ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ವಿರುದ್ಧ "ವಾಣಿಜ್ಯ ಸಮರ" ಸಾರಿತಾ ಕೇಂದ್ರ ಸರ್ಕಾರ?

|
Google Oneindia Kannada News

ನವದೆಹಲಿ, ಸಪ್ಟೆಂಬರ್.18: ಲಡಾಖ್ ಪೂರ್ವ ಭಾಗದಲ್ಲಿ ಕಾಲ್ಕರೆದು ನಿಂತಿರುವ ಚೀನಾಗೆ ಭಾರತವು ತಿರುಗೇಟು ನೀಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಯತಿಯೊಂದು ಎಲ್ಇಡಿ ವಸ್ತುಗಳ ಗುಣಮಟ್ಟವನ್ನು ಕಠಿಣ ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ.

ಚೀನಾದಿಂದ ಸರಕುಗಳ ಆಮದು ಮಾಡಿಕೊಳ್ಳುವುದಕ್ಕೆ ಭಾರತೀಯ ಸರ್ಕಾರವು ನಿರುತ್ಸಾಹ ತೋರುತ್ತಿದೆ. ಈ ನಿಟ್ಟಿನಲ್ಲಿ ವಿದೇಶಿ ವ್ಯಾಪಾರದ ನಿರ್ದೇಶನಾಲಯವು ಹೆಜ್ಜೆಯಿಟ್ಟಿದ್ದು, ಹೊಸ ಅಧಿಸೂಚನೆ ಹೊರಡಿಸಿದೆ.

ಪ್ಯಾಂಗೊಂಗ್ ತ್ಸೊ ನೆಪವಷ್ಟೇ, ಚೀನಾದ ಕಣ್ಣು ದೆಪ್ಸಾಂಗ್ ಮೇಲೆಪ್ಯಾಂಗೊಂಗ್ ತ್ಸೊ ನೆಪವಷ್ಟೇ, ಚೀನಾದ ಕಣ್ಣು ದೆಪ್ಸಾಂಗ್ ಮೇಲೆ

ಭಾರತಕ್ಕೆ ಆಮದು ಮಾಡಿಕೊಳ್ಳುವ ಪ್ರತಿಯೊಂದು ಚೀನಾ ವಸ್ತುಗಳ ಗುಣಮಟ್ಟವನ್ನು ಇಂಡಿಯನ್ ಸ್ಟ್ಯಾಂಡೆರ್ಡ್ ಬ್ಯುರೋ ಗುರುತಿಸಿರುವ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ (ಕಡ್ಡಾಯ ನೋಂದಣಿಯ ಅವಶ್ಯಕತೆ) ಆದೇಶ, 2012 ರ ಅಡಿಯಲ್ಲಿ, ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ ‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಆಮದು ಮಾಡಿಕೊಂಡ ವಸ್ತುಗಳ ಬಗ್ಗೆ ಆದೇಶ

ಆಮದು ಮಾಡಿಕೊಂಡ ವಸ್ತುಗಳ ಬಗ್ಗೆ ಆದೇಶ

ವಾಣಿಜ್ಯ ಸಚಿವಾಲಯದ ವ್ಯಾಪ್ತಿಗೆ ಬರುವ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ದೇಶದ ಪ್ರಮುಖ ಬಂದರುಗಳಾದ ಕಾಂಡ್ಲಾ, ಪ್ಯಾರಡೀಪ್, ಕೊಚ್ಚಿ, ಮುಂಬೈಗಳಿಂದ ಆಮದು ಮಾಡಿಕೊಳ್ಳುವ ಎಲ್‌ಇಡಿ ಉತ್ಪನ್ನಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.

DGFT ಅಧಿಸೂಚನೆಯಲ್ಲಿರುವ ಅಂಶ

DGFT ಅಧಿಸೂಚನೆಯಲ್ಲಿರುವ ಅಂಶ

- ಆಮದು ಮಾಡಿಕೊಳ್ಳುವ ಸರಕು ಅಥವಾ ಸರಕುಗಳ ಯಾವುದೇ ಯಾದೃಚ್ಛಿಕ ಮಾದರಿಯನ್ನು ಅನಿಯಮಿತ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ.

