡುತ್ತಿದ್ದ ಹತ್ತೊಂಬತ್ತು ವರ್ಷದ ಸಿಯಾಡ್ರಿಯಾ ವಾಕರ್ ಆಗ ಗರ್ಭಿಣಿ. ತಮಗೆ ಕಡಿಮೆ ಭಾರ ಎತ್ತುವ ಕೆಲಸ ನೀಡಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ವೈದ್ಯರ ಶಿಫಾರಸು ಪತ್ರವನ್ನೂ ತಂದಿದ್ದರು. ವೈದ್ಯರು ಅವರಿಗೆ ಹೆಚ್ಚು ಆಯಾಸವಾಗದ ರೀತಿಯಲ್ಲಿ ಕೆಲಸ ನೀಡಬೇಕು ಮತ್ತು ಕಡಿಮೆ ಅವಧಿಯ ಕೆಲಸ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದ್ದರು. 45ರಿಂದ 50 ಪೌಂಡು ತೂಕವಿರುವ ಬಾಕ್ಸ್ ಗಳಲ್ಲಿ 15 ಪೌಂಡ್ ತೂಕದ ವಸ್ತುವನ್ನೂ ಎತ್ತಬಾರದು ಎಂದು ಹೇಳಲಾಗಿತ್ತು. ಆದರೆ, ಅಮಾನವೀಯ ಸೂಪರ್ ವೈಸರ್ ಎಲ್ಲ ಬೇಡಿಕೆಗಳನ್ನೂ ಕಸದಬುಟ್ಟಿಗೆ ಎಸೆದಿದ್ದ. ವೈದ್ಯರು ಶಿಫಾರಸು ಮಾಡಿದ್ದಕ್ಕಿಂದ ಹೆಚ್ಚಿನ ತೂಕದ ವಸ್ತುಗಳನ್ನು ಹೊತ್ತೊಯ್ಯಲು ಸೂಚಿಸಿದ್ದ. ಇದರಿಂದ ಆಗಿದ್ದೇನು?

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

ಮಗುವಿನ ಅಳು ಕೇಳುವ ಮೊದಲೇ...

ಮಗುವಿನ ಅಳು ಕೇಳುವ ಮೊದಲೇ...

ಇದರಿಂದ ಗರ್ಭಪಾತವಾಗಿ, ವಾಕರ್ ಕಟ್ಟಿಕೊಂಡಿದ್ದ ಕನಸುಗಳೆಲ್ಲ ನುಚ್ಚುನೂರಾಗಿದ್ದವು. ಅಲ್ಲ ಮಹಿಳೆಯರ ಅಳಲಿಗೆ, ಅಳುವಿಗೆ ಯಾವುದೇ ಬೆಲೆ ಇರಲಿಲ್ಲ. ಮಹಿಳೆಯರ ಗೋಳು ಅರಣ್ಯರೋದನವಾಗಿತ್ತು. ಇಂಥದೇ ಕಥೆಗಳನ್ನು ಹಲವಾರು ಮಹಿಳೆಯರು ತೋಡಿಕೊಂಡಿದ್ದಾರೆ. 2014ರಲ್ಲಿ ಕೂಡ 23 ವರ್ಷದ ಎರಿಕಾ ಹೇಯ್ನ್ಸ್ ಎಂಬ ಮಹಿಳೆ ಮಗುವಿನ ಅಳು ಕೇಳುವ ಮೊದಲೇ ಇದೇ ರೀತಿಯ ದುರುಂತ ಕಂಡಿದ್ದರು. ಭಾರದ ವಸ್ತುವನ್ನು ಗತ್ಯಂತರವಿಲ್ಲದೆ ಎತ್ತಿದ್ದರಿಂದ ಬಾತ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಧರಿಸಿದ ಜೀನ್ಸ್ ರಕ್ತಮಯವಾಗಿತ್ತು. ಕಡಿಮೆ ತೂಕದ ಡಬ್ಬಿಗಳನ್ನು ಎತ್ತಲು ಅವಕಾಶ ನೀಡಬೇಕೆಂದು ಬೇಡಿಕೊಂಡಿದ್ದರೂ ಸೂಪರ್ ವೈಸರ್ ಹಿತ್ತಾಳೆ ಕಿವಿಗೆ ಬಿದ್ದಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ದುಃಖಕರ ಮತ್ತು ಹೇಯ ಅನುಭವ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಿತಿಮೀರಿದ ಗರ್ಭಿಣಿಯರ ಬಗೆಗಿನ ತಾರತಮ್ಯ

