• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾ ಇಂಕ್‌ನಿಂದ 'ಯುಕೆ-ಇಂಡಿಯಾ ವೀಕ್ 2018'

By ಒನ್ಇಂಡಿಯಾ ಸಿಬ್ಬಂದಿ
|

ಇದೇ ಜೂನ್ 18ರಿಂದ 22ರವರೆಗೆ ಬ್ರಿಟನ್‌ನಲ್ಲಿ ಆಯೋಜಿಸಲಾಗಿರುವ ಪ್ರಥಮ ಯುಕೆ-ಇಂಡಿಯಾ ವೀಕ್, ಭಾರತ ಹಾಗೂ ಬ್ರಿಟನ್ ದೇಶಗಳ ಮಧ್ಯದ ಬಹುಕಾಲದ ಗಟ್ಟಿ ಹಾಗೂ ವಿಶಿಷ್ಟ ಬಾಂಧವ್ಯದ ಮಜಲುಗಳನ್ನು ಅನಾವರಣಗೊಳಿಸಲಿದೆ.

ಈ ಶೃಂಗ ಸಮ್ಮೇಳನದ ಅಂಗವಾಗಿ ಹಲವಾರು ವರ್ಣರಂಜಿತ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಜಗತ್ತಿನ ಗಮನಸೆಳೆಯಲಿವೆ. ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮುನ್ನೋಟ ಇಲ್ಲಿದೆ.

ಭಾರತ-ಇಂಗ್ಲೆಂಡ್‌ ಬಾಂಧವ್ಯ ಭವಿಷ್ಯದ ಸಂಬಂಧಕ್ಕೆ ರಹದಾರಿ

* ಭಾರತ-ಯುಕೆ ಸಂಬಂಧ ಸುಧಾರಣೆಯಲ್ಲಿ 100 ಪ್ರಭಾವಶಾಲಿ ವ್ಯಕ್ತಿಗಳು (ಜೂನ್ 18) : ಈ ಸಮಾರಂಭ ಸಮ್ಮೇಳನದ ಆರಂಭಿಕ ಹಂತದಲ್ಲಿ ನಡೆಯಲಿದ್ದು, ಎರಡೂ ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ 100 ಜನ ಪ್ರಭಾವಿ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು.

* 5ನೇ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್ (20-21 ಜೂನ್) : ಅತ್ಯಂತ ಪ್ರಮುಖವಾದ ಈ ಕಾರ್ಯಕ್ರಮದಲ್ಲಿ ಬ್ರೆಕ್ಸಿಟ್ ಬ್ರಿಟನ್‌ನೊಂದಿಗೆ ಭಾರತದ ಭವಿಷ್ಯದ ಕಾರ್ಯತಂತ್ರ ಆಧರಿತ ಸಂಬಂಧಗಳ ಬಗ್ಗೆ ಚರ್ಚೆ ನಡೆಯಲಿದೆ.

* ಯುಕೆ-ಇಂಡಿಯಾ ಅವಾರ್ಡ್ಸ್ 2018 (ಜೂನ್ 22) : ಜಾಗತಿಕವಾಗಿ ಭಾರತ ಮತ್ತು ಯುಕೆ ನಡುವೆ ತಮ್ಮ ವಿನೂತನ ಹಾಗೂ ವಿಶಿಷ್ಟವಾದ ಕಾರ್ಯಗಳಿಂದ ಸಂಬಂಧ ವೃದ್ಧಿಗೆ ಶ್ರಮಿಸಿದ ಬ್ರಿಟನ್ ಹಾಗೂ ಭಾರತೀಯ ಪ್ರಭಾವಿ ವ್ಯಕ್ತಿಗಳು, ಸಂಘ-ಸಂಸ್ಥೆಗಳನ್ನು ಈ ಸಮಾರಂಭದಲ್ಲಿ ಸತ್ಕರಿಸಲಾಗುವುದು.

ಐದನೇ ವಾರ್ಷಿಕ ಯುಕೆ- ಭಾರತ ನಾಯಕತ್ವ ಸಮಾವೇಶ ತಪ್ಪಿಸಿಕೊಳ್ಳಬೇಡಿ

ಯುಕೆ-ಇಂಡಿಯಾ ವೀಕ್ ಶೃಂಗಕ್ಕೆ ಚಾಲನೆ

16ನೇ ಮೇ 2018, ಲಂಡನ್ : ಜೂನ್ 18ರಿಂದ 22ರವರೆಗೆ ಜರುಗಲಿರುವ ಯುಕೆ-ಇಂಡಿಯಾ ವೀಕ್ ಶೃಂಗ ಸಭೆಯ ಆರಂಭಿಕ ಕಾರ್ಯಕ್ರಮಗಳಿಗೆ ಲಂಡನ್‌ನಲ್ಲಿ ಜೂನ್ 16ರಂದು ಚಾಲನೆ ನೀಡಲಾಯಿತು. ಜಾಗತಿಕವಾಗಿ ಪ್ರಬಲ ಶಕ್ತಿಗಳಾಗಿರುವ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ, ಭವಿಷ್ಯದ ಅವಕಾಶಗಳ ಸದುಪಯೋಗಗಳ ಕುರಿತು ಹಲವಾರು ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿವೆ.

