ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್-ಭಾರತದ ನಡುವೆ 7 ಮಹತ್ವದ ಒಪ್ಪಂದಗಳ ವಿನಿಮಯ

By ವಿಕಾಸ್ ನಂಜಪ್ಪ
|
Google Oneindia Kannada News

ಟೆಲ್ ಅವಿವ್, ಜುಲೈ 5: ಭಾರತ ಮತ್ತು ಇಸ್ರೇಲ್ ಬುಧವಾರ 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಸಣ್ಣ ಉಪಗ್ರಹಗಳಿಗೆ ಬೇಕಾದ ಎಲೆಕ್ಟ್ರಿಕ್ ಪ್ರೊಪಲ್ಶನ್ ಹಾಗೂ ನೀರಿನ ಸದ್ಬಳಕೆಯ ಸುಧಾರಣೆ ಅಂಶಗಳೂ ಇದರಲ್ಲಿ ಸೇರಿವೆ.

ಭಾರತ ಮತ್ತು ಇಸ್ರೇಲಿನ ಸಂಬಂಧವನ್ನು 'ಐತಿಹಾಸಿಕ' ಎಂದು ಬಣ್ಣಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, "ಇದು ಸ್ವರ್ಗದಲ್ಲೇ ನಡೆದ ಮದುವೆ. ಆದರೆ, ನಾವಿದನ್ನು ಭೂಮಿಯಲ್ಲಿ ಕಾರ್ಯರೂಪಕ್ಕಿಳಿಸುತ್ತಿದ್ದೇವೆ," ಎಂದು ಹೇಳಿದರು.

"ಭಯೋತ್ಪಾದಕರಿಂದ ನಾವು ಸವಾಲು ಎದುರಿಸಿದವರು. ನಾವು ಈ ವಿಷಯದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಕೊಂಡಿದ್ದೇವೆ," ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.

ಜಲ ಸಂರಕ್ಷಣೆ, ಅಣು ಗಡಿಯಾರ

ಜಲ ಸಂರಕ್ಷಣೆ, ಅಣು ಗಡಿಯಾರ

ಇದರ ಜತೆಗೆ ಜಲ ಸಂರಕ್ಷಣೆ, ಅಣು ಗಡಿಯಾರಗಳಲ್ಲಿ ಸಹಕಾರ ನೀಡುವ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದ ನಡೆದಿದೆ.

ಮೂಲಭೂತವಾದದ ವಿರುದ್ಧ ಹೋರಾಟ

ಮೂಲಭೂತವಾದದ ವಿರುದ್ಧ ಹೋರಾಟ

ಒಪ್ಪಂದದ ವಿನಿಮಯದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡೂ ದೇಶಗಳು ಬೆಳೆಯುತ್ತಿರುವ ಮೂಲಭೂತವಾದದ ವಿರುದ್ಧ ಹೋರಾಟ ನಡೆಸಲು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಸಹಕಾರ

ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಸಹಕಾರ

"ಇಸ್ರೇಲಿನಂತೆ ಭಾರತ ಕೂಡಾ ಹಿಂಸಾಚಾರ ಮತ್ತು ಭಯೋತ್ಪಾದನೆಯಿಂದ ನಲುಗಿದೆ," ಎಂದು ಹೇಳಿದ ಪ್ರಧಾನಿ ಮೋದಿ ನಮ್ಮ ನಡುವೆ ದ್ವಿಪಕ್ಷೀಯ ಸಂಬಂಧಗಳಾಚೆಗೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಸಂಬಂಧಿಸಿದ ಸಹಕಾರದ ಬಗ್ಗೆಯೂ ಚರ್ಚೆ ನಡೆಯಿತು ಎಂದಿದ್ದಾರೆ.

ಪ್ರಜಾಪ್ರಭುತ್ವ ಮೌಲ್ಯಗಳ ವಿನಿಮಯ

ಪ್ರಜಾಪ್ರಭುತ್ವ ಮೌಲ್ಯಗಳ ವಿನಿಮಯ

"ಗಣತಂತ್ರದ ಮೌಲ್ಯಗಳು ಮತ್ತು ಆರ್ಥಿಕ ಅಭಿವೃದ್ಧಿಯ ಬಗ್ಗೆ ನಮಗಿರುವ ನಂಬಿಕೆ ಕೂಡಾ ನಮ್ಮ ನಡುವೆ ಹಂಚಿಕೊಂಡ ಅನ್ವೇಷಣೆಗಳಾಗಿವೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಲವು ಒಪ್ಪಂದಗಳಿಗೆ ಸಹಿ

ಹಲವು ಒಪ್ಪಂದಗಳಿಗೆ ಸಹಿ

ಮೂರು ವರ್ಷಗಳ ಕೃಷಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಒಪ್ಪಂದ ನಡೆದಿದೆ. ಇನ್ನು ಜಿಇಒ-ಎಲ್ಇಒ ಆಪ್ಟಿಕಲ್ ಲಿಂಕ್ ಗೆ ಸಹಕಾರ ನೀಡಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ಅನ್ವೇಷಣೆ ನಿಧಿ ಸ್ಥಾಪನೆಗೆ ಸಂಬಂಧಿಸಿದಂತೆಯೂ ಎರಡೂ ದೇಶಗಳು ಒಮ್ಮತಕ್ಕೆ ಬಂದಿವೆ.

English summary
India and Israel on Wednesday exchanged seven agreements including the ones on cooperation in electric propulsion for small satellites and water utility reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X