• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಿಂದ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿ ರವಾನೆ

|
Google Oneindia Kannada News

ಅಮೃತಸರ (ಅಟ್ಟಾರಿ), ಫೆಬ್ರವರಿ 22: ಅಫ್ಘಾನಿಸ್ತಾನದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಭಾರತವು ಗೋಧಿ ತುಂಬಿದ 50 ಟ್ರಕ್‌ಗಳನ್ನು ಮಂಗಳವಾರ ಕಳುಹಿಸಿದೆ. ಗೋಧಿ ಸಂಗ್ರಹಿಸಲು ಅಲ್ಲಿಂದ ಟ್ರಕ್‌ಗಳನ್ನು ತಂದ ಅಫ್ಘಾನಿಸ್ತಾನದ ಜನರು ಅಫ್ಘಾನಿಸ್ತಾನದ ಸಾರ್ವಜನಿಕರ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಭಾರತಕ್ಕೆ ಧನ್ಯವಾದ ಕೂಡ ಅವರು ಈ ವೇಳೆ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲಿ ಮಾನವೀಯ ನೆಲೆಯಲ್ಲಿ ಆಫ್ಘನ್ನರಿಗೆ ಸಹಾಯ ಮಾಡಲು ಭಾರತ ನಿರ್ಧರಿಸಿತ್ತು. ಆದರೆ ಟ್ರಕ್‌ಗಳು ಕಾರವಾನ್ ಪಾಕಿಸ್ತಾನದ ಮೂಲಕ ಹಾದುಹೋಗಬೇಕಾಗಿರುವುದರಿಂದ ಅದರ ಒಪ್ಪಿಗೆ ಪಡೆಯಲು ಬಹಳ ಸಮಯ ತೆಗೆದುಕೊಂಡಿತು. ಒಪ್ಪಿಗೆ ಸಿಕ್ಕ ಬಳಿಕ ಇಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ವಿಶ್ವ ಆಹಾರ ಕಾರ್ಯಕ್ರಮ ಮತ್ತು ಇತರರ ಸಮ್ಮುಖದಲ್ಲಿ ಟ್ರಕ್‌ಗಳು ಅಫ್ಘಾನಿಸ್ತಾನಕ್ಕೆ ತೆರಳಿದವು.

ಅಫ್ಘಾನ್‌ಗೆ 50,000 ಮೆಟ್ರಿಕ್ ಟನ್ ಗೋಧಿ ನೀಡಲಿದೆ ಭಾರತ ಅಫ್ಘಾನ್‌ಗೆ 50,000 ಮೆಟ್ರಿಕ್ ಟನ್ ಗೋಧಿ ನೀಡಲಿದೆ ಭಾರತ

50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಿದ ಭಾರತ

50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಿದ ಭಾರತ

ಅಫ್ಘಾನಿಸ್ತಾನವನ್ನು ತಾಲಿಬಾನ್ ಆಳುತ್ತಿದೆ. ಹೀಗಾಗಿ ಅಲ್ಲಿನ ಜನರು ಊಟವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಈ ಔದಾರ್ಯವನ್ನು ತೋರಿ ಮಂಗಳವಾರ ಭಾರತ ವೈಫಲ್ಯದಲ್ಲಿ ಬದುಕುತ್ತಿರುವ ಆಫ್ಘನ್ನರಿಗೆ ಸಹಾಯಹಸ್ತ ಚಾಚಿದೆ. ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ, ಭಾರತವು ಮಂಗಳವಾರ 50,000 ಮೆಟ್ರಿಕ್ ಟನ್ ಗೋಧಿ ತುಂಬಿದ 50 ಟ್ರಕ್‌ಗಳನ್ನು ಕಳುಹಿಸಿದೆ. ಗೋಧಿ ತುಂಬಿದ ಈ ಟ್ರಕ್‌ಗಳು ಕಾರವಾನ್ ಅಟ್ಟಾರಿ-ವಾಘಾ ಗಡಿಯ ಮೂಲಕ ಅಂದರೆ ಪಾಕಿಸ್ತಾನದ ಮೂಲಕ ಹಾದು ಅಫ್ಘಾನಿಸ್ತಾನವನ್ನು ಪ್ರವೇಶಿಸಲಿದೆ. ಈ ಮಾನವೀಯ ನೆರವಿಗೆ ಭಾರತ ಎಷ್ಟು ಪ್ರಾಮುಖ್ಯತೆ ನೀಡುತ್ತಿದೆ ಎಂದರೆ ದೇಶದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರೇ ಅಟ್ಟಾರಿ ತಲುಪಿ ಪರಿಹಾರವಾಗಿ ಕಳುಹಿಸಲಾಗುತ್ತಿರುವ ಗೋಧಿಯ ರವಾನೆಯ ನೇತೃತ್ವ ವಹಿಸಿದ್ದರು.

50 ಅಫ್ಘಾನಿ ಟ್ರಕ್‌ಗಳಲ್ಲಿ ರವಾನೆ

50 ಅಫ್ಘಾನಿ ಟ್ರಕ್‌ಗಳಲ್ಲಿ ರವಾನೆ

"ಮಾನವೀಯ ನೆರವಿಗಾಗಿ ನಾವು ಅಫ್ಘಾನಿಸ್ತಾನಕ್ಕೆ 50,000 ಟನ್ ಗೋಧಿಯನ್ನು ನೀಡುತ್ತಿದ್ದೇವೆ" ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಗೋಧಿ ತುಂಬಿದ 50 ಟ್ರಕ್‌ಗಳ ಮೊದಲ ರವಾನೆಯನ್ನು ಅಫ್ಘಾನಿಸ್ತಾನಕ್ಕೆ ರವಾನಿಸಿದರು. ಇಂದು ನಾವು 50 ಅಫ್ಘಾನಿ ಟ್ರಕ್‌ಗಳಲ್ಲಿ 2,500 ಟನ್‌ಗಳ ನಮ್ಮ ಮೊದಲ ರವಾನೆಯನ್ನು ಕಳುಹಿಸಿದ್ದೇವೆ. ಇದನ್ನು ವಿತರಿಸಲು ವಿಶ್ವ ಆಹಾರ ಕಾರ್ಯಕ್ರಮಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಭಾರತದ ನೆರವಿಗೆ ಸಂತಸಗೊಂಡ ಅಫ್ಘನ್ನರು