ಇಂಡಿಯಾ ಇಂಕ್ ಸಮೂಹದ ವತಿಯಿಂದ ಚರ್ಚಾ ಸರಣಿ ಏರ್ಪಡಿಸಲಾಗಿದೆ. ಅಲ್ಲದೆ ಬ್ರೆಕ್ಸಿಟ್ ಬ್ರಿಟನ್ ಹಾಗೂ ಜಾಗತಿಕ ಭಾರತ ವಿಷಯ ಕುರಿತು 5ನೇ ವಾರ್ಷಿಕ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್ ಇದೇ ಸಂದರ್ಭದಲ್ಲಿ ಜರುಗಲಿದೆ.

ಎರಡನೇ ಅವತರಣಿಕೆಯ 'ಭಾರತ-ಯುಕೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ 100 ಪ್ರಭಾವಶಾಲಿ ವ್ಯಕ್ತಿಗಳು' ಕಾರ್ಯಕ್ರಮದೊಂದಿಗೆ ಯುಕೆ-ಇಂಡಿಯಾ ವೀಕ್ ಆರಂಭವಾಗಲಿದೆ. ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ವಿಶಿಷ್ಟ ಕೊಡುಗೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.

ಯುಕೆ-ಇಂಡಿಯಾ ವೀಕ್‌ನ ಎಲ್ಲ ಕಾರ್ಯಕ್ರಮಗಳು ಜೂನ್ 22ರಂದು ನಡೆಯಲಿರುವ ಯುಕೆ-ಇಂಡಿಯಾ ಅವಾರ್ಡ್ಸ್ ಸಮಾರಂಭದೊಂದಿಗೆ ಕೊನೆಗೊಳ್ಳಲಿವೆ. ಜಾಗತಿಕವಾಗಿ ಎರಡೂ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಕಾರಣರಾದ ದಿಗ್ಗಜರು ಈ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಲಿದ್ದಾರೆ. ವ್ಯಾಪಾರ, ರಾಜಕೀಯ, ರಾಜತಾಂತ್ರಿಕತೆ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದ 400 ಜನ ವಿಶ್ವಖ್ಯಾತಿ ಗಳಿಸಿದ ದಿಗ್ಗಜರು ಉಪಸ್ಥಿತರಿರಲಿದ್ದಾರೆ. ಜೂನ್ 22ರಂದು ಸಂಜೆ ಈ ವೈಭವೋಪೇತ ಸಮಾರಂಭ ನಡೆಯಲಿದೆ. ಯುಕೆ-ಇಂಡಿಯಾ ಅವಾರ್ಡ್ಸ್ ನ ಪ್ರಶಸ್ತಿಗಳ ನಿರ್ಣಾಯಕ ಮಂಡಳಿಯಲ್ಲಿ ವ್ಯವಹಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿಪುಣರಾದ ಹಲವಾರು ಗಣ್ಯರಿದ್ದು, ಅವರ ಪಟ್ಟಿ ಹೀಗಿದೆ:

* ಲಾರ್ಡ ಮಾರ್ಲ್ಯಾಂಡ್, ಚೇರಮನ್, ಕಾಮನ್ವೆಲ್ತ್ ಎಂಟರ್‌ಪ್ರೈಸ್ ಆಂಡ್ ಇನ್ವೆಸ್ಟ್‌ಮೆಂಟ್ ಕೌನ್ಸಿಲ್

* ಗೌರವಾನ್ವಿತ ಬ್ಯಾರಿ ಗಾರ್ಡಿನರ್, ಎಂಪಿ, ಶಾಡೊ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್‌ನ್ಯಾಷನಲ್ ಟ್ರೇಡ್

* ಪ್ರೀತಿ ಪಟೇಲ್, ಎಂಪಿ, ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್

* ಸುನೀಲ್ ಭಾರ್ತಿ ಮಿತ್ತಲ, ಸಂಸ್ಥಾಪಕ ಹಾಗೂ ಚೇರಮನ್, ಭಾರ್ತಿ ಎಂಟರ್‌ಪ್ರೈಸಸ್

* ಬರ್ಖಾ ದತ್, ಪತ್ರಕರ್ತೆ ಹಾಗೂ ಲೇಖಕಿ

* ಎಡ್ವಿನಾ ಡನ್, ಸಿಇಓ, ಸ್ಟಾರ್‌ಕೌಂಟ್

ಭಾರತ ಹಾಗೂ ಯುಕೆ ಮಧ್ಯೆ ಜಾಗತಿಕ ವ್ಯಾಪಾರ ವಲಯ, ಅಂತಾರಾಷ್ಟ್ರೀಯ ಸಂಬಂಧ ಹಾಗೂ ಆವಿಷ್ಕಾರಗಳ ವಿಷಯದಲ್ಲಿ ಸಕಾರಾತ್ಮಕ ಪರಿವರ್ತನೆಗಳ ಅವಕಾಶಗಳನ್ನು ಅನಾವರಣಗೊಳಿಸುವುದೇ ಈ ಪ್ರಥಮ ಇಂಡಿಯಾ-ಯುಕೆ ವೀಕ್ ಸಂಘಟಕರ ಪ್ರಮುಖ ಉದ್ದೇಶವಾಗಿದೆ.

