ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆ

|
Google Oneindia Kannada News

ಬೀಜಿಂಗ್, ಫೆಬ್ರವರಿ 27: ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ, ಆರ್ಥಿಕ ಗುದ್ದಾಟ, ರಾಜಕೀಯ ಬಿಕ್ಕಟ್ಟಿನ ನಡುವೆ ಈಗ ಕೋವಿಡ್ ಲಸಿಕೆಯ ಸಮರವೂ ಶುರುವಾಗುತ್ತಿದೆ. ಕೋವಿಡ್ ಲಸಿಕೆ ವಿಚಾರದಲ್ಲಿ ಭಾರತ ಗಮನಾರ್ಹ ಸಾಧನೆಯನ್ನೇನೋ ಮಾಡುತ್ತಿದೆ. ಹಾಗೆಂದು ಅದು ತನ್ನ ಸಾಧನೆಯನ್ನು ಮೀರಿ ನಾಗಾಲೋಟದಲ್ಲೇನೂ ಸಾಗಿಲ್ಲ ಎಂದು ಚೀನಾ ಹೇಳಿಕೊಂಡಿದೆ.

ಅನೇಕ ದೇಶಗಳಿಗೆ ಭಾರತ ಕೋವಿಡ್ ಲಸಿಕೆ ಪೂರೈಕೆ ಮಾಡುತ್ತಿರುವುದನ್ನು ಚೀನಾ ಸ್ವಾಗತಿಸಿದೆ. ಆದರೆ ಜಗತ್ತಿನಾದ್ಯಂತ ತನ್ನ ಲಸಿಕೆ ರಾಜತಾಂತ್ರಿಕತೆಯಲ್ಲಿ ಚೀನಾವನ್ನು ಮಣಿಸಿದೆ ಎಂಬ ಭಾರತದ ಹೇಳಿಕೆಯನ್ನು ಅದು ತಳ್ಳಿಹಾಕಿದೆ.

ಚೀನಾ ಲಸಿಕೆಗೆ ತಡೆ, ಭಾರತದ ಲಸಿಕೆ ಬಳಸುತ್ತೇವೆ ಎಂದ ಶ್ರೀಲಂಕಾ ಚೀನಾ ಲಸಿಕೆಗೆ ತಡೆ, ಭಾರತದ ಲಸಿಕೆ ಬಳಸುತ್ತೇವೆ ಎಂದ ಶ್ರೀಲಂಕಾ

ಲಸಿಕೆ ರಾಜತಾಂತ್ರಿಕತೆಯಲ್ಲಿ ಭಾರತವು ಚೀನಾವನ್ನು ಸೋಲಿಸಿದೆ ಎಂಬ ವರದಿಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, 'ನಾವು ಅದನ್ನು ಸ್ವಾಗತಿಸುತ್ತೇವೆ. ಜಗತ್ತಿಗೆ ಲಸಿಕೆಗಳನ್ನು ಪೂರೈಸುವುದಕ್ಕೆ ಮತ್ತಷ್ಟು ದೇಶಗಳು, ಮುಖ್ಯವಾಗಿ ಜಾಗತಿಕ ಪ್ರಕ್ರಿಯೆಯ ನೆರವಿನೊಂದಿಗೆ ಅಭಿವೃದ್ಧಿಶೀಲ ದೇಶಗಳು ಕ್ರಮ ತೆಗೆದುಕೊಳ್ಳಲಿವೆ ಎಂದು ಆಶಯ ವ್ಯಕ್ತಪಡಿಸುತ್ತೇವೆ' ಎಂದು ಹೇಳಿದರು.

ಆಂತರಿಕವಾಗಿ ಲಸಿಕೆ ಬಳಕೆ

ಆಂತರಿಕವಾಗಿ ಲಸಿಕೆ ಬಳಕೆ

'ಇತರೆ ದೇಶಗಳಿಗೆ ಸಮರ್ಥ ರೀತಿಯಲ್ಲಿ ಲಸಿಕೆಗಳನ್ನು ಪೂರೈಸಲು ಇರುವ ಆಂತರಿಕ ತೊಂದರೆಗಳನ್ನು ಚೀನಾ ನಿವಾರಿಸಿಕೊಳ್ಳುತ್ತಿದೆ' ಎಂದು ಅವರು ತನ್ನ 1.4 ಬಿಲಿಯನ್ ಜನಸಂಖ್ಯೆಗೆ ಮೊದಲು ಲಸಿಕೆಗಳನ್ನು ಪೂರೈಸಬೇಕಾದ ತನ್ನವೇ ಅಗತ್ಯಗಳನ್ನು ನೆನಪಿಸಿದರು.

