• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯ್ಯೋ, ಇದೇನಾಯ್ತು? ಚೀನಾಗಿಂತ ಭಾರತವೇ ಡೇಂಜರ್ ಎಂದ ನೇಪಾಳ!

|

ಕಾಟ್ಮಂಡು, ಮೇ 20: ಭಾರತದ ಸಹೋದರನಂತೆ ಇರುವ ಪಕ್ಕದ ನೇಪಾಳ ಅದೇಕೊ ತನ್ನ ದೊಡ್ಡಣ್ಣನ ಮೇಲೆ ಅಂದರೆ ಭಾರತದ ಮೇಲೆ ಮುನಿಸಿಕೊಂಡತೆ ಕಂಡು ಬಂದಿದೆ.

   ಲಾಕ್ ಡೌನ್ ನಡುವೆ ಚಲಿಸುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ | Oneindia Kannada

   ಹೌದು, ಭಾರತದೊಂದಿಗೆ ನೇಪಾಳ ಗಡಿ ಖ್ಯಾತೆ ತೆಗೆದಿದೆ. ಇದೇ ವಿಷವಾಗಿ ಕಳೆದ ಒಂದಿಷ್ಟು ದಿನಗಳಿಂದ ಭಾರತದ ಮೇಲೆ ಮುನಿಸಿಕೊಂಡಿರುವ ನೇಪಾಳ, ಭಾರತದ ಮೇಲೆ ಗೂಬೆ ಕೂರಿಸಲು ನೋಡುತ್ತಿದೆ ಅದು ಕೊರೊನಾ ವಿಷಯದಲ್ಲಿ.

   ಭಾರತ ವಿರುದ್ಧ ನೇಪಾಳ ಗರಂ: ರಾಯಭಾರಿಗೆ ಸಮನ್ಸ್

   ಇಂದು ಸಂಸತ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ನೇಪಾಳ ಪ್ರಧಾನ ಮಂತ್ರಿ ಖಡ್ಗ ಪ್ರಸಾದ್ ಓಲಿ ಅವರು, ಭಾರತದ ಮೇಲೆ ಬಹಿರಂಗವಾಗಿ ತೀವ್ರ ಅಸಮಧಾನ ಹೊರಹಾಕಿದ್ದಾರೆ. ಕೊರೊನಾ ವೈರಸ್ ವಿಚಾರದಲ್ಲಿ ಚೀನಾ, ಇಟಲಿಗಿಂತ ಭಾರತವೇ ಡೇಂಜರ್ ಎಂದು ಓಲಿ ಆರೋಪ ಮಾಡಿ ಭಾರತದ ಮೇಲೆ ಭೂ ವಿಚಾರಕ್ಕಾಗಿರುವ ಕೋಪವನ್ನು ಹೊರಹಾಕಿದ್ದಾರೆ.

   ನೇಪಾಳಕ್ಕೆ ಕೋಪ ಯಾಕೆ ಬಂತು?

   ನೇಪಾಳಕ್ಕೆ ಕೋಪ ಯಾಕೆ ಬಂತು?

   ಓಲಿ, ''ನೇಪಾಳ ಭೂಪ್ರದೇಶದ ಭಾಗವಾಗಿರುವ ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಪ್ರದೇಶವನ್ನು ಭಾರತ ಒತ್ತುವರಿ ಮಾಡಿಕೊಂಡಿದೆ. ತನ್ನ ನಕಾಶೆಯಲ್ಲಿ ನಮ್ಮ ಭೂಭಾಗವನ್ನು ತೋರಿಸಿದೆ. ಅಲ್ಲದೇ ಅಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮಾಡಿದೆ. ಯಾವುದೇ ಬೆಲೆ ತೆತ್ತಾದರೂ ನಮ್ಮ ಭೂಭಾಗವನ್ನು ಮರಳಿ ತರುತ್ತೇವೆ" ಎಂದು ಓಲಿ ಹೇಳಿದ್ದಾರೆ.