- ಈ ಎಲ್ಇಡಿ ಉತ್ಪನ್ನಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರೀಕ್ಷಿಸಲಾಗುವುದು.

- ಸರಕುಗಳ ಮಾದರಿಗಳನ್ನು ಪರೀಕ್ಷಿಸಲು ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್ (ಬಿಐಎಸ್) ಲ್ಯಾಬ್ ‌ಗಳಿಗೆ ಕಳುಹಿಸಲಾಗುವುದು, ತನಿಖೆ 7 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.

- ಮಾನದಂಡಗಳನ್ನು ಪೂರೈಸುವ ಮಾದರಿಗಳ ರವಾನೆಗೆ ಮಾತ್ರ ಕಂದಾಯ ಇಲಾಖೆಯಿಂದ ಅನುಮತಿ ನೀಡಲಾಗುತ್ತದೆ.

- ಆಯ್ಕೆ ಮಾಡಿದ ಮಾದರಿಗಳು ಮಾನದಂಡಗಳನ್ನು ಪೂರೈಸದಿದ್ದರೆ, ಅವುಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ ಅಥವಾ ನಾಶಪಡಿಸಲಾಗುತ್ತದೆ

ಚೀನಾ ಎಲೆಕ್ಟ್ರಿಕ್ ವಸ್ತುಗಳಿಗೆ ಭಾರತವೇ ಮಾರುಕಟ್ಟೆ

ಚೀನಾ ಎಲೆಕ್ಟ್ರಿಕ್ ವಸ್ತುಗಳಿಗೆ ಭಾರತವೇ ಮಾರುಕಟ್ಟೆ

ಭಾರತವು ಚೀನಾದಲ್ಲಿ ಉತ್ಪಾದಿಸಲಾಗುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಏಷ್ಯಾ ಖಂಡದಲ್ಲೇ ಅತಿಹೆಚ್ಚು ಪ್ರಮಾಣದ ಎಲೆಕ್ಟ್ರಾನಿಕ್ ಮತ್ತು ಎಲ್ಇಡಿ ಉಪಕರಗಳು ಚೀನಾದಿಂದ ಭಾರತಕ್ಕೆ ಆಮದು ಆಗುತ್ತವೆ. ಇದೀಗ ಕೇಂದ್ರ ಕೇಂದ್ರ ಸರ್ಕಾರದ ತೀರ್ಮಾನದಿಂದ ಚೀನಾದ ಎಲೆಕ್ಟ್ರಾನಿಕ್ ವಲಯಕ್ಕೆ ಭಾರಿ ಹೊಡೆತ ಕೊಡುವ ಸಾಧ್ಯತೆಗಳಿವೆ.

Recommended Video

ಉಪ ಮುಖ್ಯಮಂತ್ರಿ C.S Ashwathnarayan ಅವರಿಗೂ Covid Positive | Oneindia Kannada
ಚೀನಾದ ವಿರುದ್ಧ ಕೇಂದ್ರ ಸರ್ಕಾರದ

ಚೀನಾದ ವಿರುದ್ಧ ಕೇಂದ್ರ ಸರ್ಕಾರದ "ವಾಣಿಜ್ಯ ಸಮರ"

- ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಗೆ ಒತ್ತು ನೀಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಜುಲೈನಿಂದಲೇ ಭಾರತವು ಚೀನಾದಿಂದ ಕಲರ್ ಟಿವಿಗಳನ್ನು ಆಮದು ಮಾಡಿಕೊಳ್ಳುವದನ್ನು ನಿಷೇಧಿಸಿದೆ.

- ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಕಂಪೆನಿಗಳನ್ನು ಸರ್ಕಾರಿ ಖರೀದಿಯಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.

- ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತವು ತನ್ನ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ಬದಲಾಯಿಸಿತು.

- ವಿದೇಶಿ ನೇರ ಬಂಡವಾಳ ಹೂಡಿಕೆಗೂ ಮೊದಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಯಿತು.

- Tik Tak ಮತ್ತು Pub-G ಸೇರಿದಂತೆ ವಿವಿಧ ಚೀನಾದ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿತ್ತು.

English summary
India Makes Random Sampling Of Imported LED Products Mandatory: DGFT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X