53 ದೇಶಗಳಿಗೆ ಚೀನಾ ಲಸಿಕೆ

53 ದೇಶಗಳಿಗೆ ಚೀನಾ ಲಸಿಕೆ

ಚೀನಾವು 53 ದೇಶಗಳಿಗೆ ಲಸಿಕೆಗಳನ್ನು ಒದಗಿಸುತ್ತಿದೆ. ಜತೆಗೆ 27 ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುತ್ತಿದೆ ಎಂದು ಪುನರುಚ್ಚರಿಸಿದರು. ಕೆಲವು ದೇಶಗಳಿಗೆ ಚೀನಾ ಭರವಸೆ ನೀಡಿರುವಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಇನ್ನೂ ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲ

ಕೋವ್ಯಾಕ್ಸ್ ಕಾರ್ಯಕ್ರಮದಲ್ಲಿ ಭಾರತ

ಕೋವ್ಯಾಕ್ಸ್ ಕಾರ್ಯಕ್ರಮದಲ್ಲಿ ಭಾರತ

ವಿಶ್ವಸಂಸ್ಥೆಯ ಬೆಂಬಲವಿರುವ ಕೋವ್ಯಾಕ್ಸ್ ಲಸಿಕೆ ಕಾರ್ಯಕ್ರಮಕ್ಕೆ 10 ಮಿಲಿಯನ್ ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಚೀನಾ ತಿಳಿಸಿತ್ತು. ಆದರೆ ಕೋವ್ಯಾಕ್ಸ್ ಲಸಿಕೆಯ ಮೊದಲ ಪೂರೈಕೆಗಳು ಭಾರತದ ಸೆರಮ್ ಸಂಸ್ಥೆಯ ಮೂಲಕ ಘಾನಾಕ್ಕೆ ನಡೆದಿತ್ತು. ಕೋವ್ಯಾಕ್ಸ್ ಕಾರ್ಯಕ್ರಮದಡಿ ಘಾನಾಕ್ಕೆ ಭಾರತವು ಮೊದಲ ಹಂತದಲ್ಲಿ ಆರು ಲಕ್ಷ ಕೋವಿಡ್ ಲಸಿಕೆಗಳನ್ನು ಕಳುಹಿಸಿದೆ.

ಚೀನಾವನ್ನು ಹಿಂದಿಕ್ಕಿದ ಭಾರತ

ಚೀನಾವನ್ನು ಹಿಂದಿಕ್ಕಿದ ಭಾರತ

ಅಭಿವೃದ್ಧಿಶೀಲ ದೇಶಗಳಲ್ಲಿ ರಾಜಕೀಯ ಪ್ರಭಾವವನ್ನು ಬೀರುವ ಸಮರದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಭಾರತದಲ್ಲಿನ ಅಧಿಕ ಲಸಿಕೆ ಉತ್ಪಾದನಾ ಸಾಮರ್ಥ್ಯವು ಇದಕ್ಕೆ ನೆರವಾಗಿದೆ. ಆರಂಭದಲ್ಲಿ ಚೀನಾ ಮುಂಚೂಣಿಯಲ್ಲಿತ್ತು. ಅದು ಕಳೆದ ವರ್ಷ ಆಂತರಿಕ ಕೋವಿಡ್ ವೈರಸ್ ಹರಡುವಿಕೆಯನ್ನು ನಿಯಂತ್ರಿಸಿತ್ತು. ಆ ಸಮಯದಲ್ಲಿ ಭಾರತದಲ್ಲಿ ದಿನಕ್ಕೆ ಲಕ್ಷದ ಸಮೀಪ ಪ್ರಕರಣಗಳು ವರದಿಯಾಗುತ್ತಿದ್ದವು.

ಭಾರತಕ್ಕೆ ಲಂಕಾ ಕೃತಜ್ಞತೆ

ಭಾರತಕ್ಕೆ ಲಂಕಾ ಕೃತಜ್ಞತೆ

ಈ ನಡುವೆ ಚೇತರಿಸಿಕೊಂಡ ಭಾರತವು ನೆರೆಯ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಿಗೆ ಶೀಘ್ರವೇ ಲಸಿಕೆಗಳನ್ನು ಉಚಿತವಾಗಿ ಪೂರೈಕೆ ಮಾಡಿತ್ತು. ಭಾರತ ನೀಡಿದ ಕಾಣಿಕೆಯಿಂದಾಗಿಯೇ ಶ್ರೀಲಂಕಾವು ತಕ್ಷಣವೇ ಲಸಿಕೆ ಕಾರ್ಯಕ್ರಮ ಆರಂಭಿಸಲು ಸಾಧ್ಯವಾಯಿತು. ಇದರಿಂದ ಶ್ರೀಲಂಕನ್ನರು ಭಾರತಕ್ಕೆ ಕೃತಜ್ಞರಾಗಿರುವುದಾಗಿ ಲಂಕಾ ಸಂಸದ ಎರಾನ್ ವಿಕ್ರಮರತ್ನೆ ಹೇಳಿದ್ದರು. ಚೀನಾ ನೀಡಿದ ಲಸಿಕೆಗಳ ಬದಲು ಭಾರತದ ಲಸಿಕೆಗಳನ್ನೇ ಬಳಸುವುದಾಗಿ ಶುಕ್ರವಾರ ಶ್ರೀಲಂಕಾ ಹೇಳಿಕೆ ನೀಡಿತ್ತು.

English summary
China welcomed India's Covid-19 vaccine supplies to countries, but plays down reports that India has beaten Beijing in its vaccine diplomacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X