ಬ್ರಿಟಿಷ್ ಇಂಡಿಯನ್ ಉದ್ಯಮಿ ಮತ್ತು ರಾಜಕೀಯ ವಿಶ್ಲೇಷಕ, ಯುಕೆ-ಇಂಡಿಯಾ ವೀಕ್ ಸಂಸ್ಥಾಪಕ ಹಾಗೂ 'ವಿನ್ನಿಂಗ್ ಪಾರ್ಟನರ್‌ಶಿಪ್-ಇಂಡಿಯಾ ಯುಕೆ ರಿಲೇಷನ್ಸ್ ಬಿಯಾಂಡ್ ಬ್ರೆಕ್ಸಿಟ್'ನ ಸಂಪಾದಕ ಮನೋಜ ಲದ್ವಾ ಹೀಗೆ ಹೇಳುತ್ತಾರೆ,

"ಜಾಗತಿಕ ಸಂಬಂಧಗಳ ಪುನರ್ ವ್ಯಾಖ್ಯಾನದ ಈ ಕಾಲಘಟ್ಟದಲ್ಲಿ ಭಾರತ ಹಾಗೂ ಯುಕೆ ಸಂಬಂಧಗಳು ನಿಕಟವಾಗಿ ಬೆಸೆದುಕೊಂಡಿವೆ. ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳ ವೃದ್ಧಿಗೆ ಇಂಡಿಯಾ-ಯುಕೆ ವೀಕ್ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಜಾಗತಿಕವಾಗಿ ಪ್ರಬಲವಾಗಿರುವ ಎರಡು ಶಕ್ತಿಗಳು ಭವಿಷ್ಯದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಚರ್ಚೆಗೆ ಇದು ವೇದಿಕೆಯಾಗಲಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಮಹತ್ತರ ಪಾತ್ರ ವಹಿಸುತ್ತಿದೆ ಹಾಗೂ ಯುಕೆ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಕುಶಲತೆಯಿಂದ ಆರಂಭಿಸುತ್ತಿದೆ. ಯುಕ್ತಿಯಿಂದ ಕೆಲಸ ಮಾಡಿದಲ್ಲಿ ಕೈಗಾರಿಕೆ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪರಿವರ್ತನೆ ಸಾಧ್ಯವಿದೆ. ಇದನ್ನು ಸಾಧಿಸಲು ಹಲವಾರು ಸವಾಲುಗಳನ್ನು ಗೆಲ್ಲಬೇಕಿದೆ. ಯುರೋಪ್ ಮಾರುಕಟ್ಟೆ ಪ್ರವೇಶಿಸಲು ಯುಕೆ ಹೆಬ್ಬಾಗಿಲು ಆಗಿ ಭಾರತಕ್ಕೆ ಅವಕಾಶ ನೀಡಬೇಕು ಹಾಗೂ ಮುಕ್ತ ವ್ಯಾಪಾರ ಕಲ್ಪಿಸಲು ಇರುವ ಅಡೆತಡೆಗಳನ್ನು ನಿವಾರಿಸಬೇಕು.

ಆರ್ಥಿಕ ಪಾಲುದಾರರಾದ ಯುಕೆ, ಇಂಡಿಯಾ ಕೇವಲ ಕೊಟ್ಟು ತೆಗೆದುಕೊಳ್ಳುವ ಸಂಬಂಧವಲ್ಲದೆ, ಜಾಗತಿಕವಾಗಿ ಬದಲಾವಣೆಯ ಹರಿಕಾರರಾಗಲು ಅವಕಾಶವಿದೆ. ಸಂಶೋಧನೆ ಹಾಗೂ ಶೈಕ್ಷಣಿಕ ರಂಗದಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ಮತ್ತಷ್ಟು ನಿಕಟ ಸಂಬಂಧ ಏರ್ಪಡಬೇಕು. ಮುಂದಿನ ಪೀಳಿಗೆಯ ಏಳಿಗೆಗಾಗಿ ನೂತನ ತಾಂತ್ರಿಕತೆ ಹಾಗೂ ಹೊಸ ಹಣ ಹರಿವಿನ ಅವಕಾಶಗಳನ್ನು ಸೃಷ್ಟಿಸಬೇಕು. ಈ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಲು ಬಯಸುವವರಿಗೆ ಇಂಡಿಯಾ-ಯುಕೆ ವೀಕ್ ಪ್ರಮುಖ ವೇದಿಕೆಯಾಗಲಿದೆ."

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Ind. announces UK-INDIA WEEK 2018. The first UK-India Week (18-22 June) will celebrate the bold and unique partnership between the nations, with an action-packed line up of events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more