ಭಾರತದ ನೆರವಿಗೆ ಸಂತಸಗೊಂಡ ಅಫ್ಘನ್ನರು

ಅಫ್ಘಾನಿಸ್ತಾನದಿಂದ ಗೋಧಿ ತೆಗೆದುಕೊಂಡು ಹೋಗಲು ಬಂದಿದ್ದ ಜನರು ಭಾರತದಿಂದ ಈ ಕೊಡುಗೆಯನ್ನು ಪಡೆದ ನಂತರ ತುಂಬಾ ಸಂತೋಷಪಟ್ಟಿದ್ದಾರೆ. ಅಫ್ಘಾನಿಸ್ತಾನದ ಪ್ರಜೆಯೊಬ್ಬರು, 'ನಾವು ಅಫ್ಘಾನಿಸ್ತಾನದಿಂದ ಬಂದಿದ್ದೇವೆ... ಅಫ್ಘಾನಿಸ್ತಾನಕ್ಕೆ ಹೋಗಬೇಕು. ನನಗೆ ತುಂಬಾ ಸಂತೋಷವಾಗಿದೆ. ಈ ಉಪಕಾರವನ್ನು ಹೇಗೆ ತೀರಿಸಬೇಕು ತಿಳಿಯದು' ಎಂದಿದ್ದಾರೆ. ವಾಸ್ತವವಾಗಿ, ಕಳೆದ ವರ್ಷದ ಅಕ್ಟೋಬರ್ ಆರಂಭದಲ್ಲಿ ಭಾರತವು ಈ ಗೋಧಿಯ ರವಾನೆಯನ್ನು ಕಳುಹಿಸಲು ಪ್ರಸ್ತಾಪಿಸಿತ್ತು. ಆದರೆ ಇದನ್ನು ಸಾಗಿಸಲು ಪಾಕಿಸ್ತಾನ ತಕರಾರು ಮಾಡಿತು. ಹೀಗಾಗಿ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿತು. ಕಳೆದ ವರ್ಷ ನವೆಂಬರ್ 24 ರಂದು ಪಾಕಿಸ್ತಾನವು ಭಾರತದ ಮನವಿಗೆ ಮೊದಲ ಪ್ರತಿಕ್ರಿಯೆಯನ್ನು ನೀಡಿತ್ತು. ಇಷ್ಟು ಸಮಯದ ಬಳಿಕ ಮಾನವೀಯ ನೆರವಿಗೆ ಕಾಲ ಕೂಡಿ ಬಂದಿದೆ.

ಅಫ್ಘಾನಿಸ್ತಾನದಲ್ಲಿ ಗೋಧಿಯ ಅಗತ್ಯತೆ

ಅಫ್ಘಾನಿಸ್ತಾನದಲ್ಲಿ ಗೋಧಿಯ ಅಗತ್ಯತೆ

ಅಫ್ಘಾನಿಸ್ತಾನದಿಂದ ಗೋಧಿ ಸಾಗಿಸಲು ಬಂದ ವ್ಯಕ್ತಿಯೊಬ್ಬರು ಅಲ್ಲಿನ ಸ್ಥಿತಿಯನ್ನು ವಿವರಿಸಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಅಲ್ಲಿನ ನಾಗರಿಕರ ಸಹಾಯಕ್ಕೆ ಮುಂದಾಗಿದೆ. ಅಫ್ಘಾನಿಸ್ತಾನದಲ್ಲಿ ಗೋಧಿಯ ಅಗತ್ಯ ಬಹಳ ಇದೆ ಎಂದು ಕೆಲವರು ಹೇಳಿದ್ದಾರೆ. ಅಲ್ಲಿ ಜನರ ಬಳಿ ಹಣವಿಲ್ಲ ಮತ್ತು ಅವರು ತುಂಬಾ ಬಡವರು. ಸಹಾಯಕ್ಕಾಗಿ ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಗೋಧಿ ಸಾಗಿಸಲು ಬಂದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.

ಅಫ್ಘಾನ್ ಜನಸಂಖ್ಯೆಯ ಅರ್ಧದಷ್ಟು ಜನರಿಗಿಲಗಲ ಆಹಾರ

ಭಾರತದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಕಂಟ್ರಿ ಡೈರೆಕ್ಟರ್ ಬಿಶಾ ಪರಾಜುಲಿ ಪ್ರಕಾರ, ಈ ಸಂಸ್ಥೆಯು ಈಗಾಗಲೇ ಸುಮಾರು 7 ಮಿಲಿಯನ್ ಆಫ್ಘನ್‌ಗಳಿಗೆ ಸಹಾಯ ಮಾಡಿದೆ. ಅಫ್ಘಾನಿಸ್ತಾನದಲ್ಲಿ, ಸುಮಾರು 22 ಮಿಲಿಯನ್ ಜನರು ಧಾನ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಜನಸಂಖ್ಯೆಯು ಅಫ್ಘಾನಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಇದೆ ಎಂದಿದ್ದಾರೆ.

English summary
India has sent the first consignment of 50 wheat-laden trucks to help the starving population in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X