• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ವಾರಂಟೈನ್ ಉಲ್ಲಂಘನೆ: ಮಲೇಶಿಯಾದಲ್ಲಿ ಭಾರತೀಯ ಜೈಲು ಪಾಲು

|

ಕೌಲಾಲಂಪುರ್, ಆ. 13: ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಮಲೇಶಿಯಾದಲ್ಲಿ 5 ತಿಂಗಳು ಜೈಲುವಾಸದ ಶಿಕ್ಷೆ ವಿಧಿಸಲಾಗಿದೆ. ಮಲೇಶಿಯಾದ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಅರೋಪವನ್ನು ಈ ವ್ಯಕ್ತಿ ಮೇಲೆ ಹೊರೆಸಲಾಗಿದೆ.

   ಮೊಟ್ಟ ಮೊದಲ ಕೊರೊನ ಲಸಿಕೆಯ ಹೆಸರೇನು ಗೊತ್ತಾ? | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   57 ವರ್ಷ ವಯಸ್ಸಿನ ಈ ವ್ಯಕ್ತಿ ಮಲೇಶಿಯಾದ ನಿವಾಸಿಯಾಗಿದ್ದು, ಉತ್ತರ ಪ್ರಾಂತ್ಯದ ಕೆದಾಹ್ ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಮಲೇಶಿಯಾದಲ್ಲಿ ಕೊರೊನಾಸೋಂಕು ಸಂಬಂಧಿಸಿದಂತೆ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಈ ವ್ಯಕ್ತಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದು ಸಾಬೀತಾಗಿದೆ. ಇದರಿಂದ ಇತರರಿಗೆ ಸೋಂಕು ತಗುಲಿರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

   ಜುಲೈನಲ್ಲಿ ಭಾರತಕ್ಕೆ ತೆರಳಿ ಹಿಂತಿರುಗಿದ್ದ ಈ ವ್ಯಕ್ತಿಗೆ ಮೊದಲಿಗೆ ಕೊವಿಡ್ 19 ಪರೀಕ್ಷೆಯಲ್ಲಿ ನೆಗಟಿವ್ ಎಂದು ವರದಿ ಬಂದಿತ್ತು. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದ. ಇತ್ತೀಚೆಗೆ ಎರಡು ಬಾರಿ ಪರೀಕ್ಷಿಸಿದಾಗ ಕೊರೊನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಜೊತೆಗೆ ಈತನ ಸಂಪರ್ಕಕ್ಕೆ ಬಂದ 12 ಮಂದಿಗೂ ಸೋಂಕು ತಗುಲಿದೆ.

   India Jailed In Malaysia For Violating Home Quarantine Order

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಜೈಲುಪಾಲಾದ ವ್ಯಕ್ತಿಗೆ 12,000 ರಿಂಗಿಟ್ (ಸುಮಾರು 2,864 ಯುಎಸ್ ಡಾಲರ್) ದಂಡ ವಿಧಿಸಲಾಗಿದೆ. ಕೆದಾಯ್ ನ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಈ ವ್ಯಕ್ತಿಯು ಅಲೊ ಸೆತಾರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ಎದುರಿಸಿದ್ದರು.

   English summary
   A Malaysian court jailed an Indian man for five months for violating a home quarantine order, leading to dozens of new coronavirus infections, the Bernama state news agency reported.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X