ಮಿತಿಮೀರಿದ ಗರ್ಭಿಣಿಯರ ಬಗೆಗಿನ ತಾರತಮ್ಯ

ಅಮೆರಿಕದ ಕಾರ್ಪೊರೇಟ್ ವಲಯದಲ್ಲಿ ಗರ್ಭಿಣಿಯರ ಬಗೆಗಿನ ತಾರತಮ್ಯ ಮಿತಿಮೀರಿದೆ. ಕೆಲವೆಡೆ ಗರ್ಭಿಣಿಯರಿಗೆ ಭಡ್ತಿ ನೀಡುವುದಿಲ್ಲ ಮತ್ತು ಸಂಬಳವನ್ನೂ ಹೆಚ್ಚಿಸುವುದಿಲ್ಲ. ಇನ್ನು ಕೆಲವೆಡೆ ಮಹಿಳೆಯರು ಗರ್ಭಿಣಿಯಾಗುವ ಸೂಚನೆ ಸಿಗುತ್ತಿದ್ದಂತೆ, ರಜಾ ನೀಡಬೇಕಾಗುತ್ತದೆ, ಇತರ ಸವಲತ್ತುಗಳನ್ನು ನೀಡಬೇಕಾಗುತ್ತದೆ ಎಂದು ಕೆಲಸದಿಂದಲೇ ಕಿತ್ತು ಬಿಸಾಡಲಾಗುತ್ತದೆ. ಇದು ಅಲ್ಲಿ ಕಾನೂನು ಸಮ್ಮತವಾದದ್ದು. ಇದರಿಂದಾಗಿ ಗರ್ಭಪಾತವಾಗಿದೆ, ಅವಧಿಗೆ ಮುನ್ನವೇ ಮಕ್ಕಳು ಹುಟ್ಟಿವೆ, ನಿಶ್ಚಲ ಮಕ್ಕಳು ಜನಿಸಿವೆ. ಇದು ಗೋದಾಮುಗಳಲ್ಲಿ ಮಾತ್ರವಲ್ಲ, ಏರ್ಪೋರ್ಟ್ ಗಳಲ್ಲಿ, ಮಾಲ್ ಗಳಲ್ಲಿ, ಜೈಲಿನಲ್ಲಿ, ಅಗ್ನಿ ಶಾಮಕದಳಗಳಲ್ಲಿ, ಹೋಟೆಲುಗಳಲ್ಲಿ, ಫಾರ್ಮಾಸ್ಯುಟಿಕಲ್ ಕಂಪನಿಗಳಲ್ಲಿ ಮತ್ತಿತರ ಕಂಪನಿಗಳಲ್ಲಿ ಸಂಭವಿಸಿದೆ. ಆದರೆ, ಮಹಿಳೆಯರ ಪರವಾಗಿ ನಿಂತಿದ್ದು ಕಡಿಮೆ. ಇದೇಕೆ ಈ ತಾರತಮ್ಯ?

ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?

ಓಬೀರಾಯನ ಕಾಲದ ಕಾನೂನು

ಓಬೀರಾಯನ ಕಾಲದ ಕಾನೂನು

ಅಮೆರಿಕದಲ್ಲಿ, ಗರ್ಭಿಣಿಯರ ಸಂರಕ್ಷಣೆಗೆಂದು ಕಾಯ್ದೆಯನ್ನು ರೂಪಿಸಲಾಗಿದೆ. 40 ವರ್ಷ ಹಳೆಯದಿರುವ ಕೆಲಸಕ್ಕೆ ಬಾರದ ಕಾನೂನಿನಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ. ಅದೇನು ಹೇಳುತ್ತದೆಂದರೆ, ಗರ್ಭಿಣಿಯರ ಸುರಕ್ಷತೆಗೆ ಕಂಪನಿಗಳಲ್ಲಿ ಅವಕಾಶವಿದ್ದರೆ, ಆ ಸವಲತ್ತನ್ನು ಇತರ ಮಹಿಳೆಯರಿಗೂ ನೀಡಲಾಗುತ್ತಿದ್ದರು, ಅದನ್ನು ಉಳಿದ ಮಹಿಳೆಯರಿಗೂ ವಿಸ್ತರಿಸಬೇಕು. ಯಾವುದೇ ಕಂಪನಿಯಲ್ಲಿ ಇದಕ್ಕೆ ಅವಕಾಶ ಇಲ್ಲದಿದ್ದರೆ, ರಜಾ ನೀಡುವ, ಕಡಿಮೆ ಕೆಲಸ ತೆಗೆದುಕೊಳ್ಳುವ, ಅವರಿಗೆ ವಿಶೇಷ ಸವಲತ್ತು ನೀಡುವ ಅವಶ್ಯಕತೆಯೂ ಇಲ್ಲ. ಯಾವ ಸೀಮೆ ಕಾನೂನಿದು? ಎಕ್ಸ್‌ಪಿಓ ಲಾಜಿಸ್ಟಿಕ್ಸ್ ಕೂಡ ಇದೇ ರೀತಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಹಲವಾರು ಮಹಿಳೆಯರು ಗರ್ಭಪಾತದಿಂದಾಗಿ ತಾಯಿಯಾಗುವ ಸುಖ ಅನುಭವಿಸುತ್ತಿಲ್ಲ.