   ಲಿಪುಲೆಖ್ ಬಳಿ ಲಿಂಕ್ ರಸ್ತೆ

   ಲಿಪುಲೆಖ್ ಬಳಿ ಲಿಂಕ್ ರಸ್ತೆ

   ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಾಖಂಡದ ಪಿಥೋರಗರ್‌ ಹಾಗೂ ಕೈಲಾಶ್ ಮಾನಸರೋವರ್ ಮಾರ್ಗದಲ್ಲಿ ಲಿಪುಲೆಖ್ ಬಳಿ ಲಿಂಕ್ ರಸ್ತೆಯನ್ನು ಉದ್ಘಾಟಿಸಿದ್ದರು. ಅದಾದ ನಂತರ 10 ದಿನಗಳ ನಂತರ ನೇಪಾಳದ ವಿದೇಶಾಂಗ ಸಚಿವಾಲಯವು ಲಿಂಕ್ ರಸ್ತೆಯನ್ನು ಆಕ್ಷೇಪಿಸಿ ಪತ್ರಿಕಾ ಪ್ರಕಟಣೆ ನೀಡಿತ್ತು. ಭಾರತವು ನೇಪಾಳದ ವಾದವನ್ನು ತಿರಸ್ಕರಿಸಿದೆ, ಅದು ಸಂಪೂರ್ಣವಾಗಿ ಭಾರತದ ಭೂಪ್ರದೇಶದಲ್ಲಿದೆ ಎಂದು ಹೇಳಿದೆ.

   ಹೊಸ ರಾಜಕೀಯ ನಕ್ಷೆಯನ್ನು ಅಂಗೀಕರಿಸಿತು ನೇಪಾಳ

   ಹೊಸ ರಾಜಕೀಯ ನಕ್ಷೆಯನ್ನು ಅಂಗೀಕರಿಸಿತು ನೇಪಾಳ

   ನೇಪಾಳ ಕ್ಯಾಬಿನೆಟ್ ಸೋಮವಾರ ತನ್ನ ಭೂಪ್ರದೇಶದ ಭಾಗವಾಗಿ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿಯನ್ನು ಒಳಗೊಂಡ ಹೊಸ ರಾಜಕೀಯ ನಕ್ಷೆಯನ್ನು ಅಂಗೀಕರಿಸಿ, ಭಾರತಕ್ಕೆ ಸೆಡ್ಡು ಹೊಡೆದಿದೆ. ಬಹುಶಃ ಹಲವಾರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಐತಿಹಾಸಿಕವಾಗಿ ಸಂಪರ್ಕ ಹೊಂದಿದ ನೆರೆಯ ಮತ್ತು ಸ್ನೇಹಿತ ಈ ರೀತಿಯ ತೀವ್ರವಾದ ಮುಖಾಮುಖಿ ನಿಲುವನ್ನು ತೆಗೆದುಕೊಂಡಿದ್ದಾರೆ. ಸ್ವಲ್ಪ ಸಮಯದವರೆಗೆ ತಳಮಳಿಸುತ್ತಿತ್ತು.

   ಭಾರತೀಯ ವೈರಸ್ ಎಂದ ಓಲಿ

   ಭಾರತೀಯ ವೈರಸ್ ಎಂದ ಓಲಿ

   ಇದಕ್ಕೂ ಮೊದಲು ತಮ್ಮ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಓಲಿ, ''ಭಾರತದಿಂದ ಅಕ್ರಮವಾಗಿ ಬರುತ್ತಿರುವವರು ನಮ್ಮ ದೇಶದಲ್ಲಿ ಕೊರೊನಾ ವೈರಸ್‌ ಹರಡುತ್ತಿದ್ದಾರೆ. ಭಾರತೀಯ ವೈರಸ್ ಈಗ ಚೈನೀಸ್ ಮತ್ತು ಇಟಾಲಿಯನ್ ಗಿಂತ ಹೆಚ್ಚು ಮಾರಕವಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ನೇಪಾಳವನ್ನೂ ಬಿಟ್ಟಿಲ್ಲ ಕೊರೊನಾ

   ನೇಪಾಳವನ್ನೂ ಬಿಟ್ಟಿಲ್ಲ ಕೊರೊನಾ

   ಜಗತ್ತನ್ನು ತೀವ್ರ ಕಂಗೆಡಿಸಿರುವ ಕೊರೊನಾ ವೈರಸ್ ಪುಟ್ಟ ರಾಷ್ಟ್ರ ನೇಪಾಳವನ್ನೂ ಬಿಟ್ಟಿಲ್ಲ. ಇಲ್ಲಿಯವರೆಗೆ ನೇಪಾಳದಲ್ಲಿ 402 ಜನರಿಗೆ ಸೋಂಕು ತಗುಲಿದೆ. 37 ಜನ ಚೇತರಿಸಿಕೊಂಡಿದ್ದಾರೆ. ಎರಡು ಜನ ಮೃತಪಟ್ಟಿದ್ದಾರೆ.

   English summary
   India Is Very Danger More Than China And Italy In Coronavirus Spreding Matter: Nepal PM Khadgha Prasad Oli Said In Nepal Parliment On Wenesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more