ಭಾರತದಲ್ಲಿ ಗರ್ಭಿಣಿಯರಿಗಾಗಿ ಏನು ಕಾನೂನಿದೆ?

ಭಾರತದಲ್ಲಿ ಗರ್ಭಿಣಿಯರಿಗಾಗಿ ಏನು ಕಾನೂನಿದೆ?

ನಾಗರಿಕ ಹಕ್ಕು ಕಾಯ್ದೆ 1964ನ್ನೇ ತಿದ್ದುಪಡಿ ಮಾಡಿ ಗರ್ಭಧಾರಣೆ ಪಕ್ಷಪಾತ ಕಾಯ್ದೆ 1978 ಅನ್ನು ರೂಪಿಸಲಾಗಿದೆ. ಗರ್ಭಿಣಿಯರಿಗೆ ಕೆಲಸದ ಸ್ಥಳದಲ್ಲಿ ತೊಂದರೆಯಾದರೂ ದೂರುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಅಲ್ಲದೆ, ಗರ್ಭಿಣಿಯಾದ ಮಾತ್ರಕ್ಕೆ, ನಿಮಗೆ ಅರ್ಹತೆ ಇದ್ದರೆ ಕೆಲಸವನ್ನು ನಿರಾಕರಿಸುವಂತಿಲ್ಲ. ಗರ್ಭಿಣಿಯಾಗಿದ್ದಾಗ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವಂತಿಲ್ಲ. ಮಾಲಿಕ ಗರ್ಭಿಣಿಯರನ್ನು ಕೆಲಸ ಮಾಡದಂತೆ ತಡೆಯುವಂತಿಲ್ಲ ಮತ್ತು ಮಗು ಹುಟ್ಟಿದ ಮೇಲೆ ಕೆಲಸಕ್ಕೆ ಬರುವಂತೆ ಒತ್ತಾಯಿಸುವಂತೆಯೂ ಇಲ್ಲ. ಕಂಪನಿಯಿಂದ ಆರೋಗ್ಯ ವಿಮೆ ಮಾಡಿಸಿದ್ದರೆ ಗರ್ಭಿಣಿಯರಿಂದ ಹೆಚ್ಚಿನ ಕಂತನ್ನು ಕೀಳುವಂತೆಯೂ ಇಲ್ಲ. ಅಲ್ಲದೆ, ತಾಯ್ತನದ ರಜಾವನ್ನು 26 ವಾರಗಳಿಗೆ ಭಾರತದಲ್ಲಿ ವಿಸ್ತರಿಸಲಾಗಿದೆ. ಒಟ್ಟಿನಲ್ಲಿ ಭಾರತದ ಕಾನೂನು ಗರ್ಭಿಣಿಯರ ಪರವಾಗಿದೆ. ಇದನ್ನು ಅಮೆರಿಕದ ಕಾನೂನಿನೊಂದಿಗೆ ತುಲನೆ ಮಾಡುವಂತೆಯೂ ಇಲ್ಲ.

ನವೆಂಬರ್ 1ರಿಂದ ಗರ್ಭಿಣಿಯರು, ಬಾಣಂತಿಯರಿಗೆ ಮಾಸಿಕ 1 ಸಾವಿರನವೆಂಬರ್ 1ರಿಂದ ಗರ್ಭಿಣಿಯರು, ಬಾಣಂತಿಯರಿಗೆ ಮಾಸಿಕ 1 ಸಾವಿರ

English summary
India more sensitive to pregnant women than the US. Under Pregnancy Discrimination Act 1978 India has provided many facilities to expecting mothers and employees have to take care mothers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X